More

    ಯೂಟ್ಯೂಬ್​ನಲ್ಲಿ ಲೈಕ್​ ಮಾಡಿ ಹಣ ಗಳಿಸಿ; ಆಫರ್​ ನೀಡಿ ಟ್ರೋಲ್​ ಆದ ಖದೀಮ

    ಬೆಂಗಳೂರು: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

    ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು ಮಹಿಳೆ ಒಬ್ಬರು ಆನ್​ಲೈನ್​ನಲ್ಲಿ ವಂಚಕನೊಬ್ಬನಿಗೆ ಸರಿಯಾಗಿ ತಿರುಗೇಟು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ವೈರಲ್​ ಆಯಿತು ಪೋಸ್ಟ್​

    ಬೆಂಗಳೂರು ಮೂಲದ ಸ್ಟಾರ್ಟ್​​ಅಪ್​ ಸಹ ಸಂಸ್ಥಅಪಕಿ ಉದಿತಾ ಪಾಲ್​ ಎಂಬುವವರಿಗೆ ಆನ್​ಲೈನ್​ನಲ್ಲಿ ವಂಚಕ ಓರ್ವ ಮೋಸ ಮಾಡಲು ಯತ್ನಿಸಿದರ ಕುರಿತು ಹೇಳಿಕೊಂಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಉದಿತಾ ವಂಚಕನಿಗೆ ಚಳಿ ಬಿಡಿಸಿರುವ ಕುರಿತು ಹಂಚಿಕೊಂಡಿದ್ದಾರೆ ಮತ್ತು ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಯೂಟ್ಯೂಬ್​ನಲ್ಲಿ ಲೈಕ್​ ಮಾಡಿ ಹಣ ಗಳಿಸಿ

    ಕೆಲಸ ಹುಡುಕುತ್ತಿರುವವರಿಗೆ ಗಾಳ ಹಾಕುವ ವಂಚಕ/ವಂಚಕಿ ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಲೈಕ್​ ಮಾಡಿ ಸಂಪಾದಿಸಬಹುದು ಎಂದು ಹೇಳಿದ್ದಾನೆ.

    ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಲೈಕ್​ ಮಾಡಿ ಹಣ ಗಳಿಸಿ; 7 ಲಕ್ಷ ರೂ. ಕಳೆದುಕೊಂಡ ಮಹಿಳೆ!

    ಇದಕ್ಕೆ ಪ್ರತಿಕ್ರಿಯಿಸಿದ ಉದಿತಾ ವಂಚಕರಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತ ಹೋಗಿದ್ದಾರೆ ಮತ್ತು ಅವರ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ನಂತರ ವಂಚಕನಿಗೆ ಒಂದು ಸ್ಕೀನ್​ಶಾಟ್​ ಕಳುಹಿಸಿ ವಂಚಿಸಲು ಯತ್ನಿಸಿದ ಮೂರ್ಖನನ್ನು ಹಿಡಿದೆ ಎಂದು ಹೇಳಿದ್ದಾರೆ.

    ಇದೀಗ ಇವರ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ವಂಚಕರಿಗೆ ಇನ್ನು ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts