More

    ಬುಲೆಟ್​ ಟ್ರೇನ್​ನಂತೆ ಓಡುತ್ತಿರುವ ಷೇರು 1,166% ಹೆಚ್ಚಳ: ರೈಲು ಕಂಪನಿಗೆ ಈಗ ರೂ. 1900 ಕೋಟಿಯ ಟೆಂಡರ್​

    ಮುಂಬೈ: ಟಿಟಾಗರ್ ರೈಲ್ ಸಿಸ್ಟಮ್ಸ್ (Titagarh Rail Systems) ಕಂಪನಿಯು ಮಾರ್ಚ್ 7 ರಂದು ಷೇರು ಮಾರುಕಟ್ಟೆಗಳಿಗೆ ನೀಡಿದ ಮಾಹಿತಿಯಲ್ಲಿ ರೈಲ್ವೆ ಸಚಿವಾಲಯದಿಂದ 1909 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಪಡೆದಿರುವುದಾಗಿ ತಿಳಿಸಿದೆ. 4463 ವ್ಯಾಗನ್‌ಗಳನ್ನು ಪೂರೈಸುವ ಕಾಮಗಾರಿ ಇದಾಗಿದೆ.
    .
    ಈ ಬೃಹತ್​ ಕಾಮಗಾರಿ ಆದೇಶವನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಕಂಪನಿಯ ಷೇರುಗಳು ಗಮನಸೆಳೆಯಲಿವೆ. ಕಳೆದ ಒಂದು ವರ್ಷದಲ್ಲಿ ಈ ಷೇರಿನ ಬೆಲೆಗಳಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. ಇದರಿಂದಾಗಿ ಹೂಡಿಕೆದಾರರು ಶ್ರೀಮಂತರಾಗಿದ್ದಾರೆ.

    2023 ರಲ್ಲಿ ಈ ಕಂಪನಿಯು ಹೂಡಿಕೆದಾರರಿಗೆ ಲಾಭಾಂಶವನ್ನು ನೀಡಿದೆ. ಇದರಿಂದಾಗಿ ಅರ್ಹ ಹೂಡಿಕೆದಾರರು 50 ಪೈಸೆಯ ಲಾಭಾಂಶವನ್ನು ಪಡೆದರು. ಈ ಹಿಂದೆ, ಕಂಪನಿಯು 2019 ರಲ್ಲಿ 30 ಪೈಸೆಯ ಲಾಭಾಂಶವನ್ನು ನೀಡಿತ್ತು.

    ಗುರುವಾರದಂದು ಕಂಪನಿಯ ಷೇರುಗಳ ಬೆಲೆ 899.20 ರೂಪಾಯಿ ಇತ್ತು. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ ಶೇ. 223 ರಷ್ಟು ಏರಿಕೆ ಕಂಡಿದೆ. ಅಂದರೆ ಸ್ಥಾನಿಕ ಹೂಡಿಕೆದಾರರ ಹಣ ದುಪ್ಪಟ್ಟಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ಶೇ. 13.7ರಷ್ಟು ಏರಿಕೆ ಕಂಡಿದೆ. ಕಳೆದ 5 ವರ್ಷಗಳಲ್ಲಿ ಈ ಸ್ಟಾಕ್ ತನ್ನ ಹೂಡಿಕೆದಾರರಿಗೆ ಸುಮಾರು 1,166.48% ಲಾಭವನ್ನು ನೀಡಿದೆ.

    ಟ್ರೆಂಡ್‌ಲೈನ್ ಡೇಟಾದ ಪ್ರಕಾರ, ಐದು ಮಾರುಕಟ್ಟೆ ವಿಶ್ಲೇಷಕರು ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ ಷೇರುಗಳಿಗೆ ಸ್ಟ್ರಾಂಗ್ ಬೈ ರೇಟಿಂಗ್ ನೀಡಿದ್ದಾರೆ.

    ಈ ಕಂಪನಿಯ ಆದಾಯವು ಕಳೆದ 3 ವರ್ಷಗಳಲ್ಲಿ ಸರಾಸರಿ ಅಂದಾಜುಗಿಂತ 2 ಪಟ್ಟು ಹೆಚ್ಚಾಗಿದೆ. ಇದಲ್ಲದೆ, ಕಳೆದ ತ್ರೈಮಾಸಿಕದಲ್ಲಿ ಈ ಸ್ಟಾಕ್‌ನಲ್ಲಿನ ಮ್ಯೂಚುವಲ್ ಫಂಡ್​ಗಳ ಹೂಡಿಕೆಯು 1.92% ರಿಂದ 10.35 % ಕ್ಕೆ ಏರಿದೆ.

    ಬಿಎಸ್‌ಇಯಲ್ಲಿ ಕಂಪನಿಯ 52 ವಾರದ ಗರಿಷ್ಠ ಮೌಲ್ಯವು ಪ್ರತಿ ಷೇರಿಗೆ 1249 ರೂಪಾಯಿ ಹಾಗೂ ಕನಿಷ್ಠ ಬೆಲೆ 223.30 ರೂ. ಇದೆ. ಕಂಪನಿಯ ಮಾರುಕಟ್ಟೆ ಮೌಲ್ಯ 12,109.87 ಕೋಟಿ ರೂ. ಇದೆ.

    ಭಾರತ ಮತ್ತು ಇಟಲಿಯಲ್ಲಿ ಪ್ರಬಲವಾದ ಅಸ್ತಿತ್ವವನ್ನು ಹೊಂದಿರುವ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವ ಸಂಸ್ಥೆ ಇದಾಗಿದೆ. ಎರಡೂ ದೇಶಗಳಲ್ಲಿ ಅತ್ಯಾಧುನಿಕ ಕಾರ್ಖಾನೆಗಳೊಂದಿಗೆ, ಕಂಪನಿಯು ಪ್ರಯಾಣಿಕರ ಮತ್ತು ಸರಕು ಸಾಗಣೆಯ ವೈವಿಧ್ಯಮಯ ಅವಶ್ಯಕತೆಗಳನ್ನು ಪೂರೈಸಲು ಬದ್ಧವಾಗಿದೆ. ಸೆಮಿ ಹೈಸ್ಪೀಡ್​ ರೈಲುಗಳು, ಅರ್ಬನ್ ಮೆಟ್ರೋ, ಪ್ಯಾಸೆಂಜರ್ ಕೋಚ್‌ಗಳು, ಪ್ರೊಪಲ್ಷನ್ ಉಪಕರಣಗಳು ಮತ್ತು ವಿಶೇಷ ವ್ಯಾಗನ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವ್ಯಾಗನ್‌ಗಳನ್ನು ಒಳಗೊಂಡಿರುವ ಅತ್ಯಾಧುನಿಕ ಸಾರಿಗೆ ಸಾಮಗ್ರಿ ತಯಾರಿಸುವಲ್ಲಿ ಇದು ಪರಿಣತಿಯನ್ನು ಹೊಂದಿದೆ.

     

    ಬೆಂಗಳೂರಿನಲ್ಲಿ ಮನೆ ಖರೀದಿಸಬೇಡಿ… ಟಾಯ್ಲೆಟ್​ ಫ್ಲಶ್​ ಮಾಡಲೂ ನೀರಿಲ್ಲ, ದೂರದಿಂದಲೇ ಗಬ್ಬು ವಾಸನೆ… ಸಾಮಾಜಿಕ ಜಾಲತಾಣದಲ್ಲಿ ಗೋಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts