ದಿನ ಕಳೆದರೂ ತೆರವಾಗಿಲ್ಲ ಮರ

0 Min Read
ದಿನ ಕಳೆದರೂ ತೆರವಾಗಿಲ್ಲ ಮರ
ಆನಂದಪುರ ಸಮೀಪದ ಅಂದಾಸುರ ಗ್ರಾಮದಲ್ಲಿ ಹೆದ್ದಾರಿಗೆ ಬೀಳುವ ಹಂತದಲ್ಲಿರುವ ಮರ.

ಆನಂದಪುರ: ಇಲ್ಲಿಗೆ ಸಮೀಪದ ಅಂದಾಸುರ ಗ್ರಾಮದಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ರಿಪ್ಪನ್‌ಪೇಟೆ- ಆನಂದಪುರ ಮುಖ್ಯ ಹೆದ್ದಾರಿಯಲ್ಲಿ ಒಣಗಿದ ಮರವೊಂದು ಬುಡ ಸಹಿತ ಉರುಳಿದೆ.

ಹೆದ್ದಾರಿಯ ಆಚೆಗಿನ ದೊಡ್ಡ ಮರದ ರೆಂಬೆಗೆ ಸಿಲುಕಿ ಬೀಳುವ ಹಂತದಲ್ಲಿದೆ. ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿದೆ. ಆದರೆ ಮರವನ್ನು ಈವರೆಗೂ ತೆರವು ಮಾಡಿಲ್ಲ. ಶುಕ್ರವಾರ ಈ ಮಾರ್ಗದಲ್ಲಿ ವಾಹನ ಚಾಲಕರು ಭಯದಲ್ಲೇ ವಾಹನ ಚಲಾಯಿಸಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ವಿದ್ಯುತ್ ತಂತಿ ತುಂಡಾಗಿರುವ ಕಾರಣ ಸ್ಥಳೀಯರು ಸಹ ಮರ ತೆರವಿಗೆ ಹಿಂದೇಟು ಹಾಕುತ್ತಿದ್ದಾರೆ.

See also  ಬೆಳೆಗಾರರಿಗೆ ಹುಳಿಯಾದ ದ್ರಾಕ್ಷಿ !
Share This Article