ಪೊಲೀಸರ ಹೆಸರಿನಲ್ಲಿ ಬಹುಕೋಟಿ ರೂಪಾಯಿ ವಂಚನೆ; ಆರೋಪಿ ಬಂಧನ

Police

ಮುಂಬೈ: ಪೊಲೀಸರೆಂದು ಬಿಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಪ್ರತಿನಿತ್ಯ 5 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ವಶದಲ್ಲಿರುವ ಆರೋಪಿಯೂ 12ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು ದೇಶಾದ್ಯಂತ ಹಲವು ಮಂದಿಗೆ ವಂಚಿಸಿರುವುದಾಗಿ ತಿಳಿದು ಬಂದಿದೆ.

ಪ್ರತಿಷ್ಠಿತ ಹೋಟೆಲ್​ನಲ್ಲಿ ವಾಸ್ತವ್ಯ

ಪ್ರಕರಣದ ಮಾಸ್ಟರ್​ ಮೈಂಡ್ ಶ್ರೀನಿವಾಸ್​ ರಾವ್​ ದಾದಿ(49) ಎಂದು ಗುರುತಿಸಲಾಗಿದ್ದು ಆರೋಪಿಯೂ 12ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದು ತಾಂತ್ರಿಕ ಜ್ಞಾನದ ಹೊಂದಿದ್ದ ಎಂದು ವರದಿಯಾಗಿದೆ.

ಮುಂಬೈನ ಬಂಗೂರ್​ ನಗರ ಠಾಣಾ ಪೊಲೀಸರು ಆರೋಪಿ ಶ್ರೀನಿವಾಸ್​ನನ್ನು ಹೈದರಾಬಾದಿನ ಪ್ರತಿಷ್ಠಿತ ಹೋಟೆಲ್​ ಒಂದರಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಪ್ರಕರಣದ ಕಿಂಗ್​ಪಿನ್​ ಜೊತೆಗೆ ಪೊಲೀಸರು ಥಾಣೆ ಹಾಗೂ ಕಲ್ಕತ್ತಾ ಮೂಲದ ಇಬ್ಬರನ್ನು ವಶಕ್ಕೆ ಪಡೆದು ವಿಚಾರನೆಗೆ ಒಳಪಡಿಸಿದ್ದಾರೆ.

ರಿಯಲ್​ ಎಸ್ಟೇಟ್​ ಉದ್ಯಮಿಯಂತೆ ಪೋಸ್​

ಪ್ರಕರಣದ ಕಿಂಗ್​ಪಿನ್​ ಶ್ರೀನಿವಾಸ್​ ಸಾರ್ವಜನಿಕರ ಮುಂದೆ ರಿಯಲ್​ ಎಸ್ಟೇಟ್​ ಉದ್ಯಮಿಯಂತೆ ಪೋಸ್​ ನೀಡುತ್ತಿದ್ದ ಮತ್ತು ಟೆಲಿಗ್ರಾಮ್​ನಲ್ಲಿ ಹೆಚ್ಚು ಸಂವಹನ ನಡೆಸುತ್ತಿದ್ದ ಎಂದು ವರದಿಯಾಗಿದೆ.

ಪೊಲೀಸರು ಇಗಾಗಲೇ ಆತನಿಗೆ ಸಂಬಂಧಿಸಿದ 40 ಬ್ಯಾಂಕ್​ ಅಕೌಂಟ್​ಗಳು ಫ್ರೀಜ್​ ಮಾಡಿರುವುದಾಗಿ ಹಾಗೂ ಒಂದೂವರೆ ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿರುವುದಾಗಿ ಬಂಗೂರ್​ ನಗರ ಠಾಣಾ ಪೊಲಿಸರು ತಿಳಿಸಿದ್ದಾರೆ.

accused

ಇದನ್ನೂ ಓದಿ: VIDEO| ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯನ್ನು ಥಳಿಸಿದ ಬಿಜೆಪಿ ಸಚಿವ!

ಪೊಲೀಸರಂತೆ ಪೋಸ್​

ಆರೋಪಿ ದಾದಿ ಹಾಗೂ ಆತನ ಸಹಚರರು ಹೆಚ್ಚಾಗಿ ಮಹಿಳೆಯರಿಗೆ ಪೊಲೀಸರಂತೆ ಕರೆ ಮಾಡಿ ನಿಔಉ ಸ್ವೀಕರಿಸುವ ಕೊರಿಯರ್​ನಲ್ಲಿ ಡ್ರಗ್ಸ್​ ಹಾಗೂ ಶಸ್ತ್ರಾಸ್ತ್ರ ಹೊಂದಿದ್ದಾಗಿ ಹೇಳಿ ಬೆದರಿಸುತ್ತಿದ್ದರು.

ನಂತರ ನೀವು ತರಿಸಿಕೊಂಡಿರುವ ಕೊರಿಯರ್​ ನಿಮಗೆ ಸಂಬಂಧಪಟ್ಟಿಲ್ಲವೆಂದು ಪರಿಶೀಲಿಸಬೇಕೆಂದು ಹೇಳಿ ಅವರ ಬ್ಯಾಂಕ್​, ಆದಾಯ ತೆರಿಗೆ ಹಾಗೂ ಸಂಬಂಧಿಸಿತ ದಾಖಲೆಗಳನ್ನು ಪಡೆಯುತ್ತಿದ್ದರು.

ಬಹುಕೋಟಿ ವಂಚನೆ

ಆರೋಪಿಗಳ ಮಾತಿಗೆ ಬೆದರುತ್ತಿದ್ದ ಅಮಾಯಕರು ಕೇಳುತ್ತಿದ್ದ ದಾಖಲೆಗಳನ್ನು ಕಳುಹಿಸುತ್ತಿದ್ದರು ಮತ್ತು ಆ ನಂತರ ಅವರ ನಂಬರಿಗೆ ಬಂದ ಒಟಿಪಿಯನ್ನು ಸಹ ಹೇಳುತ್ತಿದ್ದರು. ಇದರ ಮೂಲಕ ಆರೋಪಿಗಳು ಸಂತ್ರಸ್ತರ ಮೊಬೈಲ್​ ಮೇಲೆ ಹಿಡಿತವನ್ನು ಸಾಧಿಸಿ ಹಣ ದೋಚುತ್ತಿದ್ದದು ಬೆಳಕಿಗೆ ಬಂದಿದೆ.

ಈ ರೀತಿ ಪ್ರತಿನಿತ್ಯ 5-10 ಕೋಟಿ ರೂಪಾಯಿ ಹಣ ದೋಚುತ್ತಿದ್ದರು ಮತ್ತು ಹಣವನ್ನು ಆ ನಂತರ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಚೀನಾ ದೇಶದ ಪ್ರಜೆ ಒಬ್ಬರಿಗೆ ವರ್ಗಾಯಿಸುತ್ತಿದ್ದರು. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ, ಜಾರ್ಖಂಡ್​, ಹೈದರಾಬಾದಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಜೋನ್​-11 ಡಿಸಿಪಿ ಅಜಯ್​ ಕುಮಾರ್​ ಬನ್ಸಾಲ್​ ತಿಳಿಸಿದ್ದಾರೆ.

Cyber Fraud
Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…