More

    ವಾಹನದ ಮೈಲೇಜ್​ ಹೆಚ್ಚಿಸಬೇಕಾ? ಇಲ್ಲಿವೆ 7 ಟಿಪ್ಸ್…!

    ಬೆಂಗಳೂರು: ಈಗಂತು ವಾಹನವು ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಬಹಳ ಅವಶ್ಯಕ ಕೂಡ ಹೌದು. ಆದರೆ ಪೆಟ್ರೋಲ್​ ಬೆಲೆ ಗಗನ ಕ್ಕೇರಿದೆ. ಅದಕ್ಕಾಗಿ ವಾಹನ ಉತ್ತಮ ಮೈಲೇಜ್​ ನೀಡುವುದು ಬಹಳ ಮುಖ್ಯ. ಬೈಕ್‌ ಅಥವಾ ಕಾರ್​ನಲ್ಲಿ ಸೂಕ್ತ ಮೈಲೇಜ್ ಪಡೆಯುವುದು ಕಷ್ಟಕರವಾಗಿದೆ. ಕೆಲವು ಅತ್ಯುತ್ತಮ ಬ್ರಾಂಡ್ ವಾಹನಗಳು ಕೂಡ ದೈನಂದಿನ ವೆಚ್ಚವನ್ನು ಕಡಿಮೆ ಮಾಡಲು ವಿಫಲವಾಗಿವೆ. ಆದರೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮೈಲೇಜ್​ ಅನ್ನು ಸುಧಾರಿಸಬಹುದು. ಉತ್ತಮ ಮೈಲೇಜ್‌ಗಾಗಿ ಕೆಲವು ಸಲಹೆಗಳು ಇಲ್ಲಿವೆ.

    1. ವಾಹನದ ಸರ್ವಿಸ್​​
    ಉತ್ತಮ ಮೈಲೇಜ್ ಪಡೆಯಲು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸುವುದು ಅವಶ್ಯಕ.​ ಸರ್ವಿಸಿಂಗ್ ವಾಹನದ ಎಂಜಿನ್ ಆರೋಗ್ಯವನ್ನು ಸುಧಾರಿಸುತ್ತದೆ. ಅದರೊಂದಿಗೆ ಬಾಳಿಕೆಯನ್ನು ಕೂಡ ಹೆಚ್ಚಿಸುತ್ತದೆ. ಸರ್ವೀಸ್​ ಮಾಡಿಸುವುದು ಬಹಳ ದುಬಾರಿ ಎನಿಸಿದರೆ ಎಂಜಿನ್ ತೈಲವನ್ನು ಪರೀಕ್ಷಿಸಲು ಮರೆಯಬಾರದು.

    2. ಕಾರ್ಬ್ಯುರೇಟರ್ ಸೆಟ್ಟಿಂಗ್
    ನಿಯಮಿತ ಸರ್ವೀಸಿಂಗ್​ ವಾಹನದ ಮೈಲೇಜ್ ಸುಧಾರಿಸದಿದ್ದರೆ ಕಾರ್ಬ್ಯುರೇಟರ್ ಮೇಲೆ ಗಮನ ಹರಿಸಬೇಕು. ಕಾರ್ಬ್ಯುರೇಟರ್ ಅನ್ನು ಹಸ್ತಚಾಲಿತವಾಗಿ ಅಥವಾ ವಿದ್ಯುನ್ಮಾನವಾಗಿ ಮರು-ಟ್ಯೂನಿಂಗ್ ಮಾಡುವುದರಿಂದ ಎಂಜಿನ್ ಕಾರ್ಯ ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಇದರಿಂದ ಮೈಲೇಜ್ ಕೂಡ ಸುಧಾರಿಸುತ್ತದೆ.

    3. ನಿಯಂತ್ರಿತ ವೇಗ
    ಹೆಚ್ಚಿನ ಮೈಲೇಜ್ ಪಡೆಯಲು ಸ್ಥಿರವಾದ ವೇಗದಲ್ಲಿ ಚಲಾಯಿಸುವುದು ಅತ್ಯಗತ್ಯ. ಹಠಾತ್ ಆಕ್ಸಿಲರೇಟ್​​ ಮತ್ತು ಹಾರ್ಡ್ ಬ್ರೇಕಿಂಗ್​ ಕಳಪೆ ಮೈಲೇಜ್​ಗೆ ಕಾರಣವಾಗುತ್ತದೆ. ಆದ್ದರಿಂದ ನಿಯಮಿತವಾದ ವೇಗ ವಾಹನಕ್ಕೆ ಮತ್ತು ನಮ್ಮ ಜೀವಕ್ಕೆ ಬಹಳ ಒಳ್ಳೆಯದು. ಹೆಚ್ಚಾದ ಆಕ್ಸಿಲರೇಟ್ ಹೆಚ್ಚು ಇಂಧನವನ್ನು ಕೇಳುತ್ತದೆ. ಕನಿಷ್ಟ ಬ್ರೇಕಿಂಗ್‌ನೊಂದಿಗೆ 40kph-55kph ಸರಾಸರಿ ವೇಗದಲ್ಲಿ ವಾಹನವನ್ನು ಚಲಾಯಿಸಿದರೆ ನಿಸ್ಸಂದೇಹವಾಗಿ ಹೆಚ್ಚಿನ ಮೈಲೇಜ್ ಅನ್ನು ಪಡೆಯಬಹುದು.

    ಇದನ್ನೂ ಓದಿ: ಇನ್ನು ಈ 41 ನಗರಗಳಲ್ಲಿ ಜಿಯೋ 5ಜಿ ಲಭ್ಯ! ಹೀಗಿದೆ ಆ ನಗರಗಳ ಪಟ್ಟಿ…

    4. ಟೈರ್ ಒತ್ತಡವನ್ನು ಪರಿಶೀಲಿಸಬೇಕು
    ಹೆಚ್ಚಿನ ಮೈಲೇಜ್ ಪಡೆಯಲು ಟೈರ್ ಒತ್ತಡದ ಮೇಲೆ ಕಣ್ಣಿಡುವುದು ಮುಖ್ಯ. ಅತ್ಯುತ್ತಮ ಇಂಧನ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ಟೈರ್ ಗಾಳಿಯ ಒತ್ತಡವನ್ನು ಪರಿಶೀಲಿಸಬೇಕು. ಕಡಿಮೆಯಾದ ಟೈರ್ ಒತ್ತಡ ವಾಹನದ ಮೈಲೇಜ್ ಅನ್ನು ಕಡಿಮೆ ಮಾಡುತ್ತದೆ. ಏಕೆಂದರೆ ರಸ್ತೆಯ ಮೇಲ್ಮೈ ವಿಸ್ತೀರ್ಣದೊಂದಿಗೆ ಟೈರ್‌ನ ವ್ಯಾಪಕ ಸಂಪರ್ಕದಿಂದಾಗಿ ರೋಲಿಂಗ್ ಪ್ರತಿರೋಧವು ಹೆಚ್ಚಾಗುತ್ತದೆ. ಅದರೊಂದಿಗೆ ಹೆಚ್ಚಿನ ಟೈರ್ ಒತ್ತಡವು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಆದರೆ ಇದು ಕಡಿಮೆ ಸಂಪರ್ಕ ಪ್ರದೇಶ ಮತ್ತು ಕಡಿಮೆ ಎಳೆತಕ್ಕೆ ಕಾರಣವಾಗುತ್ತದೆ.

    5. ಗೇರ್‌ ಬದಲಾಯಿಸುವುದು
    ಹೆಚ್ಚಿನ ಮೈಲೇಜ್ ಖಚಿತಪಡಿಸಿಕೊಳ್ಳಲು ಸಾಧ್ಯವಾದಷ್ಟು ಬೇಗ ಹೆಚ್ಚಿನ ಗೇರ್‌ಗೆ ಬದಲಾಯಿಸಲು ಪ್ರಯತ್ನಿಸಬೇಕು. ಈ ಅಭ್ಯಾಸ ರಸ್ತೆಯ ವೇಗವನ್ನು ಕಾಪಾಡಿಕೊಳ್ಳುವಾಗ ಎಂಜಿನ್ ವೇಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೀಗಾಗಿ ವಾಹನದ ಮೈಲೇಜ್ ಸುಧಾರಿಸುತ್ತದೆ.

    6. ಇಂಧನದ ಗುಣಮಟ್ಟ
    ಉತ್ತಮ ಗುಣಮಟ್ಟದ ಇಂಧನದಿಂದ ಇಂಧನ ಟ್ಯಾಂಕ್ ತುಂಬಿಸಲು ಪ್ರಯತ್ನಿಸಬೇಕು. ಉತ್ತಮ ಗುಣಮಟ್ಟದ ಇಂಧನ ಎಂಜಿನ್ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅನಧಿಕೃತ ಇಂಧನ ಟ್ಯಾಂಕ್‌ಗಳಿಂದ ಕಲುಷಿತ ಇಂಧನದ ಬಳಕೆಯನ್ನು ತಪ್ಪಿಸಬೇಕು. ಇದಲ್ಲದೆ ಸ್ಥಿರತೆಗಾಗಿ ಒಂದೇ ಬ್ರ್ಯಾಂಡ್​ನ ಇಂಧನವನ್ನು ಬಳಸಬೇಕು.

    7. ಕಿಲ್ ಸ್ವಿಚ್ ಬಳಸಬೇಕು
    ಟ್ರಾಫಿಕ್‌ನಲ್ಲಿ ಸಿಲುಕಿರುವಾಗ (30 ಸೆಕೆಂಡುಗಳಿಗಿಂತ ಹೆಚ್ಚು ಕಾಲ), ಕಿಲ್ ಸ್ವಿಚ್ ಅನ್ನು ಬಳಸಿ ಎಂಜಿನ್ ಅನ್ನು ಆಫ್ ಮಾಡಬೇಕು. ಇದು ಇಂಧನ ಉಳಿತಾಯ ಹಾಗೂ ಎಂಜಿನ್ ಆರೋಗ್ಯಕ್ಕೆ ಸಹಕಾರಿಯಾಗಲಿದೆ. (ಏಜೆನ್ಸೀಸ್​​)

    ದಾಸವಾಳದಲ್ಲಿ ಅಡಗಿದೆ ಆರೋಗ್ಯಕರ ಅಂಶಗಳು; ಇಂತಿವೆ ನೀವು ತಿಳಿದುಕೊಳ್ಳಬೇಕಾದ ಪ್ರಯೋಜನಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts