1 ಷೇರಿಗೆ 2 ಬೋನಸ್​ ಷೇರು: ಕೇವಲ 3 ತಿಂಗಳಲ್ಲೇ ದುಪ್ಪಟ್ಟಾದ ಸ್ಟಾಕ್​ಗೆ ಬೇಡಿಕೆ, ಅಪ್ಪರ್​ ಸರ್ಕ್ಯೂಟ್​ ಹಿಟ್​

blank

ಮುಂಬೈ: ಕಳೆದ ಕೆಲವು ತಿಂಗಳುಗಳಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸಿದ ಕಂಪನಿಗಳಲ್ಲಿ ನಾಪ್​ಬುಕ್ಸ್​ ಲಿಮಿಟೆಡ್​ (Naapbooks Ltd) ಒಂದಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಕೇವಲ 3 ತಿಂಗಳಲ್ಲಿ ಶೇಕಡಾ 100 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈಗ ಕಂಪನಿಯು 2 ಬೋನಸ್ ಷೇರುಗಳನ್ನು ನೀಡಲು ನಿರ್ಧರಿಸಿರುವುದರಿಂದ ಷೇರುಗಳಿಗೆ ಬೇಡಿಕೆ ಮುಂದುವರಿದಿದೆ.

ಈ ಕಂಪನಿಯು 1 ಷೇರಿನ ಮೇಲೆ 2 ಬೋನಸ್ ಷೇರುಗಳನ್ನು ನೀಡುತ್ತಿದ್ದು, 10 ರೂ ಮುಖಬೆಲೆಯ 1 ಷೇರಿನ ಮೇಲೆ 2 ಬೋನಸ್ ಷೇರುಗಳನ್ನು ನೀಡಲಾಗುವುದು ಎಂದು ಷೇರು ಮಾರುಕಟ್ಟೆಗಳಿಗೆ ನೀಡಿರುವ ಮಾಹಿತಿಯಲ್ಲಿ ಕಂಪನಿ ತಿಳಿಸಿದೆ. ಈ ಬೋನಸ್ ವಿತರಣೆಯ ದಾಖಲೆ ದಿನಾಂಕವನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ. ಆದರೂ, ಬೋನಸ್ ವಿತರಣೆಯನ್ನು ಘೋಷಿಸಿದ 2 ತಿಂಗಳೊಳಗೆ ಅರ್ಹ ಹೂಡಿಕೆದಾರರಿಗೆ ಜಮಾ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯು ಮುಂದಿನ ದಿನಗಳಲ್ಲಿ ದಾಖಲೆ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.

ಗುರುವಾರ ಕಂಪನಿಯ ಷೇರುಗಳ ಬೆಲೆ ಶೇಕಡಾ 5 ರಷ್ಟು ಹೆಚ್ಚಳವಾಗಿ, ಅಪ್ಪರ್​ ಸರ್ಕ್ಯೂಟ್ ಹಿಟ್ ಆದವು. ಈಗ ಕಂಪನಿಯ ಷೇರುಗಳ ಬೆಲೆ 240.45 ರೂ. ಮುಟ್ಟಿದೆ. ಇದು ಕಂಪನಿಯ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಕಂಪನಿಯ ಷೇರು ಬೆಲೆಗಳು ಶೇ. 39ರಷ್ಟು ಏರಿಕೆ ಕಂಡಿವೆ. 3 ತಿಂಗಳಲ್ಲಿ ಶೇಕಡಾ 122.30 ರಷ್ಟು ಹೆಚ್ಚಳವಾಗಿವೆ. ಈ ಬೋನಸ್ ಷೇರುಗಳನ್ನು ವಿತರಿಸುವ ಕಂಪನಿಯ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 212 ಪ್ರತಿಶತದಷ್ಟು ಹೆಚ್ಚಾಗಿದೆ.

ಈ ಐಪಿಒದಲ್ಲಿ ಸ್ಟಾಕ್​ ಖರೀದಿಸಿದರೆ ಲಾಭ ಖಚಿತ: 75ರ ಷೇರು ಗ್ರೇ ಮಾರುಕಟ್ಟೆಯಲ್ಲಿ 163 ರೂಪಾಯಿಗೆ ವಹಿವಾಟು

ಒಂದೇ ವರ್ಷದಲ್ಲಿ 1 ಲಕ್ಷವಾಯ್ತು 32 ಲಕ್ಷ: ಈಗ ಒಂದು ಷೇರಿಗೆ ಆರು ಬೋನಸ್​ ಸ್ಟಾಕ್​ ನೀಡಲಿದೆ ಕಂಪನಿ

ಟಾಟಾ ಪವರ್​ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ: ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

Share This Article

ಚಳಿಗಾಲದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tender coconut

Tender coconut : ನೈಸರ್ಗಿಕವಾಗಿ ಹೇರಳವಾಗಿ ದೊರೆಯುವ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಲೆಕ್ಟ್ರೋಲೈಟ್ಸ್​, ವಿಟಮಿನ್ಸ್​,…

Clay Pots : ಹೊಸ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವ ಮುನ್ನ ಈ 3 ವಿಷಯಗಳನ್ನು ನೆನಪಿನಲ್ಲಿಡಿ

Clay Pots : ಈಗ ಸ್ಟೀಲ್, ಕಬ್ಬಿಣ, ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ.…

Hair care : ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

Hair care : ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ…