ಸಿನಿಮಾ

ಈ ಚುನಾವಣೆ ಬಿಜೆಪಿ ವರ್ಸಸ್ ಕಾಂಗ್ರೆಸ್​ ಅಲ್ಲ, ಇದು ಬಜರಂಗಿ ವರ್ಸಸ್ ತಾಲಿಬಾನ್: ಸಿ.ಟಿ.ರವಿ

ದಾವಣಗೆರೆ: ಈ ಸಲದ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ, ಇದು ಬಜರಂಗಿ ವರ್ಸಸ್ ತಾಲಿಬಾನ್ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಇಂದು ದಾವಣಗೆರೆಯ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಪರ ಪ್ರಚಾರ ನಡೆಸಿದ ಸಿ.ಟಿ.ರವಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ನವರು ಕುಂಕುಮ ಅಳಿಸಿಕೊಳ್ಳುತ್ತಾರೆ. ಕುಂಕುಮ ನೋಡಿದರೆ ಹೆದರಿಕೆ ಬರುತ್ತೆ ಅಂತಾರೆ. ಕೇಸರಿ ಶಾಲು ದೂರ ತಳ್ಳಿದ್ದಾರೆ. ಹೀಗಾಗಿ ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣೆ ಅಲ್ಲ, ಇದು ಬಜರಂಗಿ ವರ್ಸಸ್ ತಾಲಿಬಾನ್ ಚುನಾವಣೆ ಎಂದು ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ: ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

ಅಖಂಡ ಶ್ರೀನಿವಾಸ್ ಮನೆಗೆ ತಾಲಿಬಾನಿ ಮನಸ್ಥಿತಿಯವರು ಬೆಂಕಿ ಹಾಕಿದ್ದರು. ತಾಲಿಬಾನಿಗಳ ಮನಸ್ಸಿಗೆ ನೋವಾಗುತ್ತೆ ಅಂತ ಅಖಂಡಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ. ಬೆಂಕಿ ಬಿದ್ದವರ ಮನೆ ಪರ ನಿಲ್ಲದೆ ತಾಲಿಬಾನ್ ಪರವಾಗಿ ಕಾಂಗ್ರೆಸ್ ನಿಂತಿದೆ. ದಲಿತ ನಾಯಕ ಅಖಂಡ ಶ್ರೀನಿವಾಸಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ, ಇದು ಅವರ ಮನಸ್ಥಿತಿ. ಕಾಂಗ್ರೆಸ್​ಗೆ ದೇವರ ಮೇಲೆ ನಂಬಿಕೆ ಇಲ್ಲ. ಸುಳ್ಳು-ಮೋಸ ಇವರ ಗ್ಯಾರಂಟಿಗಳು. ತಾಲಿಬಾನ್ ಜೊತೆ ಕೈಜೋಡಿಸುವ ಕಾಂಗ್ರೆಸ್​ನವರು ಬಜರಂಗ ದಳ ನಿಷೇಧ ಮಾಡುತ್ತೇವೆ ಎನ್ನುತ್ತಾರೆ. ಕಾಂಗ್ರೆಸ್ ತೂಗುಕತ್ತಿ, ತಲೆ ಕತ್ತರಿಸುತ್ತೆ. ಬಜರಂಗದಳ ಡಿಜೆ ಹಳ್ಳಿ, ಕೆಜಿ ಹಳ್ಳಿಗೆ ಬೆಂಕಿ ಇಟ್ಟಿತ್ತಾ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ಕಾಂಗ್ರೆಸ್ ಬಜರಂಗಿ ಬಾಲಕ್ಕೆ ಬೆಂಕಿ ಇಟ್ಟಿದೆ, ರಾಜಕೀಯವಾಗಿ ಸುಟ್ಟು ಬೂದಿಯಾಗುತ್ತಾರೆ ಎಂದರು.

ಇದನ್ನೂ ಓದಿ: ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

ಕಾಂಗ್ರೆಸ್ ಅಧಿಕಾರಕ್ಕಾಗಿ ತಾಲಿಬಾನ್ ಜೊತೆ ಕೈಜೋಡಿಸಿದ್ದು ಗುಟ್ಟಾಗಿಲ್ಲ. ನಾನು ಸಿದ್ದುಗೆ ಸುಮ್ಮನೆ ಹೆಸರಿಟ್ಟಿಲ್ಲ. ಹನುಮ ಜನ್ಮಭೂಮಿಯಲ್ಲಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಬಾಲಕ್ಕೆ ಬೆಂಕಿ ಬಿದ್ದಾಗ ಹನುಮ ಲಂಕಾದಹನ ಮಾಡಿದ್ದ, ಈಗ ಹನುಮಂತನನ್ನೇ ಕಾಂಗ್ರೆಸ್ ತಡವಿದೆ, ಇಷ್ಟಾದ ಮೇಲೂ ಕಾಂಗ್ರೆಸ್ ಸುಟ್ಟುಹೋಗದೇ ಇದ್ದೀತೇ? ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

Latest Posts

ಲೈಫ್‌ಸ್ಟೈಲ್