More

    ಹಕ್ಕು ಚಲಾಯಿಸಿ ಮತದಾನದ ಹಬ್ಬ ಆಚರಿಸಿ

    ಬಸವಕಲ್ಯಾಣ: ಭಾರತ ದೇಶದಲ್ಲಿ ಪ್ರತಿಯೊಬ್ಬ ಮತದಾರರಿಗೂ ಮತದಾನದ ಮಾಡುವ ಹಕ್ಕು ನೀಡಲಾಗಿದೆ, ಹೀಗಾಗಿ ಮೇ ೭ರಂದು ನಡೆಯುವ ಮತದಾನ ದಿನ ಎಲ್ಲರೂ ತಪ್ಪದೆ ಹಕ್ಕು ಚಲಾಯಿಸಿ ಮತದಾನದ ಹಬ್ಬ ಆಚರಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

    ಲೋಕಸಭಾ ಚುನಾವಣೆ ನಿಮಿತ್ತ ತಾಲೂಕಿನ ಕಿಟ್ಟಾ ಗ್ರಾಪಂ ವ್ಯಾಪ್ತಿಯ ಗೋಕುಳ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಮತದಾರರ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತದಾನ ಆಗಬೇಕು. ಗ್ರಾಮದಿಂದ ವಲಸೆ ಹೋಗಿರುವವರನ್ನು ದೂರವಾಣಿ ಮೂಲಕ ಕರೆಸಿ ತಮ್ಮ ಹಕ್ಕು ಚಲಾಯಿಸುವಂತೆ ತಿಳಿಸಬೇಕು ಎಂದು ಸಲಹೆ ನೀಡಿದರು.

    ಗ್ರಾಮದಲ್ಲಿ ಶಿಕ್ಷಣ ಪಡೆದವರು ಹಾಗೂ ಯುವಕರು ನಿಮ್ಮ ನಿಮ್ಮ ಮನೆಯ ಸದಸ್ಯರಿಗೆ ಮತದಾನದ ಮಹತ್ವ ತಿಳಿಸುವುದರ ಜತೆಗೆ ಅವರಿಗೆ ಮತದಾನ ಮಾಡುವಂತೆ ತಿಳಿಸಬೇಕು ಹೊರತು ನನ್ನ ಒಂದು ಮತದಾನದಿಂದ ಏನಾಗುವುದಿದೇ ಎಂದು ಉದಾಸೀನತೆ ಬೇಡ. ನಿಮ್ಮ ಅಮೂಲ್ಯವಾದ ಮತವನ್ನು ಯಾವುದೇ ಆಸೆ-ಆಮಿಷಗಳಿಗೆ ಮಾರಿಕೊಳ್ಳದೆ, ಧೈರ್ಯದಿಂದ ಮತದಾನದ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.

    ಪಿಡಿಒ ರಿಜ್ವಾನಾ, ತಾಪಂ ಸಿಬ್ಬಂದಿ ರಾಕೇಶ ಐನೋಳ್ಳಿ, ಟಿಸಿ ಅಮರನಾಥ ಪಾಟೀಲ್, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎ ಗಳಾದ ಶ್ರೀಕಾಂತ ಪಾಟೀಲ್, ಜಾನ್, ಗ್ರಾಮಸ್ಥರು ಹಾಗೂ ನರೇಗಾ ಸಿಬ್ಬಂದಿ ಇದ್ದರು. ನಂತರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ, ಚುನಾವಣೆ ಪರ್ವ ದೇಶದ ಗರ್ವ, ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಘೋಷಣೆಯೊಂದಿಗೆ ಅಭಿಯಾನ ಮುಕ್ತಾಯ ಗೊಳಿಸಲಾಯಿತು.

    ಗಮನ ಸೆಳೆದ ರಂಗೋಲಿ: ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ನರೇಗಾ ಕಾಮಗಾರಿ ಸ್ಥಳದಲ್ಲಿ ಬೃಹತ್ ಗಾತ್ರದಲ್ಲಿ ಮತದಾನದ ಜಾಗೃತಿ ರಂಗೋಲಿ ಬಿಡಿಸಿರುವುದು ಎಲ್ಲರ ಗಮನ ಸೆಳೆಯಿತು. ಹಾಗೂ ಡ್ರೋನ್ ಕ್ಯಾಮರಾದಲ್ಲಿ ಚಿತ್ರ ಸೆರೆ ಹಿಡಿಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts