More

    ಕಾಂಗ್ರೆಸ್​ ಆತಂಕವಾದ, ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ನೀಡಿದೆ: ಪ್ರಧಾನಿ ಮೋದಿ ವಾಗ್ದಾಳಿ

    ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ದಿನಕ್ಕೆ ಕೆಲವು ದಿನಗಳು ಬಾಕಿಯಿದ್ದು ಕದನ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

    ಇನ್ನು ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆಯನ್ನುಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

    ಭ್ರಷ್ಟವನ್ನಾಗಿ ಮಾಡಿದ್ದಾರೆ

    ಕನ್ನಡದಲ್ಲಿ ಮಾತು ಆಂರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಕನಕದುರ್ಗಮ್ಮ, ಕುಮಾರಸ್ವಾಮಿ ಮಂದಿರಕ್ಕೆ ನನ್ನ ನಮಸ್ಕಾರಗಳು. ಇಲ್ಲಿ ಹನುಮಂತ ದೇವರು ಹುಲಿಕುಂಟೆ ರಾಯನ ರೂಪದಲ್ಲಿ ವಿರಾಜಮಾನರಾಗಿದ್ದಾರೆ. ನಿನ್ನೆ ಸುರಿದ ಮಳೆಯನ್ನು ಲೆಕ್ಕಿಸದೆ ನೀವು ಬಿಜೆಪಿಯನ್ನು ಆಶೀರ್ವಾದಿಸಲು ಬಂದಿರುವುದಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ.

    ಬಂಧು ಭಗಿಣಿಯರೇ ಸ್ವಾತಂತ್ರ್ಯದ ನಂತರ ದೇಶದಲ್ಲಿ ಕಾಂಗ್ರೆಸ್​ನವರು ರಾಜಕೀಯವನ್ನು ಭ್ರಷ್ಟ ಮಾಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್​ ಸುಳ್ಳು ಸುದ್ದಿಯನ್ನು ಹರಡಿಸಿ ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದೆ. ಸುಳ್ಳು ಮಾಹಿತಿ ಹಾಗೂ ಸರ್ವೇ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ.

    ಸುಳ್ಳು ಸುದ್ದಿ ಹರಡುತ್ತಿದೆ

    ಕರ್ನಾಟಕದಲ್ಲಿ ಜನತೆ ಬಿಜೆಪಿಗೆ ಅಧಿಕಾರ ನೀಡಲು ಮುಂದಾಗಿರುವುದರಿಂದ ಭಯಗೊಂಡಿರುವ ಕಾಂಗ್ರೆಸ್​ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ. ಬಿಜೆಪಿಯವರು ಬಿಡುಗಡೆ ಮಾಡಿರುವ ಸಂಕಲ್ಪ ಪತ್ರದ್ಲಲಿ ನಾವು ಕರ್ನಾಟಕವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯುತ್ತೇವೆ ಮತ್ತು ನಂಬರ್​ ಒನ್​ ಎಂದು ಹೇಳಿದ್ದೇವೆ.

    ಕಾಂಗ್ರೆಸ್​ನವರ ಪ್ರಣಾಳಿಕೆಯನ್ನು ನೋಡಿದಾಗ ಸುಳ್ಳು ಆಶ್ವಾಸನೆಗಳಿಂದ ತುಂಬಿದೆ ನಿಷೇಧ ಹಾಗೂ ತುಷ್ಟೀಕರಣದಿಂದ ತಿಂಬಿದೆ. ಬರಿ ನಿಷೇಧಗಳ ಬಗ್ಗೆ ಬಿಟ್ಟರೆ ಬೇರೇನೂ ಹೇಳಿಲ್ಲ. ಕಾಂಗ್ರೆಸ್​ನವರ ಬುಡ ಅಲ್ಲಾಡುತ್ತಿದೆ ತುಷ್ಟೀಕರಣದ ರಾಜಕೀಯ ಮಾಡಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತದೆ.

    ಇದನ್ನೂ ಓದಿ: NEET​ ಪರೀಕ್ಷಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ ಪ್ರಧಾನಿ ಮೋದಿ ರೋಡ್​ ಶೋ!

    ಭಯ ಹುಟ್ಟಿಕೊಂಡಿದೆ

    ನಾನು ಬಜರಂಗಬಲಿ ಕಿ ಜೈ ಎಂದು ಹೇಳುವುದರಿಂದ ಕಾಂಗ್ರೆಸ್​ನವರಿಗೆ ಭಯ ಹುಟ್ಟಿಕೊಂಡಿದೆ. ನಾವು ಕರ್ನಾಟಕದ ದೇಶದ ನಂಬರ್ ಒನ್​ ರಾಜ್ಯ ಮಾಡಬೇಕಾದರೆ ಕಾನೂನು ಸುವ್ಯವಸ್ಥೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ. ಬಿಜೆಪಿ ಭಯೋತ್ಪಾದನೆಯ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಮ್ಮ ನಿರ್ಧಾರದಿಂದ ಕಾಂಗ್ರೆಸ್​ನವರಿಗೆ ಹೊಟ್ಟೆಯಲ್ಲಿ ನೋವು ಶುರುವಾಗಿದೆ.

    ಕಾಂಗ್ರೆಸ್​ ವೋಟ್​ ಬ್ಯಾಂಕ್​ ರಾಜಕಾರಣದಿಂದಾಗಿ ಭಯೋತ್ಪಾದನೆಯ ವಿರುದ್ಧ ಮಾತನಾಡುವುದಿಲ್ಲ ಏಕೆಂದರೆ ಅದರ ಮುಂದೆ ಮಂಡಿಯೂರಿ ಕುಳಿತಿದೆ. ಭಯೋತ್ಪಾದಕ ಕೃತ್ಯಗಳಿಂದ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂಥವರು ಕರ್ನಾಟಕವನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    85% ಕಮಿಷನ್​ ಆರೋಪ

    ಕಳೆದ ಕೆಲವು ದಿನಗಳಿಂದ ಕೇರಳ ಸ್ಟೋರಿ ಚಿತ್ರ ಹೆಚ್ಚು ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಕೇರಳದಲ್ಲಿನ ಆತಂಕವಾದದ ಕುರಿತು ಚಿತ್ರೀಕರಿಸಲಾಗಿದೆ. ಆದರೆ, ಕೇರಳದಲ್ಲಿ ಆತಂಕದ ಷಡ್ಯಂತ್ರವನ್ನು ಹೊರತರುತ್ತಿರುವ ಈ ಚಿತ್ರದ ಕುರಿತು ಕಾಂಗ್ರೆಸ್​ ವಿರೋಧಿಸುತ್ತಿದೆ. ಕರ್ನಾಟಕದ ಜನತೆ ಎಚ್ಚರವಹಿಸಬೇಕಾಗಿದೆ ಎಂದು ಹೇಳಿದ್ದಾರೆ.

    ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಡಬಲ್​ ಇಂಜಿನ್​ ಸರ್ಕಾರ ರಾಜ್ಯದ ಜನತೆಗೆ ಹಲವು ಯೋಜನೆಗಳನ್ನು ಕೊಡಲಾಗಿದೆ. ಇಲ್ಲಿ ಕಾಂಗ್ರೆಸ್​ ಸರ್ಕಾರ ಇತ್ತು ಕರ್ನಾಟಕದ ಅಭಿವೃದ್ದಿ ಬದಲು ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ನೀಡಿತ್ತು.

    ಇದಕ್ಕೆ ಕಾರಣ ಕಾಂಗ್ರೆಸ್​ನ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರು ಹೇಳಿದ್ದರು ನಾನು ದೆಹಲಿಯಿಂದ ನನ್ನ ಸರ್ಕಾರ ಮೂರು ಪೈಸೆ ಕಳುಹಿಸಿದರೆ ಅವರ ಕೈ ಸೇರುವಷ್ಟರಲ್ಲಿ 1.5 ಪೈಸೆ ಆಗುತ್ತಿತ್ತು. ಅಂದರೆ 85% ತಿನ್ನುತ್ತಿತ್ತು ಇದರಿಂದ ಕರ್ನಾಟಕದ ಅಭಿವೃದ್ದಿಯಲ್ಲಿ ಹಿನ್ನಡೆಯಾಗಿದೆ ಎಂದು ವಾಗ್ದಾಳಿಯನ್ನು ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts