ಟರ್ಕಿ ಶೃಂಗಸಭೆಯಲ್ಲಿ ರಷ್ಯಾದ ಪ್ರತಿನಿಧಿಗೆ ಹೊಡೆದ ಉಕ್ರೇನಿಯನ್​ ಸಂಸದ; ವಿಡಿಯೋ ವೈರಲ್​

vvvv
Published on

ಟರ್ಕಿ: ರಷ್ಯಾದ ಪ್ರತಿನಿಧಿಗೆ ಉಕ್ರೇನಿಯನ್​ ಸಂಸದ ಹೊಡೆದ ಘಟನೆ ಟರ್ಕಿ ಶೃಂಗಸಭೆಯಲ್ಲಿ (ಮೇ. 4) ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ದೇಶ ವಿದೇಶಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.

ಕಪ್ಪು ಸಮುದ್ರದ ಆರ್ಥಿಕ ಸಹಕಾರದ (PABSEC) ಸಂಸದೀಯ ಸಭೆಯ 61 ನೇ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆದ ಸಮ್ಮೇಳನದಲ್ಲಿ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ಅವರ ಕೈಯಲ್ಲಿದ್ದ ಉಕ್ರೇನಿಯನ್ ಧ್ವಜವನ್ನು ರಷ್ಯಾದ ಪ್ರತಿನಿಧಿ ಕಿತ್ತುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ಕೂಡಲೇ ರಷ್ಯಾ ಪ್ರತಿನಿಧಿಯ ಹಿಂದೆ ತೆರಳಿ ಅವರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಉಳಿದ ರಷ್ಯಾ ಪ್ರತಿನಿಧಿಗಳು ಗಲಭೆಯನ್ನು ತಡೆದಿದ್ದಾರೆ.

ಈ ವಿಡಿಯೋವನ್ನು ಕೈಯಿವ್​ ಪೋಸ್ಟ್​​​ನ ವಿಶೇಷ ವರದಿಗಾರ ಮತ್ತು ರಾಜಕೀಯ ಸಲಹೆಗಾರರಾಗಿರುವ ಜೇಸನ್ ಜೇ ಸ್ಮಾರ್ಟ್ ಅವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಭಾರಿ ಸಂಚಲನವನ್ನು ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net