More

    ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲಿವೆ 5 ಟೆಕ್​ ಹ್ಯಾಕ್ಸ್​​!

    ಬೆಂಗಳೂರು: ಟೆಕ್ನಾಲಜಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಟೆಕ್ನಾಲಜೆ ನಮ್ಮ ಜೀವನವನದನು ಸುಲಭಗೊಳ್ಳಿಸುತ್ತದೆ. ಅದರಿಂದ ಸಮಯ ಉಳಿತಾಯವಾಗುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಮೊಬೈಲ್​ ಅಥವಾ ಕಂಪ್ಯೂಟರ್​ ಸಹಾಯ ಪಡೆದುಕೊಳ್ಳುತ್ತೇವೆ. ಆದರೆ ಅದರಿಂದ ಗೊಂದಲ ಕೂಡ ಆಗುತ್ತದೆ. ಅಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬ ಗೊಂದಲ ಉಂಟಾಗುವುದು ಸಹಜ. ಅಂತಹ ದಿನನಿತ್ಯದ ಕೆಲವು ಟೆಕ್​​ ಸಮಸ್ಯೆಗಳಿಗೆ ಇಲ್ಲವೆ ಸುಲಭ ಉಪಾಯಗಳು.

    1. ಎಲ್ಲೋ ಇಟ್ಟಿರುವ ಫೋನ್​ ಅನ್ನು ಸುಲಭವಾಗಿ ಪತ್ತೆ ಹಚ್ಚಬಹುದು

    ಫೊನ್​ ಅನ್ನು ಎಲ್ಲಂದರಲ್ಲಿ ಬಿಸಾಡುತ್ತೇವೆ. ಬೇಕಾದಾಗ ಸಿಗುವುದೇ ಇಲ್ಲ. ಕರೆ ಮಾಡಿದರೂ ಕೂಡ ರಿಂಗ್​ ಆಗುವುದು ಕೇಳಿಸುವುದಿಲ್ಲ. ಏಕೆಂದರೆ ಸೈಲೆಂಟ್​ ಮೂಡ್​ನಲ್ಲಿ ಇರುತ್ತದೆ. ಎಲ್ಲಿ ಕಳೆದು ಹೋಯಿತೆಂದು ಗಾಬರಿಯಿಂದ ಹುಡಕಾಡುತ್ತೇವೆ. ಇಂತಹ ಪರಿಸ್ಥಿತಿಯನ್ನು ನಾವೆಲ್ಲರೂ ಅನುಭವಿಸಿಯೇ ಇರುತ್ತೇವೆ. ಇದನ್ನು ತಪ್ಪಿಸಲು ಇಲ್ಲಿದೆ ಒಂದು ಉಪಾಯ. ಡಿವೈಸ್​ ಮ್ಯಾನೇಜರ್​ ಆ್ಯಪ್​ನ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದು. ಫೋನ್​​ನಲ್ಲಿ ಈ ಆ್ಯಪ್​ ಅನ್ನು ಇನ್​ಸ್ಟಾಲ್​​ ಮಾಡಿ ಗೂಗಲ್​ ಖಾತೆಯಿಂದ ಲಾಗ್​​ ಇನ್​ ಆಗಬೇಕು. ಇದರ ಮುಖಾಂತರ ಫೊನ್​​ ರಿಂಗ್​ ಮಾಡಬಹುದು ಮತ್ತು ಫೋನ್​ ಕಳೆದು ಹೋಗಿದ್ದರೆ ಎಲ್ಲ ಡೇಟಾವನ್ನು ಡಿಲೀಟ್​ ಮಾಡಬಹುದು.

    2. ಸುಲಭವಾಗಿ ಪ್ರೂಫ್​ರೀಡ್​ ಮಾಡಬಹುದು

    ಗೂಗಲ್​ ಟ್ರಾನ್ಸ್​ಲೇಟ್​​ನಲ್ಲಿ ಲೇಖನವನ್ನು ಹಾಕಿಬೇಕು. ನಂತರ ನಿಮ್ಮ ಲೇಖನದ ಕೆಳ ಭಾಗದಲ್ಲಿ ಒಂದು ಸ್ಪೀಕರ್​ ಚಿಹ್ನೆ ಒತ್ತಿದರೆ ಲೇಖನವನ್ನು ಗೂಗಲ್​ ಓದಲು ಪ್ರಾರಂಭಿಸುತ್ತದೆ. ಇದರ ಮುಖಾಂತರ ಲೇಖನವನ್ನು ಕೇಳಿಸಿಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.

    ಇದನ್ನೂ ಓದಿ: ವಾಹನದ ಮೈಲೇಜ್​ ಹೆಚ್ಚಿಸಬೇಕಾ? ಇಲ್ಲಿವೆ 7 ಟಿಪ್ಸ್…!

    3. ಕಂಪ್ಯೂಟರ್​ ಅಲ್ಲಿ ಸುಲಭವಾಗಿ ಸ್ಕ್ರೀನ್​ಶಾರ್ಟ್​ ತೆಗೆಯಬಹುದು

    ವಿಂಡೋಸ್​ ಕಂಪ್ಯೂಟರ್​ ಅಲ್ಲಿ ಶಿಫ್ಟ್​​​​​​​ + ವಿಂಡೋಸ್​​ + S ಕೀಯನ್ನು ಒತ್ತಿದರೆ ಸ್ನಿಪಿಂಗ್​ ಟೂಲ್​ ಎಂಬ ಅಪ್ಲಿಕೇಶನ್​ ಓಪನ್​ ಆಗುತ್ತದೆ. ಈ ಆಯ್ಕೆ ವಿಂಡೋಸ್​ 10 ಮತ್ತು 11ರಲ್ಲಿ ಲಭ್ಯವಿದೆ. ಉಳಿದ ವರ್ಷ್​ನ್​​ನಲ್ಲಿ ಶಾರ್ಟ್​ಕಟ್​ ಕೆಲಸಕ್ಕೆ ಬರುವುದಿಲ್ಲ. ಮ್ಯಾನ್ಯುಯಲ್​ ಆಗಿ ಅಪ್ಲಿಕೇಶನ್​ ಅನ್ನು ತೆರೆಯಬಹುದು. ಸ್ನಿಪಿಂಗ್​ ಟೂಲ್​ನ ಮುಖಾಂತರ ಫುಲ್​ ಸ್ಕ್ರೀನ್​ ಅಥವಾ ಬೇಕಾದ ಜಾಗವನ್ನು ಸ್ಕ್ರೀನ್​ ಶಾರ್ಟ್​ ಪಡೆಯಬಹುದು. ಇದು ಬಹಳ ಪ್ರಯೋಜನಕಾರಿ ಟೂಲ್​ ಆಗಿದೆ.

    4. ವೈಫೈ ಪಾಸ್​ವರ್ಡ್​

    ಮನೆಗೆ ಅತಿಥಿಗಳು ಬಂದಾಗ ವೈಫೈ ಪಾಸ್​ವರ್ಡ್​ ಕೇಳುವುದು ಸಹಜ. ಬೇರೆಯವರಿಗೆ ಪಾಸ್​ವರ್ಡ್​ ನೀಡಲು ಮುಜುಗರವಾಗುತ್ತದೆ. ಆದರೆ ಪಾಸ್​ವರ್ಡ್​ ಹೇಳದೆ ವೈಫೈ ಕನೆಕ್ಷನ್​ ನೀಡಬಹುದು. ಕ್ಯೂಆರ್​​ ಕೋಡ್​​ನ ಮುಖಾಂತರ ಇದು ಸಾಧ್ಯ. ಬೇಕದವರಿಗೆ ಕೋಡ್​ ಸ್ಕ್ಯಾನ್​ ಮಾಡಿಸಿ ವೈಫೈ ಕನೆಕ್ಷನ್​ ಅನ್ನು ನೀಡಬಹುದು.

    5. ಗುನುಗುತ್ತಿರುವ ಹಾಡನ್ನು ಸುಲಭವಾಗಿ ಕಂಡುಹಿಡಿಯಬಹುದು

    ಒಂದು ಹಾಡಿನ ಟ್ಯೂನ್​ ಅನ್ನು ಗುನುಗುತ್ತಿರುತ್ತವೆ. ಆದರೆ ಹಾಡು ಯಾವುದೆಂದು ತಿಳಿಯದೆ ಒದ್ದಾಡುತ್ತೀವಿ. ಇದಕ್ಕೊಂದು ಉಪಾಯವಿದೆ. ‘ಮೈಡೋಮಿ’ಯ ಮುಖಾಂತರ ಇದು ಸಾಧ್ಯ. ಇದರಲ್ಲಿ ಗುನುಗುತ್ತಿರುವ ಹಾಡು ಯಾವುದೆಂದು ಕಂಡುಹಿಡಿಯಬಹುದು. ಒಂದು ಅಥವಾ ಎರಡು ಸಾಲನ್ನು ಹಾಡಿದರೆ ಇನ್ನು ಬೇಗನೆ ಹಾಡನ್ನು ಪತ್ತೆ ಹಚ್ಚಬಹುದು. (ಏಜೆನ್ಸೀಸ್​​)

     

    68ನೇ ವಯಸ್ಸಿನಲ್ಲಿ ಮದ್ವೆ ಆಸೆಗೆ ಬಿದ್ದ ವೃದ್ಧನಿಗೆ ಶಾಕ್​! ತನಿಖೆ ವೇಳೆ ಕಿಲಾಡಿ ಲೇಡಿಯ ಕರಾಳತೆ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts