More

    ಬಾರದ ಭದ್ರಾ ನೀರು, ಮತದಾನ ಬಹಿಷ್ಕಾರ ಮತ್ತಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರ ನಿರ್ಧಾರ

    ದಾವಣಗೆರೆ: ನೀರಾವರಿ ಇಲಾಖೆ ಅಧಿಕಾರಿಗಳು ತೋಟದ ಬೆಳೆಗಳಿಗೆ ಭದ್ರಾ ನೀರು ಹಾಯಿಸಲು ನಿರ್ಲಕ್ಷೃ ತಾಳಿದ್ದಾರೆ ಎಂದು ಆರೋಪಿಸಿರುವ ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನಮಡು, ಗೋಣಿವಾಡ, ಮತ್ತಿ ಕ್ಯಾಂಪ್, ಗೋಣಿವಾಡ ಕ್ಯಾಂಪ್ ಮತ್ತು ತಿಮ್ಮಪ್ಪ ಕ್ಯಾಂಪ್  ಗ್ರಾಮಸ್ಥರು ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
    ಬೇಸಿಗೆ ಹಂಗಾಮಿನಲ್ಲಿ ಜನವರಿಯಿಂದ ಇದುವರೆಗೆ ನೀರಾವರಿ ಇಲಾಖೆ ಅಧಿಕಾರಿಗಳು ಈ ಗ್ರಾಮಗಳ ವ್ಯವಸಾಯ ಭೂಮಿಗೆ ಭದ್ರಾ ನಾಲೆಯ 2ನೇ ವಲಯದ (ಸೋಮನಾಳ್ ಗೇಟ್)ನಿಂದ ಸಮರ್ಪಕ ನೀರನ್ನು ಸರಿಯಾಗಿ ಪೂರೈಸಿಲ್ಲ. ಹೀಗಾಗಿ ಅಡಕೆ,  ತೆಂಗು, ಕಬ್ಬು ಬೆಳೆಗಳು ಒಣಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
    ಸೋಮನಾಳ್ ಮೇನ್ ಗೇಟ್‌ನಿಂದ ಸುಮಾರು 36 ಕಿಮೀ ದೂರದಲ್ಲಿರುವ ಕಾಲುವೆಗೆ 180 ಕ್ಯುಸೆಕ್ ನೀರು ಕೊಡಬೇಕು. ನಾಲೆಗೆ ನೀರು ಹರಿಸುವಂತೆ ಕೋರಿದರೂ ಸ್ಪಂದಿಸಿಲ್ಲ. ಬದಲಾಗಿ ಸಂತೇಬೆನ್ನೂರು ಪೊಲೀಸರ ಮೂಲಕ ಕೇಸ್ ದಾಖಲಿಸುವುದಾಗಿ ಬೆದರಿಸಿ ದೌರ್ಜನ್ಯ ಎಸಗುತ್ತಿದ್ದಾರೆ.
    ಖುದ್ದು ಠಾಣೆಗೆ ದೂರು ನೀಡಿದ್ದರೂ ಕಾರ್ಯಪಾಲಕ ಇಂಜಿನಿಯರ್ ದಾವಿಸದೇ ನೀವು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ನೀವು ಬೇಕಾದರೆ ಮೇಲಾಧಿಕಾರಿಗಳಿಗೆ ದೂರು ನೀಡಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ಇದರಿಂದ ನಮಗೆ ದಾರಿ ಕಾಣದೆ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರಾದ ಎನ್.ಎಂ. ಮಂಜುನಾಥ್, ಎಸ್.ಕೆ. ಜಯಪ್ಪ, ಹೂವಿನಮಡು ರವಿ, ಶ್ಯಾಗಲೆ ಕೆ.ಆರ್. ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts