ಆದಿತ್ಯ ಬಿರ್ಲಾ ಕಂಪನಿಗಳ ವಿಲೀನ: ಒಂದೇ ದಿನದಲ್ಲಿ ಷೇರು ಬೆಲೆ 6% ಏರಿಕೆ: ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ

blank

ಮುಂಬೈ: ಆದಿತ್ಯ ಬಿರ್ಲಾ ಕ್ಯಾಪಿಟಲ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆದಿತ್ಯ ಬಿರ್ಲಾ ಫೈನಾನ್ಸ್ (ABF) ಜತೆ ವಿಲೀನವನ್ನು ಘೋಷಿಸಿದೆ. ಈ ಘೋಷಣೆಯ ಹಿನ್ನೆಲೆಯಲ್ಲಿ, ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರದಂದು ಹೂಡಿಕೆದಾರರು ಆದಿತ್ಯ ಬಿರ್ಲಾ ಕ್ಯಾಪಿಟಲ್ ಷೇರುಗಳನ್ನು ಮುಗಿಬಿದ್ದು ಖರೀದಿಸಿದರು. ಇಂಟ್ರಾ ಡೇ ವಹಿವಾಟಿನ ಸಮಯದಲ್ಲಿ ಈ ಷೇರು ಬೆಲೆ 6 ಪ್ರತಿಶತದಷ್ಟು ಏರಿಕೆ ಕಂಡು 190.65 ರೂಪಾಯಿ ತಲುಪಿತ್ತು.

ಕಳೆದ ವರ್ಷ ಜುಲೈ 3 ರಂದು ಷೇರಿನ ಬೆಲೆ 199.40 ರೂ. ಇತ್ತು. ಇದು 52 ವಾರಗಳಲ್ಲಿ ಈ ಷೇರುಗಳ ಗರಿಷ್ಠ ಬೆಲೆಯಾಗಿದೆ. ಕಳೆದ ವರ್ಷ ಮಾರ್ಚ್ 27ರಂದು ಷೇರಿನ ಬೆಲೆ 139.35 ರೂ.ಗೆ ಕುಸಿದಿತ್ತು. ಇದು ಷೇರುಪೇಟೆಯಲ್ಲಿ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಈ ಸ್ಟಾಕ್​ ಬೆಲೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ತಜ್ಞರು ಹೇಳುತ್ತಾರೆ.

ಗುರಿ ಬೆಲೆ ಎಷ್ಟು?:

ಜೆಎಂ ಫೈನಾನ್ಶಿಯಲ್ ಬ್ರೋಕರೇಜ್ ಸಂಸ್ಥೆಯು ಆದಿತ್ಯ ಬಿರ್ಲಾ ಕ್ಯಾಪಿಟಲ್ ಷೇರುಗಳ ಗುರಿ ಬೆಲೆಯನ್ನು 240 ರೂ.ಗೆ ನಿಗದಿಪಡಿಸಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯು ವಿಲೀನದ ಯೋಜನೆಯನ್ನು ಅನುಮೋದಿಸಿದೆ. ಈ ಯೋಜನೆಯು ಷೇರುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಬ್ರೋಕರೇಜ್​ ಸಂಸ್ಥೆ ಹೇಳಿದೆ.

ವಿಲೀನದ ಅಗತ್ಯ ಏಕೆ?:

ವಾಸ್ತವವಾಗಿ, ಈ ವಿಲೀನಕ್ಕೆ ಕಾರಣವೆಂದರೆ ದೊಡ್ಡ ಬ್ಯಾಂಕೇತರ ಸಾಲದಾತ ಕಂಪನಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸ್ಕೇಲ್-ಆಧಾರಿತ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಒಂದು ಪಟ್ಟಿ ಮಾಡಲಾದ ವ್ಯವಸ್ಥಿತವಾಗಿ ಪ್ರಮುಖವಾದ ಠೇವಣಿ ರಹಿತ ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಯಾಗಿದೆ. ಆದರೆ, ಆದಿತ್ಯ ಬಿರ್ಲಾ ಫೈನಾನ್ಸ್ ವ್ಯವಸ್ಥಿತವಾದ ಪ್ರಮುಖವಾದ NBFC (ನಾನ್-ಬ್ಯಾಂಕ್ ಫೈನಾನ್ಸ್ ಕಂಪನಿ) ಠೇವಣಿ ರಹಿತವಾಗಿದೆ. ವಿಲೀನದ ನಂತರ, ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೋಲ್ಡಿಂಗ್ ಕಂಪನಿಯಿಂದ ‘ಆಪರೇಟಿಂಗ್’ NBFC ಆಗಿ ರೂಪಾಂತರಗೊಳ್ಳುತ್ತದೆ. ಇದು ಹೆಚ್ಚಿನ ಆರ್ಥಿಕ ಶಕ್ತಿ ಮತ್ತು ಬಂಡವಾಳದ ನೇರ ಪ್ರವೇಶದೊಂದಿಗೆ ದೊಡ್ಡ ಕಂಪನಿಯಾಗುತ್ತದೆ.

ಹರಿಯಾಣಕ್ಕೆ ನೂತನ ಮುಖ್ಯಮಂತ್ರಿ: ಸಂಜೆ 5 ಗಂಟೆಗೆ ಪ್ರಮಾಣ ವಚನ; ಸಂಸದರಾಗಿದ್ದರೂ ಸಿಎಂ ಆಗುತ್ತಿರುವ ನಾಯಬ್​ ಸಿಂಗ್​ ಸೈನಿ ಯಾರು?

ಸೋಮವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಸ್ಟಾಕ್​ಗಳು: ಮಂಗಳವಾರವೂ ಲಾಭದ ನಿರೀಕ್ಷೆ

ಸ್ಮಾಲ್ ಕ್ಯಾಪ್​ ಸೂಚ್ಯಂಕ ಸೋಮವಾರ 2% ಕುಸಿತ: ಸಣ್ಣ ಕಂಪನಿಯ ಷೇರುಗಳನ್ನು ಇಟ್ಟುಕೊಳ್ಳಬೇಕೆ? ಮಾರಬೇಕೆ? ಖರೀದಿಸಬೇಕೆ?

Share This Article

Curry Leaf Juice ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸ ಕುಡಿಯಿರಿ..ಬೊಜ್ಜು ಕಡಿಮೆಯಾಗುತ್ತದೆ..

Curry Leaf Juice : ಕರಿಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇಷ್ಟೆಲ್ಲಾ…

Health Tips : ನೀವು ಮಧ್ಯರಾತ್ರಿ ಎಚ್ಚರಗೊಳ್ಳುತ್ತೀರಾ? ಆರೋಗ್ಯ ಸಮಸ್ಯೆ ಇರೋದು ಪಕ್ಕಾ…

Health Tips : ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ…

‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe

ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ…