More

    ಟಾಟಾ ಪವರ್​ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ: ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

    ಮುಂಬೈ; ಗುರುವಾರದ ವಹಿವಾಟಿನಲ್ಲಿ ಟಾಟಾ ಪವರ್ ಷೇರುಗಳ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ಈ ಷೇರು ಬೆಲೆ 7.67% ಏರಿಕೆಯಾಗಿ 425.25 ರೂಪಾಯಿ ತಲುಪಿತು. ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಕಳೆದೊಂದು ವಾರದಲ್ಲಿ ಈ ಷೇರಿನ ಬೆಲೆ 14.39%ರಷ್ಟು ಹೆಚ್ಚಳ ಕಂಡಿದೆ.

    ಈ ಮೂಲಕ ಟಾಟಾ ಪವರ್‌ ಕಂಪನಿಯ ಮಾರುಕಟ್ಟೆ ಮೌಲ್ಯ 1.35 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಮಹಾರಾಷ್ಟ್ರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಗುರುವಾರ 2024-25 ರ ಆರ್ಥಿಕ ವರ್ಷಕ್ಕೆ ಟಾಟಾ ಪವರ್‌ಗೆ ಅಂದಾಜು 24% ರಷ್ಟು ಸರಾಸರಿ ಸುಂಕ ಹೆಚ್ಚಳವನ್ನು ಅನುಮೋದಿಸಿದೆ. ಪರಿಷ್ಕೃತ ಸುಂಕಗಳು ಏಪ್ರಿಲ್ 1, 2024 ರಿಂದ ಜಾರಿಗೆ ಬರುತ್ತವೆ. ಬ್ರೋಕರೇಜ್ ಸಂಸ್ಥೆಗಳ ಪ್ರಕಾರ, ಟಾಟಾ ಪವರ್ ಷೇರುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆಂಟಿಟ್ರಸ್ಟ್ ಬ್ರೋಕಿಂಗ್ ಸಂಸ್ಥೆಯು ಈ ಷೇರಿನ ಗುರಿ ಬೆಲೆ 450 ರೂಪಾಯಿಗೆ ನಿಗದಿ ಮಾಡಿದೆ.

    ಟಾಟಾ ಪವರ್ ಸ್ಟಾಕ್ ಮಾರ್ಚ್ 28, 2023 ರಂದು 52 ವಾರಗಳ ಕನಿಷ್ಠ ಬೆಲೆ ರೂ 182.45 ಕ್ಕೆ ಕುಸಿದಿತ್ತು. ಒಂದು ವರ್ಷದಲ್ಲಿ ಈ ಷೇರಿನ ಬೆಲೆ 102% ಮತ್ತು 6 ತಿಂಗಳಲ್ಲಿ 61% ರಷ್ಟು ಹೆಚ್ಚಾಗಿದೆ.

    ಟಾಟಾ ಪವರ್ ಕಂಪನಿಯು ತನ್ನ ಮೂರನೇ ತ್ರೈಮಾಸಿಕದಲ್ಲಿ (ಕ್ಯೂ3 ಎಫ್‌ವೈ24) ರೂ 1,076.12 ಕೋಟಿ ನಿವ್ವಳ ಲಾಭ ಮಾಡಿದೆ. ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಹಣಕಾಸು ಪರಿಹಾರಗಳನ್ನು ಒದಗಿಸಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗಿನ ತನ್ನ ಪಾಲುದಾರಿಕೆಯ ನವೀಕರಣ ಮತ್ತು ವಿಸ್ತರಣೆಯನ್ನು ಇತ್ತೀಚೆಗೆ, ಟಾಟಾ ಪವರ್ ಸೋಲಾರ್ ಸಿಸ್ಟಮ್ಸ್ ಲಿಮಿಟೆಡ್ ಘೋಷಿಸಿದೆ.

    ಬರಲಿದೆಯೇ ಟಾಟಾ ಸನ್ಸ್​ ಐಪಿಒ?: ಈ ಚರ್ಚೆಯ ನಡುವೆಯೇ ಟಾಟಾ ಕೆಮಿಕಲ್ಸ್, ಟಾಟಾ ಇನ್ವೆಸ್ಟ್​ಮೆಂಟ್​​ ಷೇರುಗಳ ಬೆಲೆ ಗಗನಕ್ಕೆ

    21,382% ಏರಿಕೆ ಕಂಡ ಫಾರ್ಮಾ ಕಂಪನಿ ಷೇರು ಬೆಲೆ: ಸ್ವಾಧೀನ ಸುದ್ದಿ ಬರುತ್ತಿದ್ದಂತೆಯೇ ಅಪ್ಪರ್ ಸರ್ಕ್ಯೂಟ್ ಹಿಟ್​

    ಪ್ಲಾಸ್ಟಿಕ್‌ ಮರುಬಳಕೆ ಪೇಟೆಂಟ್​ ಸಿಕ್ಕ ತಕ್ಷಣವೇ 5 ರೂಪಾಯಿ ಷೇರಿಗೆ ಡಿಮ್ಯಾಂಡು: ಹೂಡಿಕೆದಾರರಿಂದ ಭರ್ಜರಿ ಖರೀದಿ, ಅಪ್ಪರ್​ ಸರ್ಕ್ಯೂಟ್​ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts