ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

Telegram
Published on

ಬೆಂಗಳೂರು: ದೀಪಾವಳಿ ಹಬ್ಬದ ಸಲುವಾಗಿ ವಿವಿಧ ಕಂಪನಿಗಳಿಂದ ನಾನಾ ಆಫರ್​ಗಳನ್ನು ಘೋಷಿಸಲಾಗಿರುತ್ತದೆ. ಅದೇ ರೀತಿ ಮೆಸೇಜಿಂಗ್ ಆ್ಯಪ್​ಗಳಲ್ಲಿ ಮುಂಚೂಣಿಯಲ್ಲಿರುವ ಪೈಕಿ ಒಂದಾಗಿರುವ ಟೆಲಿಗ್ರಾಂ ಕಡೆಯಿಂದಲೂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಕೊಡುಗೆಯಾಗಿ ಕೊಡಲಾಗಿದೆ.

ಟೆಲಿಗ್ರಾಂ ಸಂಸ್ಥಾಪಕ-ಸಿಇಒ ಡು ರೋವ್ ಅವರು ಟೆಲಿಗ್ರಾಂ ಚಾನೆಲ್​ಗಳಿಗೆಂದೇ ‘ಗಿವ್​ಎವೇ’ ಎಂಬ ಹೊಸ ಕೊಡುಗೆಯನ್ನು ಘೋಷಣೆ ಮಾಡಿದ್ದು, ಅದರ ಒಂದು ಅಂಗವಾಗಿ ತಮ್ಮ ಟೆಲಿಗ್ರಾಂ ಚಾನೆಲ್ ಸಬ್​ಸ್ಕ್ರೈಬರ್ಸ್​​ಗೂ ಅವರು ಗಿವ್​ಎವೇ ಘೋಷಿಸಿದ್ದು, 10 ಸಾವಿರ ಮಂದಿಗೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​ ತಮ್ಮ ಕಡೆಯಿಂದ ಉಚಿತವಾಗಿ ಕೊಡುವುದಾಗಿ ಹೇಳಿದ್ದರು.

ಈ ಯೋಜನೆಗೆ ಅವರು ಗಡುವು ವಿಧಿಸಿದ್ದು, ನ. 13ರ 9.30ಕ್ಕೆ 10 ಸಾವಿರ ಮಂದಿಗೆ ಉಚಿತವಾಗಿ ಟೆಲಿಗ್ರಾಂ ಸಬ್​ಸ್ಕ್ರಿಪ್ಷನ್ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಆ ಗಡುವು ಇದೀಗ ಮುಗಿದಿದ್ದು, 10 ಸಾವಿರ ಮಂದಿ ಪೈಕಿ ಈಗಾಗಲೇ 3 ಸಾವಿರಕ್ಕೂ ಅಧಿಕ ಮಂದಿ ಉಚಿತ ಕೊಡುಗೆ ಲಿಂಕ್ ಬಳಸಿಕೊಂಡಿದ್ದಾರೆ.

ನಿಮಗೂ ಬಂದಿರುತ್ತಾ? ಚೆಕ್ ಮಾಡಿಕೊಳ್ಳುವುದು ಹೇಗೆ?

ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​ ಡು ರೋವ್ ಕಡೆಯಿಂದ ಉಚಿತವಾಗಿ ಸಿಕ್ಕಿರುವ ಕುರಿತು ಕಂಡುಕೊಳ್ಳುವುದು ಸುಲಭ. ಡು ರೋವ್ ಅವರ ಟೆಲಿಗ್ರಾಂ ಚಾನೆಲ್​ಗೆ ಹೋಗಿ ಅಲ್ಲಿ 'ಗಿವ್​ಎವೇ' ಕುರಿತ ಮೆಸೇಜ್​ನಲ್ಲಿ ( ಆ ಲಿಂಕ್ ಇಲ್ಲಿದೆ.. https://t.me/durov/236) ಲರ್ನ್ ಮೋರ್ ಎಂಬುದನ್ನು ಕ್ಲಿಕ್ ಮಾಡಿದರೆ ಸಾಕು.

ಡು ರೋವ್ ಅವರ ಟೆಲಿಗ್ರಾಂ ಚಾನೆಲ್​ಗೆ ಸಬ್​ಸ್ಕ್ರೈಬ್ ಆಗಿರುವವರಿಗೆ ಮಾತ್ರ ಈ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಆರು ತಿಂಗಳವರೆಗೆ ಉಚಿತವಾಗಿ ಸಿಗಲಿದೆ. ನೀವು ಆ ಚಾನೆಲ್​ಗೆ ಸಬ್​ಸ್ಕ್ರೈಬ್ ಆಗಿದ್ದು, ಲರ್ನ್ ಮೋರ್ ಎಂಬಲ್ಲಿ ಹೋಗಿ ಕ್ಲಿಕ್ ಮಾಡಿದರೆ ಗಿಫ್ಟ್ ಬಗ್ಗೆ ತಿಳಿಯುತ್ತದೆ. ನೀವು ಆಯ್ಕೆ ಆಗಿದ್ದರೆ ನಿಮಗೆ ಉಚಿತ ಕೊಡುಗೆ ಲಿಂಕ್ ಸಿಗುತ್ತದೆ, ಇಲ್ಲದಿದ್ದರೆ ನೀವು ಆಯ್ಕೆ ಆಗಿಲ್ಲ ಎಂಬ ಸಂದೇಶ ಕಂಡುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net