More

    ರೂ 290ರಿಂದ 90ಕ್ಕೆ ಕುಸಿದ ಟಾಟಾ ಷೇರು: ಈಗ ಮತ್ತೆ ಬೇಡಿಕೆಯಲ್ಲಿ

    ಮುಂಬೈ: ಕಳೆದ ಕೆಲವು ದಿನಗಳಿಂದ ಷೇರುಪೇಟೆಯಲ್ಲಿ ಟಾಟಾ ಷೇರುಗಳ ಬೆಲೆ ರಾಕೆಟ್​ನಂತೆ ಏರುತ್ತಿವೆ. ಟಾಟಾ ಗ್ರೂಪ್‌ನ ಬಹುತೇಕ ಕಂಪನಿಗಳ ಷೇರುಗಳು ಶೇಕಡಾ 5 ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಟಾಟಾದ ಟೆಲಿಕಾಂ ವಲಯದ ಕಂಪನಿ – ಟಾಟಾ ಟೆಲಿಸರ್ವಿಸಸ್ (ಮಹಾರಾಷ್ಟ್ರ) ಲಿಮಿಟೆಡ್ ಅಂದರೆ ಟಿಟಿಎಂಎಲ್ ಷೇರುಗಳು ಕೂಡ ಏರಿಕೆ ಕಂಡಿವೆ. ವಾರದ ಕೊನೆಯ ವಹಿವಾಟಿನ ದಿನವಾದ ಗುರುವಾರ, ಟಿಟಿಎಂಎಲ್ ಷೇರುಗಳು ಅಂದಾಜು 8 ಪ್ರತಿಶತದಷ್ಟು ಏರಿಕೆಯಾಗಿ 89.89 ರೂ. ತಲುಪಿತು.

    ಸೆಪ್ಟೆಂಬರ್ 15, 2023 ರಂದು ಈ ಷೇರು ರೂ 109.10 ತಲುಪಿತು. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಮಾರ್ಚ್ 2023ರಲ್ಲಿ, ಈ ಷೇರಿನ ಬೆಲೆಯು 52 ವಾರಗಳ ಕನಿಷ್ಠ ಮಟ್ಟವಾದ ರೂ 49.80 ಕ್ಕೆ ಕುಸಿದಿತ್ತು. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 290.15 ಹಾಗೂ ಕನಿಷ್ಠ 1.80 ರೂಪಾಯಿ ಆಗಿದೆ.

    ಕಳೆದ ಆರು ತಿಂಗಳ ಮಾದರಿಯನ್ನು ನೋಡಿದರೆ, ಟಿಟಿಎಂಎಲ್ ಷೇರುಗಳು ನಕಾರಾತ್ಮಕ ಆದಾಯವನ್ನು ನೀಡಿವೆ. ಒಂದು ತಿಂಗಳು ಮತ್ತು ಮೂರು ತಿಂಗಳ ಅವಧಿಯಲ್ಲಿ, ಸೆನ್ಸೆಕ್ಸ್ ಸೂಚ್ಯಂಕಕ್ಕೆ ಹೋಲಿಸಿದರೆ ಈ ಷೇರು ಋಣಾತ್ಮಕವಾಗಿಯೇ ಉಳಿದಿದೆ. ಇದು ಒಂದು ವರ್ಷದ ಅವಧಿಯಲ್ಲಿ ಧನಾತ್ಮಕ ಆದಾಯವನ್ನು ನೀಡುವ ಸ್ಟಾಕ್ ಆಗಿ ಮಾರ್ಪಟ್ಟಿದೆ.

    ಈ ಕಂಪನಿಯ 74.36 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಸಾರ್ವಜನಿಕ ಷೇರುದಾರರು 25.64 ಶೇಕಡಾ ಪಾಲನ್ನು ಹೊಂದಿದ್ದಾರೆ.

    ಟಿಟಿಎಂಎಲ್‌ನಲ್ಲಿ ಟಾಟಾ ಸನ್ಸ್ ಪ್ರವರ್ತಕ ಆಗಿದೆ. ಡಿಸೆಂಬರ್ ತ್ರೈಮಾಸಿಕದ ಪ್ರಕಾರ, ಇದು ಕಂಪನಿಯ 38,27,59,467 ಅಥವಾ ಶೇಕಡಾ 19.58 ಷೇರುಗಳನ್ನು ಹೊಂದಿದೆ. ಮತ್ತೊಂದು ಪ್ರವರ್ತಕ ಸಂಸ್ಥೆಯಾದ ಟಾಟಾ ಟೆಲಿಸರ್ವಿಸಸ್ 94,41,74,817 ಅಥವಾ ಶೇಕಡಾ 48.30 ಷೇರುಗಳನ್ನು ಹೊಂದಿದೆ.

    ವಾಸ್ತವವಾಗಿ, ಟಾಟಾ ಸನ್ಸ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ನಿಯಮಗಳಿಗೆ ಅನುಗುಣವಾಗಿ ತನ್ನನ್ನು ಪುನರ್ರಚಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಟಾಟಾ ಸನ್ಸ್ ಅನ್ನು ಕಳೆದ ವರ್ಷ ಆರ್‌ಬಿಐ ಉನ್ನತ ಶ್ರೇಣಿಯ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಎಂದು ವರ್ಗೀಕರಿಸಿದೆ, ಕಂಪನಿಯು ಸೆಪ್ಟೆಂಬರ್ 2025 ರ ವೇಳೆಗೆ ಎಕ್ಸ್‌ಚೇಂಜ್‌ಗಳಲ್ಲಿ ತನ್ನನ್ನು ಪಟ್ಟಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಧ್ಯಮ ವರದಿಗಳನ್ನು ನಂಬುವುದಾದರೆ, ಇದೀಗ ಟಾಟಾ ಮ್ಯಾನೇಜ್‌ಮೆಂಟ್ ಈ ಬಗ್ಗೆ ಕ್ರಮ ಕೈಗೊಳ್ಳಲು ಆರಂಭಿಸಿದೆ.

    ರೂ 96 ಸಾವಿರ ಕೋಟಿಯ ಸ್ಪೆಕ್ಟ್ರಂ ಹರಾಜು: ಜಿಯೋ, ಏರ್​ಟೆಲ್​, ವಿಐ ನಡುವೆ ಪೈಪೋಟಿ; ಅದಾನಿ ಗ್ರೂಪ್​ನಿಂದಲೂ ಸ್ಪರ್ಧೆ

    ಷೇರು ಮಾರುಕಟ್ಟೆ ಪ್ರವೇಶಿಸಲಿದೆಯೇ ಟಾಟಾ ಸನ್ಸ್?: ವಿನಾಯಿತಿ ನೀಡದೆ ಆರ್​ಬಿಐ ಕಠಿಣ ಕ್ರಮ ಕೈಗೊಂಡಿದ್ದೇಕೆ?

    ಬೆಂಗಳೂರಿನಲ್ಲಿ ಜಲ ಬಿಕ್ಕಟ್ಟು ಉಲ್ಬಣ: ವಿವಿಧ ಉದ್ದೇಶಕ್ಕೆ ನೀರು ಬಳಕೆ ನಿಷೇಧ, ಟ್ಯಾಂಕರ್​ ರೇಟ್​ ಫಿಕ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts