More

    ವರ್ಷದಲ್ಲಿ ಎರಡು ಬಾರಿ ಸಿಬಿಎಸ್‌ಇ ಪರೀಕ್ಷೆ: ಸಾಧ್ಯತೆಗಳ ಕುರಿತು ಪರಿಶೀಲಿಸಲು ಸಿಬಿಎಸ್‌ಇಗೆ ಸೂಚನೆ!

    ನವದೆಹಲಿ: 2025-26ನೇ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಪರಿಶೀಲಿಸುವಂತೆ ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಶಿಕ್ಷಣ ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಚೆನ್ನೈ: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ ನಂತರ ಸಾವಿಗೀಡಾದ 26 ವರ್ಷದ ಯುವಕ!

    ಈ ಕುರಿತು ಸಚಿವಾಲಯ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () ಮುಂದಿನ ತಿಂಗಳು ಶಾಲಾ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಿವೆ. ಈಗಾಗಲೇ ಸಿಬಿಎಸ್​ಇ ಸೆಮಿಸ್ಟರ್​ ಪದ್ಧತಿಯನ್ನು ಪರಿಚಯಿಸುಯವ ಯೋಜನೆಯನ್ನು ತಳ್ಳಿಹಾಕಿದೆ.
    ಪದವಿ ಪೂರ್ವ ಪ್ರವೇಶ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರದಂತೆ ಮತ್ತೊಂದು ಸೆಟ್ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಅವಕಾಶ ಕಲ್ಪಿಸಲು ಶೈಕ್ಷಣಿಕ ಕ್ಯಾಲೆಂಡರ್ ರಚಿಸುವತ್ತ ಸಿಬಿಎಸ್​ಇ ಪ್ರಕ್ರಿಯೆಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

    “2025-26ರ ಶೈಕ್ಷಣಿಕ ಅವಧಿಯಿಂದ ವರ್ಷದ ಕೊನೆಯ ಎರಡು ಆವೃತ್ತಿಗಳಲ್ಲಿ ಬೋರ್ಡ್​ ಪರೀಕ್ಷೆ ನಡೆಸಲು ಯೋಜಿಸಲಾಗುತ್ತಿದೆ. ಇದರ ಕಾರ್ಯ ವಿಧಾನಗಳು ಹೇಗಿರಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ. ವರ್ಷಕ್ಕೆ ಎರಡು ಬೋರ್ಡ್​ ಪರೀಕ್ಷೆಗಳನ್ನು 2024-25ರ ಶೈಕ್ಷಣಿಕ ಅವಧಿಯಿಂದ ಪರಿಚಯಿಸುವ ಆರಂಭಿಕ ಯೋಜನೆಯನ್ನು ಶಿಕ್ಷಣ ಸಚಿವಾಲಯದ ಆರಂಭಿಕ ಯೋಜನೆಯಾಗಿತ್ತು. ಆದಾಗ್ಯೂ, ಅದನ್ನು ಒಂದು ವರ್ಷ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

    ವರ್ಷದಲ್ಲಿ ಎರಡು ಬಾರಿ ಸಿಬಿಎಸ್‌ಇ ಪರೀಕ್ಷೆ: ಸಾಧ್ಯತೆಗಳ ಕುರಿತು ಪರಿಶೀಲಿಸಲು ಸಿಬಿಎಸ್‌ಇಗೆ ಸೂಚನೆ!

    ಈ ಸಂಬಂಧ ಸಿಬಿಎಸ್‌ಇ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಗರಿಷ್ಠ ಪ್ರಯೋಜನವನ್ನು ಪಡೆಯಬಹುದು ಮತ್ತು ಬೋರ್ಡ್ ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸಲು ಚಿಂತನೆ ಮಾಡುತ್ತಿದೆ. ಎರಡು ಪರೀಕ್ಷೆಗಳನ್ನು ನಡೆಸಲು ಪ್ರಮುಖರಾಗಿ ಎದುರಾಗುವ ಸವಾಲು ಲಾಜಿಸ್ಟಿಕ್ಸ್​ಗೆ ಸಂಬಂಧಿಸಿದ್ದಾಗಿದೆ. ಇದನ್ನು ಹೇಗೆ ಎದುರಿಸುವುದು ಹಾಗೂ ಯಾವುದೇ ಸಮಸ್ಯೆಯಾಗದಂತೆ ಪರೀಕ್ಷೆಗಳನ್ನು ನಡೆಸುವುದರ ಕುರಿತು ಮಂಡಳಿ ಪರಿಶೀಲನೆಯಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ.

    ಕಳೆದ ಅಕ್ಟೋಬರ್‌ನಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಹೇಳಿದ್ದರು. ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಯಯುವ ಜೆಇಇಯಂತೆ ಪರೀಕ್ಷೆಯಂತೆ 10 ಮತ್ತು 12 ನೇ ತರಗತಿ ತರಗತಿಗಯ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬೋರ್ಡ್​ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆಯನ್ನು ಹೊಂದಿರುತ್ತಾರೆ. ಅವುಗಳಲ್ಲಿನ ಉತ್ತಮ ಅಂಕಗಳನ್ನು ಆಯ್ಕೆ ಮಾಡಲಾಗುತ್ತದೆ ಅವರು ಹೇಳಿದರು.

    ಮದ್ಯನೀತಿ ಹಗರಣ: ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 8 ರವರೆಗೆ ವಿಸ್ತರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts