VIDEO| ಕುಸ್ತಿಪಟುಗಳನ್ನು ಭೇಟಿ ಮಾಡಲು ಮುಂದಾದ ರೈತರು; ಜಂತರ್​ ಮಂತರ್​ನಲ್ಲಿ ಹೈಡ್ರಾಮಾ

Farmers
Published on

ನವದೆಹಲಿ: ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್​ ಮಂತರ್​ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಈಗ ಮತ್ತೊಂದು ಹಂತ ತಲುಪಿದೆ.

ಕುಸ್ತಿಪಟುಗಳಿಗೆ ರಾಜಕೀಯ ಪಕ್ಷಗಳ ನಾಯಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಬೆಂಬಲ ಘೋಷಿಸಿದ್ದು WFI ಅಧ್ಯಕ್ಷನನ್ನು ವಜಾ ಮಾಡುವಂತೆ ಆಗ್ರಹಿಸಿವೆ.

ಹೈಡ್ರಾಮಾ

ಇನ್ನು ಕುಸ್ತಿಪಟುಗಳನ್ನು ಭೇಟಿ ಮಾಡಿ ಬೆಂಬಲ ಸೂಚಿಸಲು ಬಂದಿದ್ದ ಕಿಸಾನ್​ ಯೂನಿಯನ್​ ಮುಖಂಡರನ್ನು ಪೊಲೀಸರು ತಡೆದಿದ್ದು ಸ್ಥಳದಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ.

ಪೊಲೀಸರು ತಡೆದ ಕಾರಣ ಕೆಲಕಾಲ ಆತಂಕದ ವಾತವರಣ ನಿರ್ಮಾಣವಾಯಿತು ಮತ್ತು ರೈತರು ಬ್ಯಾರಿಕೇಡ್​ಗಳನ್ನು ತಳ್ಳಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ್ದಾರೆ.

ಶಾಂತಿಯುತ ಸಭೆ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಕಾರಣ ಅವರನ್ನು ನಾವು ತಡೆದೆವು. ಅದಾಗಿಯೂ ಅವರು ಬ್ಯಾರಿಕೇಟ್​ಗಳನ್ನು ದಾಟಿ ಕ್ರೀಡಾಪಟುಗಳ ಜೊತೆ ಶಾಂತಿಯುತವಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಭಾನುವಾರ ಸಂಯುಕ್ತ ಕಿಸಾನ್​ ವಕ್ತಾರ ರಾಕೇಶ್​ ಟಿಕಾಯತ್​ ಸೇರಿದಂತೆ ರೈತ ಸಂಘದ ಹಿರಿಯ ಮುಖಂಡರು ಭೇಟಿ ಮಾಡಿ ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net