More

  ಯೂಟ್ಯೂಬ್​ನಲ್ಲಿ ಲೈಕ್​ ಮಾಡಿ ಹಣ ಗಳಿಸಿ; 7 ಲಕ್ಷ ರೂ. ಕಳೆದುಕೊಂಡ ಮಹಿಳೆ!

  ಮುಂಬೈ: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

  ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು ಮಹಿಳೆ ಒಬ್ಬರು ಬರೋಬ್ಬರಿ 7 ಲಕ್ಷ ರೂಪಾಯಿಗಳನ್ನು ಕಳೆದುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

  ಪಾರ್ಟ್​ ಟೈಮ್​ ಕೆಲಸ ಹುಡುಕುವವರೆ ಎಚ್ಚರ

  ಮುಂಬೈ ಮಲಾಡ್​ ಮೂಲದ 29ವರ್ಷದ ಮಹಿಳೆ ಹೆರಿಗೆ ರಜೆಯಲ್ಲಿದ್ದ ಕಾರಣ ಆನ್​ಲೈನ್​ನಲ್ಲಿ ಪಾರ್ಟ್​ ಟೈಮ್​ ಜಾಬ್​ ಹುಡುಕುತ್ತಿದ್ದರು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ವಂಚಕ/ವಂಚಕಿ ಮಹಿಳೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ.

  ವೃತ್ತಿಯಲ್ಲಿ ಆರ್ಕಿಟೆಕ್ಟ್​ ಆಗಿರುವ ಮಹಿಳೆ ಹೆರಿಗೆ ರಜೆಯಲ್ಲಿದ್ದ ಕಾರಣ ಪ್ರಮುಖ ಜಾಬ್​ ಪೋರ್ಟ್​ಲ್​ಗಳಲ್ಲಿ ಪಾರ್ಟ್​ ಟೈಮ್​ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ/ವಂಚಕಿ ಮಹಿಳೆಯನ್ನು ಸಂಪರ್ಕಿಸಿ ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಲೈಕ್​ ಮಾಡಿ ಸಂಪಾದಿಸಬಹುದು ಎಂದು ಹೇಳಿದ್ದಾನೆ.

  Cyber Fraud

  ಲೈಕ್​ ಮಾಡಿ ಹಣ ಗಳಿಸಿ

  ವಂಚಕ/ವಂಚಕಿ ಮಾತನ್ನು ನಂಬಿದ ಮಹಿಳೆ ಮೊದಲು ವಂವಕರು ಕಳುಹಿಸಿದ ಲಿಂಕ್​ ಮೂಲಕ ಯೂಟ್ಯೂಬ್​ ವಿಡಿಯೋಗಳನ್ನು ಲೈಕ್​ ಮಾಡಿದ್ದಾರೆ. ಲಯಕ್​ ಮಾಡಿದಂತೆ ಮಹಿಳೆಗೆ ವಂಚಕರು 50 ರೂಪಾಯಿಯಂತೆ ಹಣ ಸಂದಾಯ ಮಾಡಿ ವಿಶ್ವಾಸ ಗಳಿಸಿದ್ದಾರೆ.

  ಇದನ್ನೂ ಓದಿ: ಸೇನಾ ಕಾರ್ಯಾಚರಣೆ ವೇಳೆ ಉಗ್ರರ ದಾಳಿ; ಇಬ್ಬರು ಯೋಧರು ಹುತಾತ್ಮ

  ಇದಾದ ಬಳಿಕ ಮಹಿಳೆಯನ್ನು ಟೆಲಿಗ್ರಾಂ ಗ್ರೂಪ್​ ಒಂದಕ್ಕೆ ಆ್ಯಡ್​ ಮಾಡಿ ಮೊತ್ತವನ್ನು ಪಾವತಿಸಿದ್ದಲ್ಲಿ ದುಪ್ಪಟ್ಟು ಹಣ ವಾಪಸ್​ ಆಗುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಮೊದಲಿಗೆ 1,000 ಸಾವಿರ ರೂಪಾಯಿ ಹಾಕಿ 1,600 ರೂಪಾಯಿಯನ್ನು ವಾಪಸ್​ ಪಡೆದಿದ್ದಾರೆ.

  ಬಳಿಕ 5,000 ಸಾವಿರ ರೂಪಾಯಿ ಹೂಡಿಕೆ ಮಾಡುವಂತೆ ವಂಚಕರು ಸೂಚಿಸಿದ್ದಾರೆ. ಆದರೆ, ಮೊದಲು ಪಾವತಿಸಿದ ಮೊತ್ತ ಹಿಂತಿರುಗಿಲ್ಲ ಎಂದು ಮಹಿಳೆ ಹೇಳಿದಾಗ ಅದನ್ನು ಹಿಂಪಡೆಯಬೇಕೆಂದರೆ 30,000 ಸಾವಿರ ರೂಪಾಯಿ ಮೊತ್ತವನ್ನು ಪಾವತಿಸುವಂತೆ ಸೂಚಿಸಿದ್ದಾರೆ.

  Youtube

  ಪಂಗನಾಮ ಹಾಕಿದ ವಂಚಕರು

  ಈ ಹಿಂದೆ ಪಾವತಿಸಿದ ಹಣ ವಾಪಸ್​ ಆಗಬೇಕಂದರೆ ದುಬಾರಿ ಮೊತ್ತವನ್ನು ಪಾವತಿಸಬೇಕು ಎಂದು ಹೇಳಿ ಮಹಿಳೆಯ ಬಳಿ 7.16 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿ ವಂಚಿಸಿದ್ದಾರೆ.

  ಇದಾದ ಕೆಲ ಹೊತ್ತಿನ ಬಳಿಕ ತಾನು ಮೋಸ ಹೋಗಿರುವ ಕುರಿತು ಅರಿತ ಮಹಿಳೆ ತಾನು ಪಾವತಿಸಿದ ಮೊತ್ತವನ್ನು ಹಿಂತಿರುಗಿಸುವಂತೆ ವಂಚಕರಿಗೆ ಹೇಳಿದ್ದಾಳೆ. ಇಲ್ಲವಾದ್ಲಲಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಕ್ಕೆ ಆಕೆಯನ್ನು ಟೆಲಿಗ್ರಾಂ ಗ್ರೂಪ್​ನಿಂದ ತೆಗೆದು ಹಾಕಿದ್ದಾರೆ.

  ನಡೆದ ವಿಚಾರವನ್ನು ತನ್ನ ಪತಿಯ ಬಳಿ ಹೇಳಿಕೊಂಡ ಮಹಿಳೆ ನಂತರ ಕುರಾರ್​ ವಿಲೇಜ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಂಚಕರ ವಿರುದ್ಧ ಭಾರತ ದಂಡ ಸಂಹಿತೆ 419, 420(ವಂಚನೆ), ಮಾಹಿತಿ ತಂತ್ರಜ್ಞಾನ ಕಾಯ್ದೆ 66C, 66D ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts