ಹಾವೇರಿ: ದೀಪಾವಳಿ ಸಂದರ್ಭದಲ್ಲಿ ನಡೆಯುವ ಹೋರಿ ಹಬ್ಬಕ್ಕೆ ಕರೆ ತರಲಾಗಿದ್ದ ಹೋರಿಯೊಂದು ತಪ್ಪಿಸಿಕೊಂಡು ಕಣ್ಮರೆಯಾದ ಪ್ರಕರಣವೊಂದು ನಡೆದಿದೆ. ಬಳಿಕ ಅದು ಪತ್ತೆಯಾಗಿದ್ದು, ದುರಂತ ಅಂತ್ಯ ಕಂಡಿದೆ.
ಶಿವಪುತ್ರಪ್ಪ ಕೋರಿ ಎಂಬುವರಿಗೆ ಸೇರಿದ ಸೀಗಿಹಳ್ಳಿ ಬ್ರಹ್ಮಾಂಡ ಹೋರಿಯು ಹಾವೇರಿ ತಾಲೂಕಿನ ಸೀಗಿಹಳ್ಳಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ, ತಪ್ಪಿಸಿಕೊಂಡಿತ್ತು. ಹೀಗೆ ತಪ್ಪಿಸಿಕೊಂಡಿದ್ದ ಹೋರಿ ಸಮೀಪದ ವರದಾ ನದಿಗೆ ಬಿದ್ದು ಸಾವಿಗೀಡಾಗಿತ್ತು.
ಹಾವೇರಿ ತಾಲೂಕಿನ ಬಿದರಗಡ್ಡಿ ಗ್ರಾಮದ ಬಳಿ ವರದಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಈ ಹೋರಿ ಕೆಳಕ್ಕೆ ಬಿದ್ದಿತ್ತು. ಹೋರಿಯ ಎದೆಯ ಭಾಗಕ್ಕೆ ಪೆಟ್ಟು ಬಿದ್ದ ಕಾರಣ ಅದು ಮೃತಪಟ್ಟಿದೆ ಎನ್ನಲಾಗಿದೆ. ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ: ಏನಿದು ‘ಈಟ್ ಸ್ಟ್ರೀಟ್’?: ಇದರ ಬಗ್ಗೆ ಏನಂದ್ರು ಮಾಜಿ ಸಚಿವರು?
ಹೋರಿಹಬ್ಬದ ತಲೆಬಿಸಿ
ದೀಪಾವಳಿ ಆಚರಣೆ ಬೆನ್ನಲ್ಲೇ ನಿರ್ಬಂಧದ ನಡುವೆಯೂ ಜಾನಪದ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ಹಲವು ಜಿಲ್ಲೆಗಳಲ್ಲಿ ತಯಾರಿ ಜೋರಾಗಿದ್ದು, ಜನರಲ್ಲಿ ಉತ್ಸಾಹ ಹೆಚ್ಚಿಸಿದೆ. ಹೋರಿಗಳ ತಿವಿತದಿಂದ ಪ್ರತಿ ವರ್ಷವೂ ಸಾವು-ನೋವು ಸಂಭವಿಸುತ್ತಿರುವುದು ಸರ್ಕಾರಕ್ಕೆ ತಲೆಬಿಸಿಯಾಗಿದೆ.
ವಿಶೇಷವಾಗಿ ಶಿವಮೊಗ್ಗ, ಹಾವೇರಿ, ಉತ್ತರಕನ್ನಡ, ದಾವಣಗೆರೆ ಸೇರಿ ರಾಜ್ಯದ ಹಲವೆಡೆ ಹೋರಿ ಬೆದರಿಸುವ ಸ್ಪರ್ಧೆಗಳು ನಡೆಯುತ್ತಿವೆ. 2016ರಲ್ಲಿ ಇಬ್ಬರು, 2017, 2018ರಲ್ಲಿ ತಲಾ ಒಬ್ಬರು, 2022ರಲ್ಲಿ ಇಬ್ಬರು, 2023ರಲ್ಲಿ ಮೂವರು ಸ್ಪರ್ಧೆ ನೋಡಲು ಹೋದಾಗ ಹೋರಿ ತಿವಿತದಿಂದ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಆದರೂ ಹೋರಿ ಬೆದರಿಸುವ ಸ್ಪರ್ಧೆ ನಿರಾತಂಕವಾಗಿ ನಡೆಯುತ್ತಲೇ ಇದೆ. ಹೋರಿ ಹಬ್ಬ ಆಚರಣೆಗೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದಾಗ ಕೆಲವು ಕಟ್ಟುಪಾಡುಗಳನ್ನು ವಿಧಿಸಿ ರಾಜ್ಯ ಸರ್ಕಾರ ಹಬ್ಬಕ್ಕೆ ಅನುವು ಮಾಡಿಕೊಟ್ಟಿತ್ತು.
ಇದನ್ನೂ ಓದಿ: ಗೋವಾಗೆ ಆಗಮಿಸುವ ಪ್ರವಾಸಿಗರ ಮೇಲೆ ನಿರ್ಬಂಧ ಹೇರಲಾಗುವುದೇ?; ಕಾಂಗ್ರೆಸ್ನಿಂದ ಸರ್ಕಾರಕ್ಕೆ ಒತ್ತಾಯ
ಅನುಮತಿ ಪಡೆಯಲ್ಲ: ಸಾರ್ವಜನಿಕರ ಒತ್ತಾಯದ ಮೇರೆಗೆ ಸರ್ಕಾರ ಹೋರಿ ಹಬ್ಬಕ್ಕೆ ಅನುಮತಿ ನೀಡಿದ್ದು, ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ವಿಧಿಸಿದೆ. ಆದರೆ ಕೆಲವೆಡೆ ಜಿಲ್ಲಾಡಳಿತದ ಅನುಮತಿ ಪಡೆಯದೆ ಆಚರಣೆ ಮಾಡಲಾಗುತ್ತಿದೆ. ಇದರಿಂದ ಪೊಲೀಸರಿಗೆ ತಲೆನೋವಾಗಿದ್ದು, ಆಯೋಜಕರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತಿದೆ. ಷರತ್ತುಗಳಿಗೆ ಒಪ್ಪಿದರೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದ್ದಾರೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?