More

    656 ರಿಂದ 2 ರೂಪಾಯಿಗೆ ಕುಸಿದ ಷೇರು: ಈಗ ಈ ಸ್ಟಾಕ್​ಗೆ ಬೇಡಿಕೆ ಏಕೆ?

    ಮುಂಬೈ: ಫ್ಯೂಚರ್ ರಿಟೇಲ್ ಲಿಮಿಟೆಡ್ (Future Retail Ltd) ಷೇರುಗಳು ಮಾರುಕಟ್ಟೆ ಪ್ರತಿದಿನ ಹೊಸ ದಾಖಲೆಗಳನ್ನು ಮಾಡುತ್ತಿದೆ. ಈ ಅಬ್ಬರದ ನಡುವೆ ಕೆಲವು ದಿವಾಳಿಯಾದ ಕಂಪನಿಗಳ ಷೇರುಗಳೂ ರಾಕೆಟ್ ನಂತೆ ಏರುತ್ತಿವೆ. ಅಂತಹ ಒಂದು ಷೇರು ಫ್ಯೂಚರ್ ಗ್ರೂಪ್‌ನ ಚಿಲ್ಲರೆ ಕಂಪನಿಯಾದ ಫ್ಯೂಚರ್ ರೀಟೈಲ್ ಆಗಿದೆ. ಗುರುವಾರ ಈ ಕಂಪನಿಯ ಷೇರುಗಳಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ಕಳೆದ ವಾರದ ಕೊನೆಯ ವಹಿವಾಟಿನ ದಿನದಂದು ಈ ಸ್ಟಾಕ್‌ನಲ್ಲಿ ಶೇಕಡಾ 4 ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. ಅಲ್ಲದೆ, ಸೋಮವಾರ ಕೂಡ ಈ ಷೇರು ಬೆಲೆ 4.5% ಏರಿಕೆಯಾಗಿದೆ.

    ಫ್ಯೂಚರ್ ರಿಟೇಲ್ ಲಿಮಿಟೆಡ್‌ನ ಷೇರುಗಳು ಕಳೆದ ಗುರುವಾರ ರೂ 2.17 ಕ್ಕೆ ತಲುಪಿದವು. ಇದು ಅದರ ಹಿಂದಿನ ದಿನದ ಬೆಲೆಯಾದ ರೂ 2.07 ಕ್ಕಿಂತ 4.83% ಹೆಚ್ಚಾಗಿತ್ತು. ಸೋಮವಾರ 4.55% ಏರಿಕೆಯಾಗಿ 2.30 ರೂಗೆ ತಲುಪಿದವು.

    ಈ ಸ್ಟಾಕ್‌ನ 52 ವಾರಗಳ ಗರಿಷ್ಠ ಬೆಲೆ 3.93 ರೂ. 5 ವರ್ಷಗಳ ಹಿಂದೆ ಈ ಷೇರಿನ ಬೆಲೆ 560 ರೂಪಾಯಿ ಇತ್ತು. ಇದಾದ ನಂತರ ಶೇ. 99ರಷ್ಟು ಕುಸಿತ ಕಂಡಿದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ 656 ರೂ ಇದೆ.

    ನಿರ್ಮಾಣ ಮತ್ತು ಇಂಟಿರಿಯರ್​ ಉದ್ಯಮದಲ್ಲಿ ಆನ್‌ಲೈನ್ ಮಾರುಕಟ್ಟೆಯನ್ನು ನಡೆಸುತ್ತಿರುವ ಸ್ಪೇಸ್​ಮಂತ್ರ ಕಂಪನಿಯು ಫ್ಯೂಚರ್ ರಿಟೇಲ್ ಕಂಪನಿಯನ್ನು ಖರೀದಿಸಲು ಬಿಡ್​ ಮಾಡಿದೆ. ದಿವಾಳಿಯಲ್ಲಿರುವ ಫ್ಯೂಚರ್ ರಿಟೇಲ್ ಕಂಪನಿಯನ್ನು ಖರೀದಿಸಲು ಮಾಡಿರುವ ಬಿಡ್​ನಲ್ಲಿ ಈಗ ಪರಿಷ್ಕರಣೆ ಮಾಡಿದೆ.

    ಹಿಂದಿನ ಬಿಡ್‌ಗಿಂತ ಹೊಸ ಬಿಡ್ ಮೊತ್ತ ಹೆಚ್ಚಾಗಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಮರುಪರಿಶೀಲಿಸುವಂತೆ ಕಂಪನಿಯು ನಿರ್ವಾಹಕರು ಮತ್ತು ಸಾಲಗಾರರ ಸಮಿತಿಯನ್ನು (CoC) ವಿನಂತಿಸಿದೆ.

     

    ಈ 5 ಪ್ರಮುಖ ಷೇರುಗಳಲ್ಲಿ ಹೂಡಿಕೆಗೆ ತಜ್ಞರ ಸಲಹೆ: ಟಾರ್ಗೆಟ್​ ಪ್ರೈಸ್​, ಸ್ಟಾಪ್​ ಲಾಸ್​ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts