More

    ಗೋವಾಗೆ ಆಗಮಿಸುವ ಪ್ರವಾಸಿಗರ ಮೇಲೆ ನಿರ್ಬಂಧ ಹೇರಲಾಗುವುದೇ?; ಕಾಂಗ್ರೆಸ್​ನಿಂದ ಸರ್ಕಾರಕ್ಕೆ ಒತ್ತಾಯ

    ಗೋವಾ: ಯಾವುದೇ ರಾಜ್ಯದವರು ತಮ್ಮಲ್ಲಿಗೆ ಪ್ರವಾಸಿಗರು ಬರಬೇಕು, ತಮ್ಮ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು ಎಂದು ಬಯಸುವುದು ಸಹಜ. ಆದರೆ ಇಲ್ಲೊಂದು ಕಡೆ ಪ್ರವಾಸಿಗರ ಮೇಲೆ ನಿಯಂತ್ರಣ ಹೇರಬೇಕು ಎಂಬ ಒತ್ತಾಯವೊಂದು ಕೇಳಿಬಂದಿದೆ.

    ಅದರಲ್ಲೂ ದೇಶದ ವಿವಿಧೆಡೆಗಳಿಂದ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಗೋವಾದಲ್ಲಿ ಇಂಥದ್ದೊಂದು ಒತ್ತಾಯ ಕೇಳಿ ಬಂದಿದೆ. ಅಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಈ ಆಗ್ರಹ ವ್ಯಕ್ತಪಡಿಸಿದೆ. ಗೋವಾ ಕಾಂಗ್ರೆಸ್ ನಾಯಕ ಅಮಿತ್ ಪಾಟ್ಕರ್ ಅಲ್ಲಿನ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಏನಿದು ‘ಈಟ್ ಸ್ಟ್ರೀಟ್’​?: ಇದರ ಬಗ್ಗೆ ಏನಂದ್ರು ಮಾಜಿ ಸಚಿವರು?

    ನಮ್ಮದು ಪ್ರವಾಸೋದ್ಯಮದ ರಾಜ್ಯ, ನಮಗೆ ಪ್ರವಾಸಿಗರು ಬೇಕು ನಿಜ, ಆದರೆ ನಮ್ಮ ರಾಜ್ಯದ ಜನರ ಪ್ರಾಣಕ್ಕೆ ಸಂಚಕಾರ ತರುವಂತೆ ಅಲ್ಲ. ಹೊರಗಿನ ಪ್ರವಾಸಿಗರು ನಮ್ಮಲ್ಲಿಗೆ ಬಂದು ಮದ್ಯ-ಮಾದಕವಸ್ತು ಸೇವಿಸಿ ರಸ್ತೆಗಳಲ್ಲಿ ಅಪಘಾತವೆಸಗಿ ನಮ್ಮ ಜನರನ್ನು ಸಾವು-ನೋವಿಗೆ ಗುರಿ ಮಾಡುತ್ತಿದ್ದಾರೆ ಎಂದು ಅಮಿತ್ ಹೇಳಿದ್ದಾರೆ.

    ಅಲ್ಲದೆ ಪ್ರವಾಸಿಗರು ಗೋವಾದಲ್ಲಿ ಮದ್ಯ ಮತ್ತು ಮಾದಕವಸ್ತು ಸೇವಿಸಿ ಅನಾಗರಿಕವಾಗಿ ವರ್ತಿಸುವುದರ ವಿರುದ್ಧ ಬಿಜೆಪಿ ಸರ್ಕಾರ ಸೂಕ್ತ ಕ್ರಮ ಕೈಗೊಂಡು ನಿಯಂತ್ರಣ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹೀಗಾಗಿ ಗೋವಾ ಪ್ರವಾಸಿಗರ ಮೇಲೆ ಸದ್ಯದಲ್ಲೇ ನಿಯಂತ್ರಣ ಹೇರಲ್ಪಟ್ಟರೂ ಅಚ್ಚರಿ ಇಲ್ಲ.

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts