VIDEO| ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ; ಕಠಿಣ ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

bull riding
Published on

ಡೆಹ್ರಾಡೂನ್: ಕುಡಿದ ಮತ್ತಿನಲ್ಲಿ ಯುವಕನೊಬ್ಬ ವೈರಲ್​ ವಿಡಿಯೋ ಮಾಡುವ ಗೀಳಿಗೆ ಹೋಗಿ ಪೇಚಿಗೆ ಸಿಲುಕಿರುವ ಘಟನೆ ಉತ್ತರಾಖಂಡದ ಋಷಿಕೇಷದಲ್ಲಿ ನಡೆದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಾನಮತ್ತನಾಗಿದ್ದ ವೇಳೆ ಕೃತ್ಯ

ಈ ಕುರಿತು ಟ್ವೀಟ್​ ಮಾಡಿರುವ ಉತ್ತರಾಖಂಡ ಪೊಲೀಸರು ಮೇ 05ರಂದು ಋಉಷಿಕೇಶದ ತಪೋವನದಲ್ಲಿ ಯುವಕನೋರ್ವ ಪಾನಮತ್ತನಾಗಿದ್ದ ವೇಳೆ ಗೂಳಿಯ ಮೇಲೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ.

ಇನ್ನು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಹಾಗೂ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ ಎಂದು ಉ್ತತರಾಖಂಡ ಪೊಲೀಸರು ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​

ಇನ್ನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಯರಲ್​ ಆಗಿತ್ತು ಮತ್ತು ಅನೇಕ ಪೇಜ್​ಗಳಲ್ಲಿ ಮೀಮ್​ಗಳಾಗಿ ಉಪಯೋಗಿಸಲಾಗಿತ್ತು.

ವಿಡಿಯೋ ಕುರಿತು ಕಿಡಿಕಾರಿದ್ದೆ ನೆಟ್ಟಿಗರು ಪ್ರಾಣಿಗಳಿಗೆ ಹಿಂಸೆ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net