More

    ಏನಿದು ‘ಈಟ್ ಸ್ಟ್ರೀಟ್’​?: ಇದರ ಬಗ್ಗೆ ಏನಂದ್ರು ಮಾಜಿ ಸಚಿವರು?

    ಬೆಂಗಳೂರು: ದೇಶಾದ್ಯಂತ ಈಗ ಹೆಸರುಗಳೇ ದೊಡ್ಡ ಪರಿಣಾಮ ಬೀರುತ್ತಿವೆ. ರಾಜಕೀಯ ಕಾರಣಕ್ಕೆ ಕೆಲವೊಂದು ಕಡೆ ಊರುಗಳ ಹೆಸರುಗಳನ್ನು ಬದಲಾಯಿಸಿದ್ದರೆ, ಇನ್ನು ಕೆಲವು ಕಡೆ ಕಾರಣಾಂತರಗಳಿಂದ ಕೆಲವು ಹೆಸರುಗಳು ಬದಲಾಗುತ್ತಿರುತ್ತವೆ. ಇಂಥವುಗಳಿಗೆ ಪರ-ವಿರೋಧ ಅಭಿಪ್ರಾಯಗಳೂ ಇವೆ.

    ಇದೀಗ ರಾಜಧಾನಿ ಬೆಂಗಳೂರಿನ ಬೀದಿಯೊಂದರ ಹೆಸರು ಕೂಡ ಇಂಥದ್ದೇ ಒಂದು ಜಿಜ್ಞಾಸೆಗೆ ಒಳಗಾಗಿದೆ. ಇಲ್ಲಿನ ಪ್ರಮುಖ ಬೀದಿಯ ಹೆಸರನ್ನು ಚುಟುಕಾಗಿ ಬರೆಯುತ್ತಿರುವುದರ ಕುರಿತು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸಿದ್ದಾರೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಬೆಂಗಳೂರಿನ ಬಸವನಗುಡಿಯಲ್ಲಿನ ಪೂರ್ವ ಆಂಜನೇಯ ರಸ್ತೆ ಕುರಿತು ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನಗರದ ರಸ್ತೆಗಳಿಗೆ, ಬಡಾವಣೆಗಳಿಗೆ ವಿಶೇಷ ಎನಿಸುವ ಹೆಸರುಗಳನ್ನು ಇಡುತ್ತೇವೆ. ಆದರೆ ಅವುಗಳು ಯಾವ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಇಂದು ಬೆಳಗ್ಗೆ ಈ ಬೋರ್ಡ್ ನೋಡಿದೆ. EAT Street ಎಂದಿತ್ತು. ಆ ರಸ್ತೆಯ ನಿಜವಾದ, ಪೂರ್ಣ ಹೆಸರು East Anjaneya Temple Street ‘ ಎಂಬುದಾಗಿ ಸುರೇಶ್​ಕುಮಾರ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಈಗಾಗಲೇ ಬಸವನಗುಡಿ ವಾರ್ಡ್​ ಹೆಸರನ್ನು ಗವಿಗಂಗಾಧರೇಶ್ವರ ವಾರ್ಡ್ ಎಂದು ಬದಲಿಸಲು ಬಿಬಿಎಂಪಿ ಮುಂದಾಗಿರುವುದು ವಿವಾದಕ್ಕೆ ಒಳಗಾಗಿದ್ದು, ಅ. 28ರಂದು ಬಸವನಗುಡಿ ನಿವಾಸಿಗರು ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೀಗ ಅದೇ ಬಸವನಗುಡಿಯ ಪೂರ್ವ ಆಂಜನೇಯ ರಸ್ತೆ ಹೆಸರನ್ನು ಚುಟುಕಾಗಿ ಇಂಗ್ಲಿಷ್​ನಲ್ಲಿ ಬರೆಯುತ್ತಿರುವುದರ ಕುರಿತು ಸುರೇಶ್ ಕುಮಾರ್ ಗಮನ ಸೆಳೆದಿದ್ದು, ‘ಈಟ್ ಸ್ಟ್ರೀಟ್’ ಎನ್ನುವುದು ಬೇರೆಯೇ ಅರ್ಥ ಕೊಡುತ್ತದೆ ಎನ್ನುವುದು ಇಲ್ಲಿ ಗಮನಾರ್ಹ.

    ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts