More

    ಈ 5 ಪ್ರಮುಖ ಷೇರುಗಳಲ್ಲಿ ಹೂಡಿಕೆಗೆ ತಜ್ಞರ ಸಲಹೆ: ಟಾರ್ಗೆಟ್​ ಪ್ರೈಸ್​, ಸ್ಟಾಪ್​ ಲಾಸ್​ ಹೀಗಿದೆ…

    ಮುಂಬೈ: ವಿವಿಧ ವಲಯಗಳ ಈ ಷೇರುಗಳಲ್ಲಿ ಮುಂದಿನ ದಿನಗಳಲ್ಲಿ ಏರಿಕೆಯನ್ನು ಕಾಣಬಹುದು. ಅನೇಕ ವಿಶ್ಲೇಷಕರು ಅನೇಕ ಷೇರುಗಳ ಕುರಿತು ತಮ್ಮ ತಾಂತ್ರಿಕ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಮುಂಬರುವ ಸಮಯದಲ್ಲಿ ಇವು 11% ವರೆಗೆ ಹೆಚ್ಚಾಗಬಹುದು. ವಿವಿಧ ತಾಂತ್ರಿಕ ವಿಶ್ಲೇಷಕರಿಂದ ಆಯ್ದ 5 ಷೇರುಗಳ ವಿವರ ಇಲ್ಲಿದೆ.

    ಫಿನೋಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Finolex Industries Ltd):

    ಫಿನೋಲೆಕ್ಸ್ ಇಂಡಸ್ಟ್ರೀಸ್ ಷೇರುಗಳನ್ನು ರೂ. 226-230 ನಲ್ಲಿ ಖರೀದಿಸಿ. ಸ್ಟಾಪ್​ ಲಾಸ್​ ಬೆಲೆ ರೂ 214 ಇರಲಿ. ಟಾರ್ಗೆಟ್​ ಪ್ರೈಸ್​ ರೂ. 248-252 ಇರಲಿ. ಹೀಗಾದರೆ, ಸಂಭಾವ್ಯ ಲಾಭ 11%.

    ಈ ಷೇರನ್ನು ರೂ 226-230 ಕ್ಕೆ ಖರೀದಿಸಲು ಏಂಜೆಲ್ ಒನ್ ಸಂಸ್ಥೆಯ ಹಿರಿಯ ತಾಂತ್ರಿಕ ವಿಶ್ಲೇಷಕ ಓಶೋ ಕೃಷ್ಣ ಶಿಫಾರಸು ಮಾಡುತ್ತಾರೆ, ಟಾರ್ಗೆಟ್​ ಪ್ರೈಸ್​ ರೂ 248-252ಕ್ಕೆ ನಿಗದಿಪಡಿಸಿದ್ದಾರೆ.

    ನೆಲ್ಕೊ ಲಿಮಿಟೆಡ್​ (Nelco Ltd):

    ಓಶೋ ಕೃಷ್ಣ ಅವರು ಈ ಷೇರನ್ನು 760 ರೂಪಾಯಿಗಳ ಸ್ಟಾಪ್ ಲಾಸ್‌ನೊಂದಿಗೆ 800 ರೂಪಾಯಿಗೆ ಖರೀದಿಸಲು ಸಲಹೆ ನೀಡಿದ್ದಾರೆ. ಅಲ್ಲದೆ ಇದರ ಟಾರ್ಗೆಟ್​ ಪ್ರೈಸ್​ ಅನ್ನು 860-880 ರೂ.ಗೆ ನಿಗದಿಪಡಿಸಿದ್ದಾರೆ. ಹೀಗಾದರೆ, ಶೇಕಡಾ 10ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

    ಟಾಟಾ ಸ್ಟೀಲ್ ಲಿಮಿಟೆಡ್​ (Tata Steel Ltd):

    ಮೆಹ್ತಾ ಇಕ್ವಿಟೀಸ್‌ನ ತಾಂತ್ರಿಕ ವಿಶ್ಲೇಷಕ ರಿಯಾಂಕ್ ಅರೋರಾ ಅವರು ಟಾಟಾ ಸ್ಟೀಲ್ ಷೇರುಗಳನ್ನು ರೂ 157 ಕ್ಕೆ ಖರೀದಿಸಲು ಸಲಹೆ ನೀಡಿದ್ದಾರೆ. ಇದರ ಸ್ಟಾಪ್ ಲಾಸ್ 152 ರೂ.ಗಳಿಗೆ ನಿಗದಿಪಡಿಸಿದ್ದಾರೆ. ಟಾರ್ಗೆಟ್​ ಪ್ರೈಸ್​ 165-170 ರೂ. ಕೊಟ್ಟಿದ್ದಾರೆ. ಹೀಗಾದರೆ, ಈ ಷೇರು ಈಗಿನ ಬೆಲೆಗಿಂತ ಶೇ. 8ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಸ್ಟಾಕ್ ತನ್ನ ಎಲ್ಲಾ ಪ್ರಮುಖ ಚಲಿಸುವ ಸರಾಸರಿಗಳಿಗಿಂತಲೂ ಹೆಚ್ಚು ವಹಿವಾಟು ನಡೆಸುತ್ತಿದೆ. ಇದು ಸ್ಟಾಕ್ ಬಲವಾದ ಏರಿಳಿತದಲ್ಲಿದೆ ಎಂದು ತೋರಿಸುತ್ತದೆ.

    ಒರಾಕಲ್ ಫೈನಾನ್ಶಿಯಲ್ ಸರ್ವೀಸಸ್ ಸಾಫ್ಟ್‌ವೇರ್ ಲಿಮಿಟೆಡ್​ (Oracle Financial Services Software Ltd.):

    ರಿಯಾಂಕ್ ಅರೋರಾ ಅವರು ಈ ಷೇರನ್ನು 8302 ರೂ ಮಟ್ಟದಲ್ಲಿ ಖರೀದಿಸಲು ಸಲಹೆ ನೀಡಿದ್ದಾರೆ. ಇದರ ಗುರಿ ಬೆಲೆ 8500-8750 ರೂ. ಹಾಗೂ ಸ್ಟಾಪ್ ಲಾಸ್ ಅನ್ನು 7950 ರೂ.ಗೆ ನಿಗದಿಪಡಿಸಿದ್ದಾರೆ.

    ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ (Havells India Ltd):

    ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ತಾಂತ್ರಿಕ ವಿಶ್ಲೇಷಕ ರೂಪಕ್ ಡೇ ಅವರು ಹ್ಯಾವೆಲ್ಸ್ ಷೇರುಗಳನ್ನು ರೂ 1544 ರ ಮಟ್ಟದಲ್ಲಿ ಖರೀದಿಸಲು ಸಲಹೆ ನೀಡಿದ್ದಾರೆ. ಇದರ ಸ್ಟಾಪ್​ ಲಾಸ್​ ಅನ್ನು 1497 ರೂ. ಮತ್ತು ಟಾರ್ಗೆಟ್​ ಪ್ರೈಸ್​ ಅನ್ನು 1650 ರೂ.ಗೆ ನಿಗದಿಪಡಿಸಿದ್ದಾರೆ.

     

    ಸ್ಮಾಲ್ ಕ್ಯಾಪ್​ ಸೂಚ್ಯಂಕ ಸೋಮವಾರ 2% ಕುಸಿತ: ಸಣ್ಣ ಕಂಪನಿಯ ಷೇರುಗಳನ್ನು ಇಟ್ಟುಕೊಳ್ಳಬೇಕೆ? ಮಾರಬೇಕೆ? ಖರೀದಿಸಬೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts