ಸಣ್ಣ ವಯಸ್ಸಿನವರಿಗೆ ವೃದ್ಧಾಪ್ಯ ವೇತನ ಕೊಡಿಸುತ್ತಿದ್ದ ಏಜೆಂಟ್​ ಅಂದರ್​!

blank

ಬೆಂಗಳೂರು: ಸಣ್ಣ ವಯಸ್ಸಿನ ವ್ಯಕ್ತಿಗಳಿಗೆ ಓಲ್ಡೇಜ್ ಪೆನ್ಶನ್ ಮಾಡಿಸುತಿದ್ದ ಏಜೆಂಟ್ ಅರೆಸ್ಟ್ ಆಗಿದ್ದಾನೆ. ಸಿಸಿಬಿ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

blank

ಬೆಂಗಳೂರಿನಲ್ಲಿ ಒಟ್ಟು ಮೂರು ಕಡೆ ಸಿಸಿಬಿ ದಾಳಿ ನಡೆಸಿದೆ. ದಾಳಿಯ ವೇಳೆ 200 ಹೆಚ್ಚು ಜನರು ನಕಲಿ ವೃದ್ದಾಪ್ಯ ವೇತನ ಪಡೆಯುತಿದ್ದದ್ದು ಪತ್ತೆಯಾಗಿದೆ. ಈ ಏಜೆಂಟ್​​ಗಳು ಹೆಚ್ಚು ಹಣವನ್ನು ಪಡೆದು ವೃದ್ಧರಲ್ಲದವರಿಗೂ, ಚಿಕ್ಕ ವಯಸ್ಸಿನ ವ್ಯಕ್ತಿಗಳಿಗೂ ಆಧಾರ್​ನಲ್ಲಿ ಜನ್ಮ ದಿನಾಂಕ ತಿದ್ದುಪಡಿ ಮಾಡಿಸಿ ವೃದ್ಧಾಪ್ಯ ವೇತನ ಸಿಗುವಂತೆ ಮಾಡುತ್ತಿದ್ದರು.

ಆಧಾರ್ ಕಾರ್ಡ್​ಗಳನ್ನು ನಕಲಿಯಾಗಿ ಮಾಡ್ತಿದ್ರು:

blank

ಆಧಾರ್ ಕಾರ್ಡ್​ನಲ್ಲಿ ವಯಸ್ಸಿನ ಲೆಕ್ಕವನ್ನು ಕಡಿಮೆ ಮಾಡುತ್ತಿದ್ದರು. ಈ ಏಜೆಂಟ್​ಗಳು ರಾಜಾಜಿನಗರ, ಕೆಂಗೇರಿ ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮುಖ್ಯ ಏಜೆಂಟ್​ನನ್ನು ಚತುರ್ ಎಂದು ಗುರುತಿಸಲಾಗಿದೆ. ಓರ್ವರಿಗೆ ನಕಲಿ ಮಾಡುವ ಕೆಲಸ ಮಾಡಿಸಿಕೊಡಲು 5 ರಿಂದ ಹತ್ತು ಸಾವಿರ ಹಣ ಪಡೆಯುತಿದ್ದ ಎನ್ನಲಾಗಿದೆ

ಸದ್ಯ ನಗರದದಲ್ಲಿ ಹಲವೆಡೆ ಇದೇ ರೀತಿ ಕೃತ್ಯ ನಡೆದಿರುವ ಸಾದ್ಯತೆ. ಇದ್ದು ಈಗಾಗಲೇ ಹಲವಾರು ಸರ್ಕಾರಿ ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ. ರೆವಿನ್ಯೂ ಇನ್ಸ್ಪೆಕ್ಟರ್ ಹಾಗು ವಿಲೇಜ್ ಅಕೌಂಟೆಂಟ್​ಗಳಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು ಏಜೆಂಟ್ ಜತೆ ಶಾಮೀಲಾಗಿ ಕೃತ್ಯ ಎಸಗಿದ್ದಾರಾ ಅನ್ನುವುದರ ಬಗ್ಗೆ ಕೂಡ ಸಿಸಿಬಿ ಪರಿಶೀಲನೆ ನಡೆಸುತ್ತಿದೆ.

Share This Article

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…