ನವದೆಹಲಿ: ಮಾರ್ಚ್ 21ರಂದು ರಿಲಯನ್ಸ್ ಜಿಯೋ, 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಯುಟಿ) 41 ಹೆಚ್ಚುವರಿ ನಗರಗಳಲ್ಲಿ ಟ್ರೂ 5 ಜಿ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಈ ನಗರಗಳಲ್ಲಿ 5 ಜಿ ಸೇವೆಗಳನ್ನು ವಿಸ್ತರಿಸಿದ ಮೊದಲ ಟೆಲಿಕಾಂ ಆಪರೇಟರ್ ಜಿಯೋ ಎಂದು ಕಂಪನಿಯು ಘೋಷಿಸಿಕೊಂಡಿದೆ.
ಇದನ್ನೂ ಓದಿ: 5ಜಿ ಕಾಲದಲ್ಲೂ ಹಿಂಡಲಗಾ ಜೈಲಿನಲ್ಲಿ 2ಜಿ ಜಾಮರ್!
ದೇಶಾದ್ಯಂತ ಲಕ್ಷಾಂತರ ಬಳಕೆದಾರರು ಜಿಯೋ ಟ್ರೂ 5 ಜಿಯನ್ನು ತ್ವರಿತವಾಗಿ ತೆಗೆದುಕೊಳ್ಳುತ್ತಿರುವುದನ್ನು ನೋಡಲು ನಮಗೆ ರೋಮಾಂಚನ ಆಗುತ್ತಿದೆ. ನಮ್ಮ ನೆಟ್ವರ್ಕ್ ಅವರ ಜೀವನವನ್ನು ಉನ್ನತೀಕರಿಸುತ್ತಿದೆ ಎಂದು ನಾವು ನಂಬುತ್ತೇವೆ” ಎಂದು ಜಿಯೋ ವಕ್ತಾರರು ಹೇಳಿದ್ದಾರೆ.
ಮಾರ್ಚ್ 21, 2023 ರಿಂದ, 41 ನಗರಗಳಲ್ಲಿನ ಜಿಯೋ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್ + ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಜಿಯೋ ವೆಲ್ಕಮ್ ಆಫರ್ ನೀಡಿದ್ದು ಹೆಚ್ಚುವರಿ ವೆಚ್ಚ ಇಲ್ಲದೇ ಅದನ್ನು ಜನರಿಗೆ ಪ್ರಯತ್ನಿಸಲು ಸಾಧ್ಯವಾಗುತ್ತದೆ ಎಂದು ಈ ಸಂದರ್ಭ ಜಿಯೋ ಘೋಷಿಸಿದೆ.
ನಗರಗಳ ಪಟ್ಟಿ ಹೀಗಿದೆ:
ಆಂಧ್ರ ಪ್ರದೇಶ: ಆದೋನಿ, ಬದ್ವೆಲ್, ಚಿಲಕಲೂರಿಪೇಟೆ, ಗುಡಿವಾಡ, ಕದಿರಿ, ನರಸಾಪುರ, ರಾಯಚೋಟಿ, ಶ್ರೀಕಾಳಹಸ್ತಿ, ತಾಡೆಪಲ್ಲಿಗುಡೆಮ್.
ಗೋವಾ: ಮಾರ್ಗೊ
ಹರ್ಯಾಣ: ಫತೇಹಾಬಾದ್, ಗೊಹಾನಾ, ಹನ್ಸಿ, ನಾರ್ನಲ್, ಪಲ್ವಾಲ್.
ಹಿಮಾಚಲ ಪ್ರದೇಶ: ಪೌಂಟಾ ಸಾಹಿಬ್
ಜಮ್ಮು ಮತ್ತು ಕಾಶ್ಮೀರ: ರಾಜೌರಿ
ಜಾರ್ಖಂಡ್: ಡುಮ್ಕಾ
ಕರ್ನಾಟಕ: ರಾಬರ್ಟ್ಸನ್ ಪೇಟ್
ಕೇರಳ: ಕಾಞಂಗಾಡ್, ನೆಡುಮಂಗಾಡ್, ತಾಲಿಪರಂಬ, ತಲಶ್ಶೇರಿ, ತಿರುವಲ್ಲಾ.
ಮಧ್ಯಪ್ರದೇಶ: ಬೆತುಲ್, ದೇವಾಸ್, ವಿದಿಶಾ.
ಮಹಾರಾಷ್ಟ್ರ: ಭಂಡಾರ, ವಾರ್ಧಾ.
ಮಿಜೋರಾಂ: ಲುಂಗ್ಲೇಇ
ಒಡಿಶಾ: ಬ್ಯಾಸನಗರ, ರಾಯಗಡ.
ಪಂಜಾಬ್: ಹೋಶಿಯಾರ್ಪುರ
ರಾಜಸ್ಥಾನ: ಟೋಂಕ್
ತಮಿಳುನಾಡು: ಕಾರೈಕುಡಿ, ಕೃಷ್ಣಗಿರಿ, ರಾಣಿಪೇಟ್, ಥೇಣಿ ಅಲ್ಲಿನಗರಂ, ಉದಕಮಂಡಲಂ, ವಾಣಿಯಂಬಾಡಿ.
ತ್ರಿಪುರಾ: ಕುಮಾರ್ ಘಾಟ್ (ಏಜೆನ್ಸೀಸ್)