ಉಡುಪಿ ಮೂಲದ ಕಾರ್ತಿಕ್​ ರಾವ್​ ಕಂಟೆಂಟ್​ಫುಲ್​ ಕಂಪೆನಿ ಸಿಇಒ

udp-28-karthik rao
Published on

ಉಡುಪಿ: ಭಾರತೀಯ ಮೂಲದ ವ್ಯಕ್ತಿಗಳು ಅಮೇರಿಕಾದಲ್ಲಿ ಅನೇಕ ಕಂಪೆನಿಗಳನ್ನು ಮುನ್ನಡೆಸುತ್ತಿದ್ದು, ಮೈಕ್ರೋಸಾಫ್ಟ್​, ಆಲ್ಟಾ ಬೆಟ್​, ನೊವಾರ್ಟಿಸ್​, ಎಡೋಬ್​, ಐಬಿಎಂ ನಂತರ ಇದೀಗ ಕಂಟೆಂಟ್​ಫುಲ್​ ಕಂಪೆನಿಯಲ್ಲಿ ಉಡುಪಿ ಮೂಲದ ಕಾರ್ತಿಕ್​ ರಾವ್​ ಉನ್ನತ ಹುದ್ದೆಗೆ ಏರಿದ್ದಾರೆ.

ಮೂಡು ಅಲೆವೂರು ಮೂಲದ ಅಮೆರಿಕ ಕ್ಯಾಲಿಪೋರ್ನಿಯಾ ನಿವಾಸಿ ದಿ.ಡಾ.ಸುಬ್ರಹ್ಮಣ್ಯ ರಾವ್​ ಪುತ್ರ ಕಾರ್ತಿಕ್​ ರಾವ್​ (46) ಏ.11ರಂದು ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅಮೆರಿಕದಲ್ಲಿ ಹುಟ್ಟಿ ಬೆಳೆದಿರುವ ಕಾರ್ತಿಕ ಸ್ಟ್ಯಾನ್​ಫರ್ಡ್​ ವಿವಿಯಿಂದ ಇಂಡಸ್ಟ್ರಿಯಲ್​ ಎಂಜಿನಿಯರಿಂಗ್​ ವಿಷಯದಲ್ಲಿ ಎಂಎಸ್​ ಪದವಿ ಪೂರೈಸಿದ್ದಾರೆ. 20 ವರ್ಷಗಳಿಂದ ವಿವಿಧ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಸಿಗ್ನಲ್​ ಎಫ್​ಎಕ್ಸ್​ ಎಂಬ ಕೌಡ್​ ಮಾನಿಟರಿಂಗ್​ ಕಂಪೆನಿಯನ್ನು ಹುಟ್ಟುಹಾಕಿದ್ದರು. ಕಂಪನಿಯನ್ನು ಇತ್ತೀಚೆಗೆ ಸ್ಪಂಕ್​ ಕಂಪನಿ 1.05 ಬಿಲಿಯನ್​ ಡಾಲರ್​ ಮೊತ್ತಕ್ಕೆ ಸ್ವಾಧಿನಪಡಿಸಿಕೊಂಡಿದೆ. ವಿಎಂವೇರ್​ ಸಂಸ್ಥೆಯ ಪ್ರೊಡಕ್ಟ್​ ಮ್ಯಾನೇಜ್​ ಮೆಂಟ್​ ಮತ್ತು ವರ್ಲ್ಡ್​ ವೈಡ್​ ಮಾರ್ಕೆಟಿಂಗ್​ ವಿಭಾಗದ ಉಪಾಧ್ಯಕ್ಷರಾಗಿದ್ದ ಕಾರ್ತಿಕ್​ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕದ ಕಂಟೆಂಟ್​ಫುಲ್​ (ಡೆನ್ವರ್​ ಆ್ಯಂಡ್​ ಸಾನ್​ ಫ್ರಾನ್ಸಿಸ್ಕೊ ಆ್ಯಂಡ್​ ಬರ್ಲಿನ್​) ಕಂಪನಿ ಆಡಳಿತ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ತಿಕ್​ ಅವರನ್ನು ನೇಮಕ ಮಾಡಿದೆ.

ಕೌಟುಂಬಿಕ ಹಿನ್ನೆಲೆ
ಕಾರ್ತಿಕ್​ ಅವರ ಅಜ್ಜ ದಿ.ಜಿ.ಲಕ್ಷ್ಮೀನಾರಾಯಣ್​, ಇಂಡಿಯನ್​ ಬ್ಯಾಂಕ್​ ಚೇರ್​ಮೆನ್​ ಮತ್ತು ಎಂಡಿಯಾಗಿದ್ದು, ಚೆನ್ನೆ$ನಲ್ಲಿ ವಾಸ್ತವ್ಯದಲ್ಲಿದ್ದರು. ತಂದೆ ದಿ. ಡಾ. ಎಲ್​.ಸುಬ್ರಹ್ಮಣ್ಯ ರಾವ್​ ಚೆನ್ನೈನ ಸ್ಪ್ಯಾನಿ ಮೆಡಿಕಲ್​ ಕಾಲೇಜಿನಿಂದ ವೈದ್ಯಕಿಯ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದು, ಅಮೇರಿಕಾದ ಕ್ಯಾಲಿೋರ್ನಿಯಾ ರಾಜ್ಯದ ಆ್ಯನೆಹ್ಯಾಮ್ನಲ್ಲಿ ಕ್ಯಾನ್ಸರ್​ ತಜ್ಞರಾಗಿದ್ದರು. ತಾಯಿ ರಜಿ ರಾವ್​. ದಂಪತಿಗೆ ಇಬ್ಬರು ಮಕ್ಕಳು ಕಾರ್ತಿಕ್​ ಮತ್ತು ಅಶೋಕ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net