More

    ದೋಸೆ ತಿನ್ನಲು ಹೋಗಿ ಪೇಚಿಗೆ ಸಿಲುಕಿದ ಅಧಿಕಾರಿ; ಮುಂದೇನಾಯ್ತು?

    ಭುಬನೇಶ್ವರ: ನಾವು ಪ್ರತಿನಿತ್ಯ ಮೋಸ ಮಾಡುವವರನ್ನು ಹಾಗೂ ಹೋಗುವವರನ್ನು ನೋಡಿರುತ್ತೇವೆ. ಕೆಲವೊಮ್ಮೆ ಜನರು ಇದರಿಂದ ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿರುವುದನ್ನು ಕೇಳಿರುತ್ತೇವೆ.

    ವಂಚಕರು ಕೆಲವೊಮ್ಮೆ ಸರ್ಕಾರಿ ಅಧಿಕಾರಿಗಳಿಗೂ ಸಹ ಪಂಗನಾಮ ಹಾಕುತ್ತಾರೆ. ಇದೀಗ ಇದಕ್ಕೆ ಪೂರವೆಂಬಂತೆ ವ್ಯಕ್ತಿ ಓರ್ವ ಐಪಿಎಸ್​ ಅಧಿಕಾರಿ ಒಬ್ಬರಿಗೆ ಈ ರೀತಿ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಾಡುತ್ತಿದೆ.

    ಓಡಿಶಾ ಕೇಡರ್​ನ ಐಪಿಎಸ್​ ಅಧಿಕಾರಿ ಅರುಣ್​ ಬೋತ್ರಾ ಅವರು ಇತ್ತೀಚಿಗೆ ಹೋಟೆಲ್​ ಒಂದಕ್ಕೆ ಭೇಟಿ ನೀಡಿದ್ದ ವೇಳೆ ಘಟನೆ ನಡೆದಿದ್ದ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಹೋಟೆಲ್​ನಲ್ಲಿ ಮೋಸ

    ಇತ್ತೀಚಿಗೆ ಅರುಣ್​ ಬೋತ್ರಾ ಅವರು ದೋಸೆ ಸವಿಯಲೆಂದು ಹೋಟೆಲ್​ ಒಂದಕ್ಕೆ ಭೇಟಿ ನೀಡಿದ್ದರು. ಆಹಾರ ಸೇವಿಸಿದ ನಂತರ ಬಿಲ್​ ನೋಡಿ ಅಧಿಕಾರಿ ಶಾಕ್​ ಆಗಿದ್ದು ಈ ಬಗ್ಗೆ ಹೋಟೆಲ್​ನವರಿಗೆ ತಿಳಿಸಿದ್ದಾರೆ.

    ತಾವು ತೆಗೆದುಕೊಂಡಿದ್ದು ಒಂದು ದೋಸೆ ಆದರೆ, ಇಲ್ಲಿ ಎರಡಕ್ಕೆ ಬಿಲ್​ ಹಾಕಲಾಗಿದೆ ಎಂದು ಹೋಟೆಲ್​ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ ಮತ್ತು ಈ ಬಗ್ಗೆ ವಿವರಣೆಯನ್ನು ಕೇಳಿದ್ದಾರೆ.

    ಇದನ್ನೂ ಓದಿ: EPFO ಅಧಿಕಾರಿ ಸೋಗಿನಲ್ಲಿ ಶಿಕ್ಷಕಿಯಿಂದ 80,000 ಸಾವಿರ ರೂ. ದೋಚಿದ ಖದೀಮ!

    ಅಧಿಕಾರಿಯ ಸೋಗಿನಲ್ಲಿ ಕೃತ್ಯ

    ಈ ವೇಳೆ ಇದಕ್ಕೆ ಉತ್ತರಿಸಿದ ಸಿಬ್ಬಂದಿ ತಮ್ಮ ಜೊತೆ ಬಂದಿದ್ದ ವ್ಯಕ್ತಿ ತಾನು ಅಧಿಕಾರಿಯ ಜೊತೆ ಬಂದಿರುವುದಾಗಿ ಹೇಳಿದ್ದರು ಬಳಿಕ ನೀವೇ ಬಿಲ್​ ಪಾವತಿಸುವುದಾಗಿ ಹೇಳಿ ಹೊರಟು ಹೋಗಿದ್ದಾರೆ.

    ಇದನ್ನು ಕಂಡು ನಿಬ್ಬೆರಗಾದ ಅಧಿಕಾರಿ ತಮ್ಮ ಜೊತೆ ಯಾರು ಬಂದಿಲ್ಲ ಮತ್ತು ತಾವು ಒಬ್ಬರೇ ಬಂದಿದ್ದಾಗಿ ಹೇಳಿ ಅರುಣ್​ ಬೋತ್ರಾ ಅವರು ಎರಡು ದೋಸೆ ಬಿಲ್​ಗಳನ್ನು ಪಾವತಿಸಿದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts