ಸೇನಾ ಕಾರ್ಯಾಚರಣೆ ವೇಳೆ ಉಗ್ರರ ದಾಳಿ; ಇಬ್ಬರು ಯೋಧರು ಹುತಾತ್ಮ

Indian Army
ಸಾಂದರ್ಭಿಕ ಚಿತ್ರ
Published on

ಶ್ರೀನಗರ: ಉಗ್ರರು ನಡೆಸಿದ ಸ್ಪೋಟಕ್ಕೆ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

ಘಟನೆಯಲ್ಲಿ ನಾಲ್ವರು ಸೇನಾ ಅಧಿಕಾರಿಗಳು ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆ ವೇಳೆ ಕೃತ್ಯ

ಭಾರತೀಯ ಸೇನಾ ಅಧಿಕಾರಿಗಳು ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್​​ನ ಕಂಡಿ ಅರಣ್ಯ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ಸ್ಪೋಟ ಸಂಭವಿಸಿದೆ.

ಕಂಡಿ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹತಿ ಪಡೆದ ಸೇನಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸುವ ವೇಳೆ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ಚಕಮಕಿ

ಶುಕ್ರವಾರ ಬೆಳಗ್ಗೆ 7:30ಕ್ಕೆ ಘಟನೆ ನಡೆದಿದ್ದು ಸೇನೆ ಹಾಗೂ ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ಆಗಿದೆ. ಈ ವೇಳೆ ಉಗ್ರರು ತಪ್ಪಿಸಿಕೊಳ್ಳಲು ಸೇನಾ ಅಧಿಕಾರಿಗಳ ಮೇಲೆ ಬಾಂಬ್​ ದಾಳಿ ನಡೆಸಿದ್ದಾರೆ.

ಸ್ಪೋಟದ ತೀವ್ರತೆಗೆ ಇಬ್ಬರಯು ಅಧಿಕಾರಿ ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಧಮ್​ಪುರದಲ್ಲಿರುವ ಕಮಾಂಡ್​ ಹಾಸ್ಪಿಟಲ್​ಗೆ ಏರ್​​ಲಿಫ್ಟ್​ ಮಾಡಲಾಗಿದೆ ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net