ಲಖನೌ: ಅಂತರ್ಜಾತಿ ವಿವಾಹವಾದಳೆಂಬ ಕಾರಣಕ್ಕೆ ತನ್ನ ಅಣ್ಣನ ಮಗಳನ್ನು ಚಿಕ್ಕಪ್ಪನೇ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸೀತಾಪುರ್ ಜಿಲ್ಲೆಯ ಭಜ್ನಗರ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು ಆರೋಪಿ ಪೊಲೀಸರ ಬಳಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಮರ್ಯಾದೆ ಹತ್ಯೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು 20ವರ್ಷದ ಮೃತ ಯುವತಿಯೂ ಭಜ್ನಗರ ಗ್ರಾಮದ ಯುವಕ ರೂಪ್ ಚಂದ್ ಮೌರ್ಯ ಎಂಬುವವರನ್ನು ಪ್ರೀತಿಸಿ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು.
ತನ್ನ ಅಣ್ಣನ ಮಗಳು ಬೇರೆ ಜಾತಿಯ ಯುವಕನ್ನು ಪ್ರೀತಿಸಿ ಮದುವೆಯಾದ ಬಗ್ಗೆ ಕುಪಿತಗೊಂಡಿದ್ದ ಆಕೆಯ ಚಿಕ್ಕಪ್ಪ ಅವಳನ್ನು ಕೊಲ್ಲಲು ಸಜ್ಜಾಗಿದ್ದನ್ನು.
ಯುವತಿ ತನ್ನ ಪತಿಯೊಂದಿಗೆ ಗ್ರಾಮಕ್ಕೆ ವಾಪಸ್ಸಾದ ವಿಚಾರ ತಿಳಿದ ಆಕೆಯ ಚಿಕ್ಕಪ್ಪ ಒಬ್ಬಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಕೆ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನ
ಆರೋಪಿ ಶರಣು
ಕೊಲೆಯ ನಂತರ ಆರೋಪಿ ಪೊಲೀಸ್ ಠಾಣೆಗೆ ಹತ್ಯೆಗೆ ಬಳಸಿದ್ದ ಚಾಕುವಿನ ಸಮೇತ ಶರಣಾಗಿದ್ಧಾನೆ. ಅಣ್ಣನ ಮಗಳು ಬೇರೆ ಜಾತಿಯ ಹುಡುಗನೊಂದಿಗೆ ಮದುವೆ ಮಾಡಿಕೊಂಡ ಕಾರಣ ಈ ರೀತಿ ಮಾಡಬೇಕಾಯಿತು ಎಂದು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.