More

    ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ ನೇತ್ರಾ

    ನವದೆಹಲಿ: ಭಾರತದ ನೇತ್ರಾ ಕುಮಾನನ್​ ಸೈಲಿಂಗ್​ನಲ್ಲಿ ಸತತ 2ನೇ ಬಾರಿಗೆ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದ್ದಾರೆ. ಫ್ರಾನ್ಸ್​ನ ಹೇರೆಸ್​ನಲ್ಲಿ ನಡೆದ ಒಲಿಂಪಿಕ್ಸ್​ ಅರ್ಹತಾ ಕೂಟವಾದ ಲಾಸ್ಟ್​ ಚಾನ್ಸ್​ ರೆಗಟ್ಟಾದಲ್ಲಿ ನೇತ್ರಾ ಕುಮಾನನ್​ 67 ಅಂಕಗಳನ್ನು ಕಲೆಹಾಕಿ 5ನೇ ಸ್ಥಾನ ಪಡೆಯುವ ಮೂಲಕ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದರು.

    ಅವರು ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲೂ ಸ್ಪರ್ಧಿಸಿದ್ದರು. ಎಮರ್ಜಿಂಗ್​ ನೇಷನ್ಸ್​ ಪ್ರೋಗ್ರಾಂ ಅನ್ವಯ ಅವರು ಸೈಲಿಂಗ್​ನಲ್ಲಿ ಈ ಅರ್ಹತೆ ಸಂಪಾದಿಸಿದರು. ಸೈಲಿಂಗ್​ನಲ್ಲಿ ಅಷ್ಟೇನೂ ಉನ್ನತ ಸಾಧನೆ ತೋರದ ದೇಶದ ಸ್ಪರ್ಧಿಗಳಿಗಾಗಿ ವಿಶ್ವ ಸೈಲಿಂಗ್​ ಸಂಸ್ಥೆ ಈ ವಿಶೇಷ ಅವಕಾಶವನ್ನು ಕಲ್ಪಿಸಿತ್ತು. ರೊಮೇನಿಯಾ, ಸೈಪ್ರಸ್​, ಸ್ಲೊವೇನಿಯಾದ ಸ್ಪರ್ಧಿಗಳು ಕೂಟದಲ್ಲಿ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದರು.

    ವಿಶ್ವದ ಅತಿವೇಗದ ಓಟಗಾರ ಉಸೇನ್​ ಬೋಲ್ಟ್​ ಟಿ20 ವಿಶ್ವಕಪ್​ಗೆ ಪ್ರಚಾರ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts