More

    1,000 ಮೆಗಾ ವ್ಯಾಟ್ ಸೌರಶಕ್ತಿಯ ಉತ್ಪಾದನೆ ಶುರು: ಅದಾನಿ ಗ್ರೀನ್​ ಎನರ್ಜಿ ಷೇರಿಗೆ ಬೇಡಿಕೆ

    ಮುಂಬೈ: ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (Adani Green Energy Ltd.) ಕಂಪನಿಯು ಗುಜರಾತ್‌ನಲ್ಲಿರುವ ಖಾವಡಾ ಆರ್‌ಇ ಪಾರ್ಕ್‌ನಲ್ಲಿ 1,000 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದನೆಯನ್ನು ಪ್ರಾರಂಭಿಸಿದ್ದಾಗಿ ಸೋಮವಾ ತಿಳಿಸಿದೆ. ಈ ಘೋಷಣೆಯ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳು ಶೇಕಡಾ 2 ರಷ್ಟು ಜಿಗಿತದೊಂದಿಗೆ ರೂ 1982 ರ ಮಟ್ಟವನ್ನು ತಲುಪಿದ್ದವು

    ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 3,050 ಹಾಗೂ ಕನಿಷ್ಠ ಬೆಲೆ 22.80 ರೂಪಾಯಿ ಇದೆ.

    ಇದರೊಂದಿಗೆ ಕಂಪನಿಯ ಒಟ್ಟು ಕಾರ್ಯನಿರ್ವಹಣಾ ಸಾಮರ್ಥ್ಯ 9,478 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ ಎಂದು ಅದಾನಿ ಗ್ರೀನ್ ಎನರ್ಜಿ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯು 2030 ರ ವೇಳೆಗೆ 45,000 MW ಸಾಮರ್ಥ್ಯದ ಗುರಿಯತ್ತ ಸಾಗುತ್ತಿದೆ. ಖಾವಡಾದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ 12 ತಿಂಗಳೊಳಗೆ AGEN 1,000 MW ಉತ್ಪಾದನಾ ಸಾಮರ್ಥ್ಯವನ್ನು ಸೃಷ್ಟಿಸಿದೆ ಎಂದು ಹೇಳಿಕೆ ತಿಳಿಸಿದೆ.

    ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸ್ಥಾವರವನ್ನು 538 ಚದರ ಕಿಲೋಮೀಟರ್‌ಗಳಲ್ಲಿ ನಿರ್ಮಿಸಲಾಗುತ್ತಿದೆ. ಇದು ಪ್ಯಾರಿಸ್‌ನ 5 ಪಟ್ಟು ದೊಡ್ಡದಾಗಿರುತ್ತದೆ. ಇದರ ಒಟ್ಟು ಸಾಮರ್ಥ್ಯ 30 ಗಿಗಾವ್ಯಾಟ್ ಆಗಿರುತ್ತದೆ. ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಮೂಲಕ 15,200 ಮಂದಿಗೆ ಕಂಪನಿ ಉದ್ಯೋಗ ನೀಡಲಿದೆ.

    ಸೋಲಾರ್ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿವೆ. ಸದ್ಯ ಹಲವು ಕಂಪನಿಗಳು ಸೋಲಾರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಪ್ರಸ್ತುತ ಸರ್ಕಾರವು ಈ ಪ್ರದೇಶದಲ್ಲಿ ಹಸಿರು ಶಕ್ತಿಯನ್ನು ಉತ್ತೇಜಿಸುತ್ತಿರುವ ರೀತಿ ಅಪರಿಮಿತ ಸಾಧ್ಯತೆಗಳಿಗೆ ಜನ್ಮ ನೀಡಿದೆ. ಸಬ್ಸಿಡಿ ಅಡಿಯಲ್ಲಿ ಒಂದು ಕೋಟಿ ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸುವ ಯೋಜನೆಯನ್ನು ಸರ್ಕಾರ ಈಗಾಗಲೇ ಆರಂಭಿಸಿದೆ.

    ಬುಲೆಟ್​ ಟ್ರೇನ್​ನಂತೆ ಓಡುತ್ತಿರುವ ಷೇರು 1,166% ಹೆಚ್ಚಳ: ರೈಲು ಕಂಪನಿಗೆ ಈಗ ರೂ. 1900 ಕೋಟಿಯ ಟೆಂಡರ್​

    ಅನೇಕ ತಜ್ಞರು ಈ ಷೇರುಗಳನ್ನು ಖರೀದಿಸಲು ಸಲಹೆ ನೀಡಿದ್ದಾರೆ: ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಖಚಿತ

    ರೂ 290ರಿಂದ 90ಕ್ಕೆ ಕುಸಿದ ಟಾಟಾ ಷೇರು: ಈಗ ಮತ್ತೆ ಬೇಡಿಕೆಯಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts