More

    ಸ್ಥಳೀಯ ಸಂಸ್ಥೆ ಚುನಾವಣೆ; ನೃತ್ಯ ಕಾರ್ಯಕ್ರಮ, ಮದ್ಯ ಹಂಚಲು ಅನುಮತಿ ಕೋರಿ ಪತ್ರ

    ಕಾನ್ಪುರ: ಚುನಾವಣೆಯ ವೇಳೆ ರಾಜಕೀಯ ಪಕ್ಷಗಳ ಪರ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸುವ ಅಬ್ಯರ್ಥಿಗಳು ಜನರ ಮತವನ್ನು ತಮ್ಮತ್ತ ಸೆಳೆಯಲು ವಿಭಿನ್ನ ಘೋಷಣೆ/ತಮ್ಮದೇ ಆದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುತ್ತಾರೆ.

    ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿರುವ ಅಭ್ಯರ್ಥಿ ಓರ್ವ ಭರ್ಜರಿ ಘೋಷಣೆ ಮಾಡಿದ್ದು ಈ ಬಗ್ಗೆ ಅನುಮತಿ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

    ನೃತ್ಯ ಕಾರ್ಯಕ್ರಮ, ಮದ್ಯ ಹಂಚಬೇಕು

    ಪಕ್ಷೇತರನಾಗಿ ಸ್ಪರ್ಧಿಸಿರುವ ಅಭ್ಯರ್ಥಿ ಓರ್ವ ಮತದಾರರನ್ನು ತನ್ನತ್ತ ಸೆಳೆಯಲು ನೃತ್ಯ ಕಾರ್ಯಕ್ರಮಗಳು ಹಾಗೂ ಮದ್ಯವನ್ನು ಹಂಚಲು ಅನುಮತಿ ನೀಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ಧಾನೆ.

    ಕಾನ್ಪುರ ನಗರದ ವಾರ್ಡ್​ ನಂ 30ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವ್ಯಕ್ತಿಯೂ ಈಗೆಂದು ಪತ್ರ ಬರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದರ ಪ್ರತಿ ವೈರಲ್​ ಆಗಿದೆ.

    letter
    ಅಭ್ಯರ್ಥಿ ಬರೆದಿರುವ ಪತ್ರದ ಪ್ರತಿ

    ಇದನ್ನೂ ಓದಿ: ಬಜರಂಗದಳವನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ: ವೀರಪ್ಪ ಮೊಯ್ಲಿ

    ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷೇತರ ಅಭ್ಯರ್ಥಿ ಅದು ನಾನು ಬರೆದಿರುವ ಪತ್ರವಲ್ಲ ಯಾರೋ ಕಿಡಿಗೇಡಿಗಳು ನನ್ನ ಹೆಸರು ಹಾಗೂ ಸಹಿಯನ್ನು ನಕಲು ಮಾಡಿ ಪತ್ರ ಬರೆದಿದ್ದಾರೆ. ಈ ಕುರಿತು ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪತ್ರದ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿ ಒಬ್ಬರು ಈ ಬಗ್ಗೆ ದೂರು ದಾಖಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ ವರದಿ ಬಂದ ಕುಡಲೇ ತಿಳಿಸಲಾಗುವುದುಎ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts