

ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ-ನಿರ್ದೇಶಕ ಮನೋಬಾಲ(69) ಅವರು ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಮಿಳಿನ ಸ್ಟಾರ್ ಹೀರೋ ಸಿನಿಮಾಗಳಲ್ಲಿ ಮನೋಬಾಲಾ ಇಲ್ಲದೆ ಅದು ಪೂರ್ಣವಾಗುತ್ತಿರಲಿಲ್ಲ. ಅಷ್ಟೋಂದು ಖ್ಯಾತಿ ಇವರದ್ದು. ವಿಜಯ್ ಮತ್ತು ರಜನಿ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಮನೋಬಾಲ ಅವರ ನಿಧನಕ್ಕೆ ತಮಿಳು ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸುಚಿಸಿದ್ದಾರೆ.