ಸಿನಿಮಾ

VIDEO| ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕುಸಿತ!

ಶ್ರೀಕಾಕುಳಂ: ಬಹುದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಒಂದು ಕುಸಿದು ಬಿದ್ದಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಚ್ಛಾಪುರಂನಲ್ಲಿ ನಡೆದಿದೆ.

ಸುಮಾರು 70ಟನ್​ ತೂಕದ ಗ್ರಾನೈಟ್​ ತುಂಬಿದ ಲಾರಿಯೊಂದು ಸೇತುವೆಯಲ್ಲಿ ಸಾಗುವ ವೇಳೆ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: VIDEO| ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿಯನ್ನು ನೂಕಿದ ಶಾರುಖ್​; ವ್ಯಾಪಕ ಟೀಕೆ

ಬ್ರಿಟಿಷ್​ ಕಾಲದ ಸೇತುವೆ

ಬ್ರಿಟಿಷರು ಆಳ್ವಿಕೆ ನಡೆಸುವ ಸಮಯದಲ್ಲಿ ಬಹುದಾ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದ್ದು ಅತಿ ಭಾರ ವಸ್ತುಗಳನ್ನು ತುಂಬಿದ್ದ ಲಾರಿ ಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಸದ್ಯ ಸೇತುವೆ ಕುಸಿತದಿಂದಾಗಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್