More

    ಮತ ಚಲಾಯಿಸಿದವರಿಗೆ ಉಚಿತ ತಿಂಡಿ: ಹೊಟೇಲಿಗರ ಸಂಘಕ್ಕೆ ಹೈಕೋರ್ಟ್​ನಿಂದಲೇ ಸಿಕ್ತು ಅವಕಾಶ

    ಬೆಂಗಳೂರು: ಮತದಾನ ಜಾಗೃತಿ ಹಾಗೂ ಮತ ಚಲಾಯಿಸುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಹೋಟೆಲ್​ನವರು ಮತದಾರರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ತಿಂಡಿ ನೀಡಲು ಮುಂದಾಗಿದ್ದಕ್ಕೆ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿದ್ದು, ಕೊನೆಗೂ ಹೋಟೆಲ್ ಮಾಲೀಕರ ಉಚಿತ/ರಿಯಾಯಿತಿ ದರದ ತಿಂಡಿ ನೀಡಲು ಅವಕಾಶ ಸಿಕ್ಕಿದೆ.

    ಇದನ್ನೂ ಓದಿ: ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?

    ನಾಳೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಬೇಕು ಎಂಬ ಸದುದ್ದೇಶದಿಂದ ಬೆಂಗಳೂರಿನ ಎರಡು ಹೋಟೆಲ್​ನವರು ಮತದಾರರಿಗೆ ಪ್ರೋತ್ಸಾಹಕರವಾಗಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ತಿಂಡಿತಿನಿಸು ನೀಡುವ ಘೋಷಣೆ ಮಾಡಿದ್ದರು. ಆದರೆ ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಒಂದು ವೇಳೆ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ಮತದಾರರಿಗೆ ತಿಂಡಿತಿನಿಸು ನೀಡಿದರೆ ಕಾನೂನುಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದರು. ಹಾಗೆಯೇ ಬಿಬಿಎಂಪಿ ಕೂಡ ಕಾನೂನುಕ್ರಮದ ಎಚ್ಚರಿಕೆ ನೀಡಿತ್ತು.

    ಇದನ್ನೂ ಓದಿ: ಮತದಾನ ಮಾಡಿದವರಿಗೆ ಉಚಿತ ಆಹಾರ; ಚುನಾವಣಾ ಆಯೋಗದಿಂದ ಖಡಕ್​ ಸೂಚನೆ

    ಇದನ್ನು ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್​ ಹೋಟೆಲ್ ಮಾಲೀಕರ ಪರವಾಗಿ ನಿಂತಿದೆ. ಮಾತ್ರವಲ್ಲ, ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹಕರವಾಗಿ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ತಿಂಡಿತಿನಿಸು ನೀಡಲು ಅವಕಾಶ ಮಾಡಿಕೊಟ್ಟಿದೆ. ಎಚ್ಚರಿಕೆ ಕ್ರಮದ ಬಿಬಿಎಂಪಿ ಆದೇಶವನ್ನು ನ್ಯಾ.ಶಿವಶಂಕರೇಗೌಡ ಅವರು ರದ್ದು ಮಾಡಿ ಈ ಮೇಲಿನ ಆದೇಶ ನೀಡಿದ್ದಾರೆ.

    ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts