More

    ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಜಿಯೋ ಷೇರು: ಒಂದೇ ತಿಂಗಳಲ್ಲಿ 35% ಏರಿಕೆ; ಇನ್ನಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು

    ಮುಂಬೈ: ಜಿಯೋ ಫೈನಾನ್ಶಿಯಲ್​ ಸರ್ವೀಸ್​ ಲಿಮಿಟೆಡ್​ (Jio Financial Services Ltd) ಷೇರುಗಳ ಬೆಲೆ ಮಂಗಳವಾರ ದಾಖಲೆಯ ಉನ್ನತ ಮಟ್ಟ ತಲುಪಿದೆ. ಈ ಷೇರುಗಳ ಬೆಲೆ ಮಂಗಳವಾರ ಶೇ. 5.27ರಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ 374.50 ತಲುಪಿತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರು ಬೆಲೆಗಳು ಶೇ. 35.79ರಷ್ಟು ಏರಿಕೆ ಕಂಡಿವೆ.

    ತಜ್ಞರು ಏನು ಹೇಳುತ್ತಿದ್ದಾರೆ?:

    “ಪೇಟಿಎಂನಿಂದ ಖಾಲಿಯಾದ ಶೂನ್ಯವನ್ನು ತುಂಬಲು ಕಂಪನಿಯಿಂದ ಸಾಕಷ್ಟು ಪ್ರಚಾರವಿದೆ. ಅಲ್ಲದೆ, ಮ್ಯೂಚುಯಲ್ ಫಂಡ್‌ಗಳಲ್ಲಿ ಬ್ಲ್ಯಾಕ್ ರಾಕ್‌ ಜತೆ ಕಂಪನಿಯು ಪಾಲುದಾರಿಕೆ ಮಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಷೇರುಗಳ ಬೆಲೆ ಏರಿಕೆ ಮುಂದುವರಿಯಲಿದೆ” ಎಂದು ವೆಂಚುರಾ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ವಿನೀತ್ ಬೊಲಿಂಜ್ಕರ್ ಹೇಳುತ್ತಾರೆ.

    ಒಂದು ವೇಳೆ 350 ರೂಪಾಯಿಗಿಂತ ಹೆಚ್ಚಿನ ಮಟ್ಟದಲ್ಲಿ ಉಳಿಯುವಲ್ಲಿ ಸ್ಟಾಕ್ ಯಶಸ್ವಿಯಾದರೆ, ನಂತರ ಕಂಪನಿಯ ಷೇರುಗಳ ಬೆಲೆಯು 400 ರೂಪಾಯಿಗೆ ಏರಬಹುದು ಎಂದು ಜೆಎಂ ಫೈನಾನ್ಷಿಯಲ್‌ನ ಆಶಿಶ್ ಚತುರ್ಮೋಹ್ತಾ ಹೇಳುತ್ತಾರೆ,

    ಸ್ಟಾಕ್ ಸಕಾರಾತ್ಮಕವಾಗಿ ಕಾಣುತ್ತದೆ. ಸ್ಟಾಕ್ ಇರುವವರು 348 ರೂ.ವರೆಗೆ ಹಿಡಿದುಕೊಳ್ಳಿ. ಷೇರಿನ ಗುರಿ ಬೆಲೆ 391 ರೂ. ಆದರೆ, ಇದು ರೂ 400 ರ ಮಟ್ಟವನ್ನು ದಾಟಬಹುದು ಎಂದು ನಿರ್ಮಲ್ ಬ್ಯಾಂಗ್‌ನ ಆಯುಷ್ ಮೆಹ್ತಾ ಹೇಳುತ್ತಾರೆ.

    ಆದಿತ್ಯ ಬಿರ್ಲಾ ಕಂಪನಿಗಳ ವಿಲೀನ: ಒಂದೇ ದಿನದಲ್ಲಿ ಷೇರು ಬೆಲೆ 6% ಏರಿಕೆ: ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ

    ಹರಿಯಾಣಕ್ಕೆ ನೂತನ ಮುಖ್ಯಮಂತ್ರಿ: ಸಂಜೆ 5 ಗಂಟೆಗೆ ಪ್ರಮಾಣ ವಚನ; ಸಂಸದರಾಗಿದ್ದರೂ ಸಿಎಂ ಆಗುತ್ತಿರುವ ನಾಯಬ್​ ಸಿಂಗ್​ ಸೈನಿ ಯಾರು?

    656 ರಿಂದ 2 ರೂಪಾಯಿಗೆ ಕುಸಿದ ಷೇರು: ಈಗ ಈ ಸ್ಟಾಕ್​ಗೆ ಬೇಡಿಕೆ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts