More

    ಬೆಂಗಳೂರಿನಲ್ಲಿ ಜಲ ಬಿಕ್ಕಟ್ಟು ಉಲ್ಬಣ: ವಿವಿಧ ಉದ್ದೇಶಕ್ಕೆ ನೀರು ಬಳಕೆ ನಿಷೇಧ, ಟ್ಯಾಂಕರ್​ ರೇಟ್​ ಫಿಕ್ಸ್​

    ಬೆಂಗಳೂರು: ಬೆಂಗಳೂರಿನ ತೀವ್ರ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದಲ್ಲಿ ಕಾರು ತೊಳೆಯಲು, ತೋಟಗಾರಿಕೆ, ನಿರ್ಮಾಣ, ನೀರಿನ ಕಾರಂಜಿ, ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಕುಡಿಯುವ ನೀರಿನ ಬಳಕೆಯನ್ನು ಶುಕ್ರವಾರ ನಿಷೇಧಿಸಿದೆ.

    ಈ ಆದೇಶ ಉಲ್ಲಂಘಿಸಿದಲ್ಲಿ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ನಗರದಲ್ಲಿ ಸಾವಿರಾರು ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ಬಿಕ್ಕಟ್ಟು ಸೃಷ್ಟಿಯಾಗಿದೆ.

    ಕಳೆದ 2-3 ವಾರಗಳಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್ ನೀರಿನ ಬೆಲೆಗಳು ಮೂರು ಪಟ್ಟು ಹೆಚ್ಚಾಗಿದೆ. ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಬೆಂಗಳೂರು ನಗರ ಜಿಲ್ಲಾಡಳಿತವು ಗುರುವಾರ ಪ್ರತಿ ಲೋಡ್‌ಗೆ ಸರಬರಾಜು ಮಾಡುವ ಸಾಮರ್ಥ್ಯ ಮತ್ತು ದೂರದ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸಿದೆ.

    ಈ ಹೊಸ ಕಾರ್ಡ್ ದರ (ಇದು ಜಿಎಸ್‌ಟಿಯನ್ನು ಒಳಗೊಂಡಿರುತ್ತದೆ) ತಕ್ಷಣದಿಂದಲೇ ಜಾರಿಗೆ ಬಂದಿದೆ. 5 ಕಿ.ಮೀ ಒಳಗೆ ಸರಬರಾಜು ಮಾಡುವ 6,000 ಲೀಟರ್ ನೀರಿಗೆ 600 ರೂ.; 10 ಕಿ.ಮೀ ಒಳಗೆ ಪೂರೈಕೆ ಮಾಡಿದರೆ 750 ರೂ. ನಿಗದಿ ಮಾಡಲಾಗಿದೆ. 8,000 ಲೀಟರ್ ನೀರಿನ ಟ್ಯಾಂಕರ್‌ಗೆ 700 ರೂ. (5 ಕಿ.ಮೀ ಒಳಗೆ) ಮತ್ತು 850 ರೂ. 10 ಕಿಮೀ) ದರ ವಿಧಿಸಲಾಗಿದೆ. ದೊಡ್ಡ ನೀರಿನ ಟ್ಯಾಂಕರ್‌ಗಳಿಗೆ (12,000 ಲೀಟರ್) ಬೆಲೆ 1,000 ರಿಂದ 1,200 ರೂ. ಇದೆ. ದೊಡ್ಡ ಟ್ಯಾಂಕರ್‌ಗಳಲ್ಲಿ ಹೆಚ್ಚುವರಿ ಪ್ರತಿ ಕಿಲೋ ಲೀಟರ್‌ಗೆ 50 ರೂಪಾಯಿ ಸಂಗ್ರಹಿಸಲು ಆಡಳಿತ ಅವಕಾಶ ಕಲ್ಪಿಸಲಾಗಿದೆ.

    ಬೆಲೆಗಳ ಮಿತಿಯನ್ನು ಕಾಯ್ದುಕೊಂಡಿರುವುದು ಸರ್ಕಾರದ ದಿಟ್ಟ ಕ್ರಮವಾಗಿದೆ. ಪ್ರತಿ ಟ್ಯಾಂಕರ್‌ಗೆ 2,000 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದ ಟ್ಯಾಂಕರ್ ಕಾರ್ಟೆಲ್‌ನಿಂದ ಸಾಮಾನ್ಯ ಜನರಿಗೆ ಕಿರುಕುಳವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಖಾಸಗಿ ನಿರ್ವಾಹಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts