More

    ರೂ 96 ಸಾವಿರ ಕೋಟಿಯ ಸ್ಪೆಕ್ಟ್ರಂ ಹರಾಜು: ಜಿಯೋ, ಏರ್​ಟೆಲ್​, ವಿಐ ನಡುವೆ ಪೈಪೋಟಿ; ಅದಾನಿ ಗ್ರೂಪ್​ನಿಂದಲೂ ಸ್ಪರ್ಧೆ

    ಮುಂಬೈ: ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ ಮುನ್ನವೇ ಟೆಲಿಕಾಂ ಉದ್ಯಮಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಗಳು ಬರುತ್ತಿವೆ. ಸ್ಪೆಕ್ಟ್ರಮ್ (ತರಂಗಾಂತರ) ಅನ್ನು ದೂರಸಂಪರ್ಕ ಇಲಾಖೆ (DoT) ಹರಾಜು ಮಾಡುತ್ತದೆ.

    ಈ ಹರಾಜಿನಲ್ಲಿ ಭಾಗವಹಿಸಲು ಕಂಪನಿಗಳು ಏಪ್ರಿಲ್ 22, 2024 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಹರಾಜು ಪ್ರಕ್ರಿಯೆಯು 20 ಮೇ 2024 ರಿಂದ ಪ್ರಾರಂಭವಾಗುತ್ತದೆ. ಸರ್ಕಾರವು ಮೊಬೈಲ್ ಸೇವೆಗಳಿಗಾಗಿ 8 ತರಂಗಾಂತರಗಳನ್ನು ಹರಾಜು ಮಾಡಲಿದೆ. ಈ ಸ್ಪೆಕ್ಟ್ರಂ ಹರಾಜಿನ ಮೂಲ ಬೆಲೆ 96,317.65 ಕೋಟಿ ರೂಪಾಯಿ ಆಗಿದೆ.

    ಇದರರ್ಥ ಮತ್ತೊಮ್ಮೆ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾದಂತಹ ಟೆಲಿಕಾಂ ಕಂಪನಿಗಳು ಸ್ಪೆಕ್ಟ್ರಮ್‌ಗಾಗಿ ಪರಸ್ಪರ ಪೈಪೋಟಿ ನಡೆಸಲಿವೆ. ಇದೇ ಸಮಯದಲ್ಲಿ, ಕೆಲವು ಖರೀದಿಗಳನ್ನು ಅದಾನಿ ಗ್ರೂಪ್ ಕೂಡ ಮಾಡಬಹುದು.

    ಯಾವ ಬ್ಯಾಂಡ್‌ಗಳನ್ನು ಹರಾಜು ಮಾಡಲಾಗುತ್ತದೆ?:
    ಟೆಲಿಕಾಂ ಇಲಾಖೆ ಹೊರಡಿಸಿರುವ ಸೂಚನೆಯ ಪ್ರಕಾರ, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಮತ್ತು 26 GHz ಬ್ಯಾಂಡ್​ ಸ್ಪೆಕ್ಟ್ರಮ್​ಗಳ ಹರಾಜು ನಡೆಯಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಈ ತರಂಗಾಂತರಗಳ ಹರಾಜಿಗೆ ಮೋದಿ ಸಚಿವ ಸಂಪುಟವು ತನ್ನ ಅನುಮೋದನೆಯನ್ನು ನೀಡಿದೆ.

    ಮೇ 20 ರಂದು ಹರಾಜು ಪ್ರಕ್ರಿಯೆಗೆ ಮುನ್ನ ಮೇ 13 ಮತ್ತು 14 ರಂದು ಅಭ್ಯಾಸ ಹರಾಜು (ಅಣಕು ಹರಾಜು) ನಡೆಸಲಾಗುವುದು.

    ತಜ್ಞರ ಅಭಿಪ್ರಾಯವೇನು?:

    ದೇಶದ ದೊಡ್ಡ ಟೆಲಿಕಾಂ ಕಂಪನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಟೆಲಿಕಾಂ ಉದ್ಯಮಕ್ಕೆ ಸಂಬಂಧಿಸಿದ ತಜ್ಞರು ನಂಬಿದ್ದಾರೆ.
    ಕೆಲವು ಆಯ್ದ ಖರೀದಿಗಳನ್ನು ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮಾಡಬಹುದೆಂದು ಅವರು ಹೇಳುತ್ತಾರೆ. ಇದಲ್ಲದೆ, ಅದಾನಿ ಗ್ರೂಪ್‌ನಿಂದ ಕಡಿಮೆ ಸ್ಪೆಕ್ಟ್ರಮ್ ಬ್ಯಾಂಡ್‌ನಲ್ಲಿ ಕೆಲವು ಖರೀದಿಗಳು ಸಹ ಸಾಧ್ಯವಿದೆ. ಆದರೂ, ಅದಾನಿ ಗ್ರೂಪ್‌ಗ್ರೂ ಡೇಟಾ ಕೇಂದ್ರಗಳಿಗಾಗಿ ಸ್ಪೆಕ್ಟ್ರಮ್ ಖರೀದಿಸಬಹುದು. ಅವರು ಟೆಲಿಕಾಂ ಉದ್ಯಮಗಳಲ್ಲಿ ನೇರ ಪ್ರವೇಶ ಮಾಡಲು ಹೋಗುವುದಿಲ್ಲ.

    ಷೇರು ಮಾರುಕಟ್ಟೆ ಪ್ರವೇಶಿಸಲಿದೆಯೇ ಟಾಟಾ ಸನ್ಸ್?: ವಿನಾಯಿತಿ ನೀಡದೆ ಆರ್​ಬಿಐ ಕಠಿಣ ಕ್ರಮ ಕೈಗೊಂಡಿದ್ದೇಕೆ?

    ಬೆಂಗಳೂರಿನಲ್ಲಿ ಜಲ ಬಿಕ್ಕಟ್ಟು ಉಲ್ಬಣ: ವಿವಿಧ ಉದ್ದೇಶಕ್ಕೆ ನೀರು ಬಳಕೆ ನಿಷೇಧ, ಟ್ಯಾಂಕರ್​ ರೇಟ್​ ಫಿಕ್ಸ್​

    ಈ ಐಪಿಒದಲ್ಲಿ ಸ್ಟಾಕ್​ ಖರೀದಿಸಿದರೆ ಲಾಭ ಖಚಿತ: 75ರ ಷೇರು ಗ್ರೇ ಮಾರುಕಟ್ಟೆಯಲ್ಲಿ 163 ರೂಪಾಯಿಗೆ ವಹಿವಾಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts