More

    ಯಾಕೆ ಎಲ್ಲರೂ ಮತ ಚಲಾಯಿಸಬೇಕು?; ಮತದಾನ ಕಡಿಮೆಯಾದಷ್ಟೂ ಆಗುವ ಅಪಾಯ ಏನು?

    ಬೆಂಗಳೂರು: ರಾಜ್ಯದ ಜನಸಂಖ್ಯೆ 6,95,99,762 ಕೋಟಿ. ರಾಜ್ಯದಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 224. ಅಂದರೆ ಪ್ರತಿ ಕ್ಷೇತ್ರದಲ್ಲಿನ ಸರಾಸರಿ ಜನಸಂಖ್ಯೆ 3,10,713.

    ಹಾಗೆಯೇ, ರಾಜ್ಯದಲ್ಲಿನ ಮತದಾರರ ಸಂಖ್ಯೆ 5,31,33,054 ಕೋಟಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ಮತದಾನ, ಶೇ. 71.91. ಸಾಮಾನ್ಯವಾಗಿ ನಮ್ಮಲ್ಲಿ ಆಗುವ ಮತದಾನ ಹೆಚ್ಚೆಂದರೆ ಶೇ. 75 ಮಾತ್ರ. ಹಾಗಾಗಿ 5.31 ಕೋಟಿಯ ಶೇ. 75, ಎಂದರೆ 3,98,49,790 ಮಂದಿ ಮಾತ್ರ ಮತ ಚಲಾಯಿಸುತ್ತಾರೆ. ಅಂದರೆ ಒಂದು ಕ್ಷೇತ್ರದಲ್ಲಿ ಮತ ಚಲಾಯಿಸುವವರ ಸರಾಸರಿ ಪ್ರಮಾಣ 1,77,900.

    ಇದನ್ನೂ ಓದಿ: ಮತ ಚಲಾಯಿಸಿದವರಿಗೆ ಉಚಿತ ತಿಂಡಿ: ಹೊಟೇಲಿಗರ ಸಂಘಕ್ಕೆ ಹೈಕೋರ್ಟ್​ನಿಂದಲೇ ಸಿಕ್ತು ಅವಕಾಶ

    ಅದರರ್ಥ 3,10,713 ಜನರನ್ನು ಪ್ರತಿನಿಧಿಸುವ ಒಬ್ಬ ಶಾಸಕನನ್ನು 1,77,900 ಮಂದಿ ಆರಿಸಿರುತ್ತಾರೆ. ಅರ್ಥಾತ್​ 6.95 ಕೋಟಿ ಜನರಿರುವ ರಾಜ್ಯದಲ್ಲಿನ ಜನಪ್ರತಿನಿಧಿಗಳನ್ನು 3.98 ಕೋಟಿ ಜನ (ರಾಜ್ಯದ 57.26%) ಆರಿಸುತ್ತಾರೆ.

    ಅಂದರೆ 2.97 ಕೋಟಿ ಜನ ಯಾರೋ ಆರಿಸಿದ ನಾಯಕರಿಂದ ಆಳಿಸಿಕೊಳ್ಳುತ್ತಾರೆ. ಅದರಲ್ಲೂ ಶೇ. 57.26 ಮಂದಿ ನಿರ್ಣಾಯಕರಾಗುವುದು ಶೇ.75 ಮತದಾನ ಆದಾಗ ಮಾತ್ರ. ಶೇಕಡಾವಾರು ಮತದಾನ ಇನ್ನೂ ಕಡಿಮೆಯಾದರೆ ಅರ್ಧಕ್ಕಿಂತಲೂ ಕಡಿಮೆ ಜನ ರಾಜ್ಯದ ಭವಿಷ್ಯ ನಿರ್ಧರಿಸಿದಂತಾಗುತ್ತದೆ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಹೀಗಾಗಿ ಯಾರು ಯಾವ ಪಕ್ಷಕ್ಕೆ ಮತ ಚಲಾಯಿಸಿದರು ಎಂಬುವುದಕ್ಕಿಂತ ಎಲ್ಲರೂ ಮತ ಚಲಾಯಿಸುವುದು ಅತಿಮುಖ್ಯ. ಮತದಾನ ಹೆಚ್ಚಾದಷ್ಟೂ ಗೆಲುವಿನ ನಿರ್ಣಯ ಸಮಂಜಸವಾಗಿರುತ್ತದೆ ಮಾತ್ರವಲ್ಲ, ಆಮಿಷದ ವೋಟುಗಳ ಪ್ರಭಾವ ಕೂಡ ತಗ್ಗುತ್ತದೆ. ಆದ್ದರಿಂದ ಮತದಾರರ ಪೈಕಿ ಎಲ್ಲರೂ ನಾಳೆ ತಪ್ಪದೇ ಮತ ಚಲಾಯಿಸುವುದು ರಾಜ್ಯಕ್ಕೇ ಹಿತ.

    ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts