ಸಿನಿಮಾ

ಮತದಾನ ಮಾಡಿದವರಿಗೆ ಉಚಿತ ಆಹಾರ; ಚುನಾವಣಾ ಆಯೋಗದಿಂದ ಖಡಕ್​ ಸೂಚನೆ

ಬೆಂಗಳೂರು: ರಾಜ್ಯ ವಿಧಾನಸಬೆ ಚುನಾವಣೆಯ ಮತದಾನಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದ್ದು ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಮತದಾನ ಜಾಗೃತಿಯಲ್ಲಿ ತೊಡಗಿವೆ.

ಕಠಿಣ ಕ್ರಮದ ಎಚ್ಚರಿಕೆ

ಅದಕ್ಕೆ ಪೂರವೆಂಬಂತೆ ಮೇ 10ರಂದು ಮತದಾನ ಮಾಡಿ ಅದರ ಗುರುತನ್ನು ತೊರಿಸಿದವರಿಗೆ ಉಚಿತ ಆಹಾರ ನೀಡಲಾಗುವುದು ಎಂದು ಬೆಂಗಳೂರಿನ ಎರಡು ಹೋಟೆಲ್ ಮಾಲೀಕರು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದರು.

election vote 1

ಇದನ್ನೂ ಓದಿ: ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ, ಹಿಂದೆಂದೂ ಕೈಗೊಳ್ಳದಷ್ಟು ಭಾರಿ ಭದ್ರತೆ: ಅಲೋಕ್​ ಕುಮಾರ್​

ಈ ಕುರಿತು ರಾಷ್ಟ್ರೀಯ ಚುನಾವಣಾ ಆಯೋಗವು ಈ ಎರಡು ಹೋಟೆಲ್​ಗಳಿಗೆ ಎಚ್ಚರಿಕೆ ನೀಡಿದ್ದು ಮತದಾರರಿಗೆ ಉಚಿತ ಆಹಾರ ನೀಡಿದ್ದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನೀತಿ ಸಂಹಿತೆ ಉಲ್ಲಂಘನೆ

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್​ ಗಿರಿನಾಥ್​ ಮತದಾನದ ದಿನದಂದು ಉಚಿತವಾಗಿ ಆಹಾರ, ಪಾನೀಯಗಳನ್ನು ವಿತರಿಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

ಒಂದು ವೇಳೆ ನಿಯಮ ಬಾಹಿರವಾಗಿ ಆಹಾರ ಅಥವಾ ತಂಪು ಪಾನೀಯ ವಿತರಿಸಿದ್ದಲ್ಲಿ ಅಂತಹವರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್