More

    ಏಷ್ಯನ್​ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಕರ್ನಾಟಕದ ಶ್ರೀಯಾ ರಾಜೇಶ್​ಗೆ ಕಂಚಿನ ಪದಕ

    ಬೆಂಗಳೂರು: ಕರ್ನಾಟಕದ ಯುವ ಅಥ್ಲೀಟ್​ ಶ್ರೀಯಾ ರಾಜೇಶ್​ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್​ 20 ವಯೋಮಿತಿಯ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನ ಮೂರನೇ ದಿನವಾದ ಶುಕ್ರವಾರ ಮಹಿಳೆಯರ 400 ಮೀಟರ್​ ಹರ್ಡಲ್ಸ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅವರು 59.20 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಈ ಸಾಧನೆ ಮಾಡಿದರು.

    ಕೂಟದ 2ನೇ ದಿನ ಮತ್ತೋರ್ವ ಕನ್ನಡತಿ ಪಾವನಾ ನಾಗರಾಜ್​ ಮಹಿಳೆಯರ ಲಾಂಗ್​ಜಂಪ್​ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದರು. ಕರ್ನಾಟಕದ ಮತ್ತೋರ್ವ ಅಥ್ಲೀಟ್​ ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್​ನಲ್ಲಿ ಫೈನಲ್​ ಪ್ರವೇಶಿಸಿ ಪದಕದ ನಿರೀಕ್ಷೆಯಲ್ಲಿದ್ದಾರೆ.

    ಲಕ್ಷಿತಾಗೆ ರಜತ: ಭಾರತದ ಲಕ್ಷಿತಾ ವಿನೋದ್​ ಸ್ಯಾಂಡಿಲ್ಯಾ ಕೂಟದ 3ನೇ ದಿನ ನಡೆದ ಮಹಿಳೆಯರ 800 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಅವರು 2 ನಿಮಿಷ, 7.10 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ದ್ವೀತಿಯ ಸ್ಥಾನ ಸಂಪಾದಿಸಿದರು.

    ವಿಶ್ವದ ಅತಿವೇಗದ ಓಟಗಾರ ಉಸೇನ್​ ಬೋಲ್ಟ್​ ಟಿ20 ವಿಶ್ವಕಪ್​ಗೆ ಪ್ರಚಾರ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts