More

    EPFO ಅಧಿಕಾರಿ ಸೋಗಿನಲ್ಲಿ ಶಿಕ್ಷಕಿಯಿಂದ 80,000 ಸಾವಿರ ರೂ. ದೋಚಿದ ಖದೀಮ!

    ಮುಂಬೈ: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

    ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು ಶಿಕ್ಷಕರೊಬ್ಬರು ಬರೋಬ್ಬರಿ 80,000 ಸಾವಿರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.

    ಅಧಿಕಾರಿಯ ಸೋಗಿನಲ್ಲಿ ವಂಚನೆ

    ನವಿ ಮುಂಬೈನಲ್ಲಿ ವಾಸವಿರುವ 32 ವರ್ಷದ ಶಿಕ್ಷಕಿ ಒಬ್ಬರಿಗೆ ಕರೆ ಮಾಡಿರುವ ವಂಚಕರು ತಾವು ಕಾರ್ಮಿಕರ ಭವಿಷ್ಯ ನಿಧಿ(EPFO)ಯ ಅಧಿಕಾರಿಗಳು ಎಂದು ಹೇಳಿ ವಂಚಿಸಿದ್ದಾರೆ.

    EPFO

    ಸುದ್ದಿ ಮೂಲಗಳ ಪ್ರಕಾರ ಭವಿಷ್ಯ ನಿಧಿ ಅಧಿಕಾರಿಯ ನಂಬರ್​ಗಾಗಿ ಆನ್​ಲೈನ್​ನಲ್ಲಿ ಮಹಿಳೆ ಹುಡುಕಾಡುತ್ತಿದ್ದ ವೇಳೆ ಕರೆ ಮಾಡಿದ ವಂಚಕರು ತಾವು EPFO ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಶಿಕ್ಷಕಿಯನ್ನು ನಂಬಿಸಿದ್ದಾರೆ.

    ಇದನ್ನೂ ಓದಿ: VIDEO| ಕುಸ್ತಿಪಟುಗಳನ್ನು ಭೇಟಿ ಮಾಡಲು ಮುಂದಾದ ರೈತರು; ಜಂತರ್​ ಮಂತರ್​ನಲ್ಲಿ ಹೈಡ್ರಾಮಾ

    ಅನಧಿಕೃತ ವ್ಯವಹಾರ

    ವಂಚಕರ ಮಾತನ್ನು ನಂಬಿದ್ದ ಶಿಕ್ಷಕಿ ಖದೀಮರು ಹೇಳಿದ AirDroid ಆ್ಯಪ್​ಅನ್ನು ಇನ್ಸ್ಟಾಲ್​ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಆ ಆ್ಯಪ್​ ಮೂಲಕ ಮಹಿಳೆಯ ಮೊಬೈಲ್​ಗೆ ಲಗ್ಗೆ ಇಟ್ಟಿದ್ದಾರೆ.

    ಬಳಿಕ ಸಂತ್ರಸ್ತ ಶಿಕ್ಷಕಿಯ ಫೋನಿನಲ್ಲಿರುವ ಸೂಕ್ಷ್ಮ ದಾಖಲೆಗಳ ವಿವರ ಪಡೆದ ಖದೀಮರು 16 ಭಾರೀ ಅನಧಿಕೃತ ವ್ಯವಹಾರಗಳನನ್ನು ಮಾಡಿದ್ದಾರೆ ಮತ್ತು ಮಹಿಳೆಯ ಬ್ಯಾಂಕ್​ ಖಾತೆಯಲ್ಲಿದ್ದ 80,000 ಸಾವಿರ ರೂಪಾಯಿಯನ್ನು ದೋಚಿದ್ದಾರೆ.

    ಘಟನೆ ಸಂಬಂಧ ಮಹಿಳೆ ನವಿ ಮುಂಬೈನಲ್ಲಿರುವ NRI ಕೋಸ್ಟಲ್​ ಪೋಲಿಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts