More

    ನಕಲಿ ಬೆರಳಚ್ಚು ಪ್ರತಿ ಬಳಸಿ ಹಣ ದೋಚುತ್ತಿದ್ದ ಖದೀಮರು; ಯುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ

    ಲಖನೌ: ಆನ್​ಲೈನ್​, ಆಫ್​ಲೈನ್​ನಲ್ಲಿ ವಸ್ತುಗಳನ್ನು ಖರೀದಿಸುವ ವೇಳೆ ವಂಚಕರ ಬಗ್ಗೆ ಎಚ್ಚರದಿಂದಿರಿ ಎಂದು ಪೊಲೀಸ್​ ಇಲಾಖೆ ಹಾಗೂ ಸರ್ಕಾರಗಳು ಜನರನ್ನು ಎಚ್ಚರಿಕೆ ನೀಡುತ್ತಿರುತ್ತವೆ.

    ಆದರೆ ಇಲ್ಲಿ ಆರೋಪಿಗಳು ಬೆರಳಿನ ಅಚ್ಚನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ದೋಚಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರಪ್ರದೇಶ ಪೊಲೀಸರು ಹಾಗೂ ಸೈಬರ್​ ಸೆಲ್​ನವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿಗಳಿಗೆ ಖೆಡ್ಡಾ ತೋಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಇಬ್ಬರ ಬಂಧನ

    ಘಟನೆ ಸಂಬಂಧ ರಿಷಿ ರಾಜ್​ ಸಿಂಗ್​ ಹಾಗೂ ರೋಹಿತ್​ ಕುಮಾರ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳ ಬಳಿ ಇದ್ದ 194 ಬೆರಳಚ್ಚು ಪ್ರತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ರಾಜೇಶ್​ ಭಾರತಿ ತಿಳಿಸಿದ್ದಾರೆ.

    cyber theft accused
    ಬಂಧಿತ ಆರೋಪಿಗಳು

    ತಮ್ಮ ಬ್ಯಾಂಕ್​​ ಖಾತೆಯಿಂದ ಹಣ ಕಳೆದುಕೊಂಡಿರುವ ಬಗ್ಗೆ ಮಿಶ್ರಿಲಾಲ್​ ಹಾಗೂ ಬಿಂದು ಸಿಂಗ್​ ಎಂಬುವವರು ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದಾಗ ನಕಲಿ ಬೆರಳಚ್ಚುಗಳನ್ನು ಬಳಸಿ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಪೊಲೀಸರ ಹೆಸರಿನಲ್ಲಿ ಬಹುಕೋಟಿ ರೂಪಾಯಿ ವಂಚನೆ; ಆರೋಪಿ ಬಂಧನ

    ಬೆರಳಚ್ಚು ನಕಲು

    ಬಂಧಿತ ಆರೋಪಿಗಳು ಆಧಾರ್​ ಆಧಾರಿತ ಪೇಮೆಂಟ್​ ವ್ಯವಸ್ಥೆಗಳನ್ನು ನಕಲಿ ಬಯೋಮೆಟ್ರಿಕ್​ ಹೆಬ್ಬೆರಳಿನ ನಕಲಿ ಗುರುತುಗಳಿಂದ ಹಣ ಪಡೆಯುತ್ತಿದ್ದರು.

    ಆರೋಪಿಗಳು ನಕಲಿ ಬೆರಳಚ್ಚುಗಳನ್ನು ತಯಾರಿಸಲು ವಿವಿಧ ವೆಬ್​ಸೈಟ್​ಗಳಿಂದ ಬಟರ್​ ಪೇಪರ್​ ಮೇಲೆ ಗುರುತನ್ನು ನಕಲು ಮಾಡಿ ಹಣ ದೋಚುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಯೂಟ್ಯೂಬ್​ ಮೂಲಕ ಕಲಿಕೆ

    ಆರೋಪಿಗಳು ಹೆಬ್ಬರಳ ಕ್ಲೋನಿಂಗ್​ಅನ್ನು ಯೂಟ್ಯೂಬ್​ ಮೂಲಕ ಕಲಿತ್ತಿದ್ದಾರೆ. ಅನೇಕ ಚಾನೆಲ್​ಗಳು ಈ ರೀತಿಯ ಮಾಹಿತಿ ನೀಡುವುದರಿಂದ ಸೈಬರ್​ ಕಳ್ಳರ ಹಾವಳಿ ಹೆಚ್ಚಾಗಿದೆ. ಸರ್ಕಾರ ಈ ರೀತಿಯ ಚಾನೆಲ್​ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

    ಬಂಧಿತ ಆರೋಪಿಗಳಿಂದ ಪಾಲಿ ಸ್ಟ್ಯಾಂಪರ್​ ಮೆಷಿನ್​, ಪ್ರಿಂಟರ್, ಬಯೋಮೆಟ್ರಿಕ್ ಡಿವೈಸ್​, ಒಟಿಜಿ, ಎಂಓಪಿಎಸ್​, 5 ಎಟಿಎಮ್​ ಕಾರ್ಡ್​ಗಳು, 3 ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ರಾಜೇಶ್​ ಭಾರತಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts