ಮುಂಬೈ: ಸ್ಮಾಲ್‌ಕ್ಯಾಪ್ ಕಂಪನಿಯಾಗಿರುವ ಕೇಸರ್ ಇಂಡಿಯಾ ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದೆ. ರಿಯಲ್ ಎಸ್ಟೇಟ್ ಕಂಪನಿಯಾಗಿರುವ ಕೇಸರ್ ಇಂಡಿಯಾ (Kesar India) ತನ್ನ ಹೂಡಿಕೆದಾರರಿಗೆ 6:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುತ್ತಿದೆ. ಅಂದರೆ, ಕಂಪನಿಯು ಪ್ರತಿ ಷೇರಿಗೆ 6 ಬೋನಸ್ ಷೇರುಗಳನ್ನು ನೀಡುತ್ತದೆ. ಕಂಪನಿಯು ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು 19 ಮಾರ್ಚ್ 2024 ಎಂದು ನಿಗದಿಪಡಿಸಿದೆ. ಕಳೆದ ಒಂದು ವರ್ಷದಲ್ಲಿ ಕೇಸರ್ ಇಂಡಿಯಾದ ಷೇರುಗಳು ತ್ವರಿತ ಏರಿಕೆ ಕಂಡಿವೆ. ಕಳೆದ ಒಂದು ವರ್ಷದಲ್ಲಿ ಕೇಸರ್ ಇಂಡಿಯಾದ ಷೇರುಗಳ ಬೆಲೆ 3100% ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ 106.71% ಹೆಚ್ಚಳವಾಗಿದೆ.
ಕೇಸರ್ ಇಂಡಿಯಾದ ಷೇರುಗಳ ಬೆಲೆ ಮಾರ್ಚ್ 10, 2023 ರಂದು 116 ರೂ. ಇತ್ತು. ಈಗ ಈ ಷೇರುಗಳ ಬೆಲೆ ಮಾರ್ಚ್ 7, 2024 ರಂದು 3713.15 ರೂಪಾಯಿ ತಲುಪಿದೆ. ಕಳೆದ ಒಂದು ವರ್ಷದಲ್ಲಿ ಷೇರು ಬೆಲೆ 3100ರಷ್ಟು ಜಿಗಿತ ಕಂಡುಬಂದಿದೆ. ಮಾರ್ಚ್ 10, 2023 ರಂದು ವ್ಯಕ್ತಿಯೊಬ್ಬರು ಈ ಷೇರುಗಳಲ್ಲಿ 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿ ಈಗಲೂ ಅವರ ಹೂಡಿಕೆಯನ್ನು ಉಳಿಸಿಕೊಂಡಿದ್ದರೆ, ಈ ಷೇರುಗಳ ಪ್ರಸ್ತುತ ಮೌಲ್ಯವು 32 ಲಕ್ಷ ರೂಪಾಯಿ ಆಗುತ್ತದೆ.
ಕೇಸರ್ ಇಂಡಿಯಾ ಷೇರುಗಳ 52 ವಾರಗಳ ಗರಿಷ್ಠ ಬೆಲೆ 4319.85 ರೂ. ಹಾಗೂ ಕನಿಷ್ಠ ಬೆಲೆ 100.40 ರೂಪಾಯಿ ಇದೆ.
ಕಳೆದ 6 ತಿಂಗಳಲ್ಲಿ ಈ ಷೇರುಗಳ ಬೆಲೆ 1757% ರಷ್ಟು ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ಸೆಪ್ಟೆಂಬರ್ 8, 2023 ರಂದು 200 ರೂ. ಇತ್ತು. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಷೇರುಗಳ ಬೆಲೆ 263% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ 1024.65 ರೂ.ನಿಂದ 3713.15 ರೂ.ಗೆ ಏರಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಕಂಪನಿಯು 5.25 ಕೋಟಿ ರೂಪಾಯಿ ಲಾಭ ಗಳಿಸಿದೆ.
ಟಾಟಾ ಪವರ್ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ: ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ
21,382% ಏರಿಕೆ ಕಂಡ ಫಾರ್ಮಾ ಕಂಪನಿ ಷೇರು ಬೆಲೆ: ಸ್ವಾಧೀನ ಸುದ್ದಿ ಬರುತ್ತಿದ್ದಂತೆಯೇ ಅಪ್ಪರ್ ಸರ್ಕ್ಯೂಟ್ ಹಿಟ್