More

    ದುರ್ಬಲ ಜಾಗತಿಕ ಪ್ರವೃತ್ತಿ: 2 ದಿನಗಳ ಗೆಲುವಿನ ಓಟದ ನಂತರ ಸೋಮವಾರ ಮುಗ್ಗರಿಸಿದ ಷೇರು ಸೂಚ್ಯಂಕ

    ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯ ನಡುವೆ ಲೋಹ ಮತ್ತು ಬ್ಯಾಂಕಿಂಗ್ ಷೇರುಗಳ ಮಾರಾಟದಿಂದಾಗಿ ಷೇರು ಮಾರುಕಟ್ಟೆ ಮಾನದಂಡವಾದ ಬಿಎಸ್​ಇ ಸೂಚ್ಯಂಕ ಸೋಮವಾರ 616.75 ಅಂಕಗಳ ಕುಸಿತ ಕಂಡಿದೆ.

    ರೆಕಾರ್ಡ್ ಬ್ರೇಕಿಂಗ್ ರ್ಯಾಲಿಯ ನಂತರ ಉಸಿರು ತೆಗೆದುಕೊಂಡು, 30-ಷೇರುಗಳ ಬಿಎಸ್‌ಇ ಸೂಚ್ಯಂಕವು 616.75 ಅಂಕಗಳು ಅಥವಾ ಶೇಕಡಾ 0.83 ರಷ್ಟು ಕುಸಿದು 73,502.64 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 685.48 ಅಂಕಗಳಷ್ಟು ಕುಸಿದು 73,433.91 ಕ್ಕೆ ತಲುಪಿತ್ತು.

    ನಿಫ್ಟಿ ಸೂಚ್ಯಂಕವು 160.90 ಅಂಕಗಳು ಅಥವಾ 0.72 ರಷ್ಟು ಕುಸಿದು 22,332.65 ಕ್ಕೆ ತಲುಪಿತು.

    ಸೂಚ್ಯಂಕಗಳ ಪೈಕಿ, ಪವರ್ ಗ್ರಿಡ್ ಮತ್ತು ಟಾಟಾ ಸ್ಟೀಲ್ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದವು. ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಎನ್‌ಟಿಪಿಸಿ ಷೇರುಗಳು ಪ್ರಮುಖವಾಗಿ ಹಿನ್ನಡೆ ಕಂಡವು. ನೆಸ್ಲೆ, ಬಜಾಜ್ ಫಿನ್‌ಸರ್ವ್ ಮತ್ತು ಬಜಾಜ್ ಫೈನಾನ್ಸ್ ಕಂಪನಿಯ ಷೇರುಗಳು ಲಾಭ ಗಳಿಸಿದವು.

    “ದರ ಕಡಿತದ ಮೇಲಿನ ಅನಿಶ್ಚಿತತೆಯ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಮುಂದುವರಿದ ಮಾರಾಟವು ದೇಶೀಯ ಮಾರುಕಟ್ಟೆಯ ಭಾವನೆಯ ಮೇಲೆ ಪರಿಣಾಮ ಬೀರಿತು. ಅಮೆರಿಕದ ಕೃಷಿಯೇತರ ವೇತನದಾರರ ದತ್ತಾಂಶವು ನಿರೀಕ್ಷಿತಕ್ಕಿಂತ ಪ್ರಬಲವಾಗಿದೆ. ಅಮೆರಿಕ ಹಣದುಬ್ಬರ ದತ್ತಾಂಶವನ್ನು ನಾಳೆ ಬಿಡುಗಡೆ ಮಾಡುವ ಮುನ್ನ ಎಚ್ಚರಿಕೆಯ ಹೆಜ್ಜೆಯನ್ನು ಹೂಡಿಕೆದಾರರು ಇಟ್ಟಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

    “ಮೌಲ್ಯಮಾಪನದ ಕಾಳಜಿಯಿಂದಾಗಿ ವಿಶಾಲ ಮಾರುಕಟ್ಟೆಯು ತನ್ನ ಕಳಪೆ ಕಾರ್ಯಕ್ಷಮತೆಯನ್ನು ಮುಂದುವರಿಸಿದೆ, ಹೂಡಿಕೆದಾರರು ಚಿನ್ನದಂತಹ ಸುರಕ್ಷಿತ ಧಾಮ ಆಸ್ತಿಗಳನ್ನು ತಲುಪಲು ತಮ್ಮ ಬಂಡವಾಳಗಳನ್ನು ರುಸಮತೋಲನ ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಜಪಾನ್‌ನ ನಿಕ್ಕಿ ಸೂಚ್ಯಂಕ ಶೇಕಡಾ 2.2 ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಶೇಕಡಾ 0.8 ರಷ್ಟು ಕುಸಿದಿದೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇಕಡಾ 1.4 ರಷ್ಟು ಮತ್ತು ಶಾಂಘೈ ಕಾಂಪೋಸಿಟ್ ಶೇಕಡಾ 0.7 ರಷ್ಟು ಹೆಚ್ಚಳ ಕಂಡಿದೆ. ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಹಿನ್ನಡೆ ಅನುಭವಿಸಿವೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 7,304.11 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಗುರುವಾರ, 30-ಷೇರುಗಳ ಬಿಎಸ್‌ಇ ಸೂಚ್ಯಂಕವು 33.40 ಅಂಕಗಳು ಅಥವಾ ಶೇಕಡಾ 0.05 ರಷ್ಟು ಹೆಚ್ಚಳ ಕಂಡು 74,119.39 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು. ನಿಫ್ಟಿ ಸೂಚ್ಯಂಕವು 19.50 ಅಂಕಗಳು ಅಥವಾ ಶೇಕಡಾ 0.09 ರಷ್ಟು ಏರಿಕೆಯಾಗಿ ದಾಖಲೆಯ 22,493.55 ಕ್ಕೆ ತಲುಪಿತ್ತು. ಮಹಾಶಿವರಾತ್ರಿ ನಿಮಿತ್ತ ಶುಕ್ರವಾರ ಮಾರುಕಟ್ಟೆಗೆ ರಜೆ ನೀಡಲಾಗಿತ್ತು.

    ಸ್ಮಾಲ್ ಕ್ಯಾಪ್​ ಸೂಚ್ಯಂಕ ಸೋಮವಾರ 2% ಕುಸಿತ: ಸಣ್ಣ ಕಂಪನಿಯ ಷೇರುಗಳನ್ನು ಇಟ್ಟುಕೊಳ್ಳಬೇಕೆ? ಮಾರಬೇಕೆ? ಖರೀದಿಸಬೇಕೆ?

    ಜಿಯೋ ಷೇರು ದಾಖಲೆ ಬೆಲೆಗೆ ಜಿಗಿಯಲು ಕಾರಣವೇನು?: ಮತ್ತಷ್ಟು ಹೆಚ್ಚಳವಾಗಿ ರೂ. 380ಕ್ಕೆ ಏರುವ ನಿರೀಕ್ಷೆ

    1,000 ಮೆಗಾ ವ್ಯಾಟ್ ಸೌರಶಕ್ತಿಯ ಉತ್ಪಾದನೆ ಶುರು: ಅದಾನಿ ಗ್ರೀನ್​ ಎನರ್ಜಿ ಷೇರಿಗೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts