ಸಿನಿಮಾ

VIDEO| ರಸ್ತೆ ಮಧ್ಯೆ ಬಿತ್ತು ಬೃಹತ್​ ಗಾತ್ರದ ಗುಂಡಿ; ಮುಂದೇನಾಯ್ತು?

ನವದೆಹಲಿ: ಜನನಿಬಿಡ ಪ್ರದೇಶದ ರಸ್ತೆಯೊಂದರಲ್ಲಿ ಬೃಹತ್​ ಗಾತ್ರದ ಗುಂಡಿ ಬಿದ್ದ ಕಾರಣ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದ ಘಟನೆ ದೆಹಲಿಯ ಖುರೇಜಿ ಖಾಸ್​ನಲ್ಲಿ ನಡೆದಿದೆ.

ಸದ್ಯ ಪ್ರದೇಶದ ಸುತ್ತ ಬ್ಯಾರಿಕೇಡ್​ ಹಾಕಿರುವ ಪೊಲೀಸರು ಸಾರ್ವಜನಿಕರು ಹಾಗೂ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ನಿರತರಾಗಿದ್ದಾರೆ.

ಇದೇ ಮೊದಲಲ್ಲ

ರಸ್ತೆ ಮಧ್ಯದಲ್ಲಿ ಈ ರೀತಿ ಬೃಹತ್​ ಗಾತ್ರದ ಗುಂಡಿ ಬೀಳುತ್ತಿರುವುದು ಇದೇ ಮೊದಲಲ್ಲ. ಮಾರ್ಚ್​ 31ರಂದು ಹೌಜ್​ ರಾಣಿ ರೆಡ್ ಲೈಟ್​ ಪ್ರದೇಶದಲ್ಲಿ ಈ ರೀತಿ ಘಟನೆಯಾಗಿತ್ತು.

ಈ ವೇಳೆ ದೆಹಲಿ ಸಾರಿಗೆ ಸ=ನಿಗಮಕ್ಕೆ ಸೇರಿದ್ದ ಬಸ್​ ಒಂದು ಗುಂಡಿಯಲ್ಲಿ ಸಿಲುಕಿಕೊಂಡು ಅನೇಕ ಘಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ಇದನ್ನೂ ಓದಿ: ತಮಿಳಿನ ಖ್ಯಾತ ಹಾಸ್ಯ ನಟ, ನಿರ್ದೇಶಕ ಮನೋಬಾಲ ಇನ್ನಿಲ್ಲ

ಕಳಪೆ ಕಾಮಗಾರಿ

ರಸ್ತೆ ಮಧ್ಯೆ ಬೃಹತ್​ ಗುಂಡಿ ಬಿದ್ದಿರುವ ಕಿಡಿಕಾರಿರುವ ಸಾರ್ವಜನಿಕರು ಕಳಪೆ ಕಾಮಗಾರಿಯೇ ಇದ್ದಕ್ಕೆಲ್ಲಾ ಕಾರಣ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಆಡಳಿತ ಪಕ್ಷ ಎಎಪಿ ಹಾಗು ವಿಪಕ್ಷ ಬಿಜೆಪಿ ಇನ್ನು ಪ್ರತಿಕ್ರಿಯಿಸಿಲ್ಲ.

Latest Posts

ಲೈಫ್‌ಸ್ಟೈಲ್