More

    ರೂ. 89ರ ಐಪಿಒ ಷೇರಿಗೆ ರೂ. 70 ಪ್ರೀಮಿಯಂ: ಹೂಡಿಕೆದಾರರಿಗೆ ಲಾಭ ಮಾಡಿಕೊಳ್ಳಲು ಮಾರ್ಚ್​ 27ರವರೆಗೆ ಅವಕಾಶ

    ಮುಂಬೈ: ಮತ್ತೊಂದು ಐಪಿಒ ಬರುತ್ತಿದೆ. ಇದು ನಮನ್ ಇನ್-ಸ್ಟೋರ್‌ (Naman In-Store) ಐಪಿಒ ಆಗಿದೆ. ಮಾರ್ಚ್ 22 ರಂದು ಚಂದಾದಾರಿಕೆ ಶುರುವಾಗಿದ್ದು, ಮಾರ್ಚ್ 27ರವರೆಗೆ ತೆರೆದಿರುತ್ತದೆ. ಕಂಪನಿಯ ಸಾರ್ವಜನಿಕ ವಿತರಣೆಯ (ಐಪಿಒ) ಒಟ್ಟು ಗಾತ್ರ 25.35 ಕೋಟಿ ರೂ.

    ಈ ಐಪಿಒ ಈಗಾಗಲೇ ಬೂದು ಮಾರುಕಟ್ಟೆಯಲ್ಲಿ (ಗ್ರೇ ಮಾರ್ಕೆಟ್​) ಅಲೆಗಳನ್ನು ಸೃಷ್ಟಿಸುತ್ತಿದೆ. ಕಂಪನಿಯ ಷೇರುಗಳು ಗ್ರೇ ಮಾರ್ಕೆಟ್‌ನಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಪ್ರೀಮಿಯಂನೊಂದಿಗೆ ವಹಿವಾಟು ನಡೆಸುತ್ತಿವೆ. ಹೀಗಾಗಿ, ಕಂಪನಿಯ ಷೇರುಗಳು ರೂ 155 ಕ್ಕಿಂತ ಹೆಚ್ಚು ಬೆಲೆ ಪಟ್ಟಿ ಆಗಬಹುದು.

    ನಮನ್ ಇನ್-ಸ್ಟೋರ್ ಐಪಿಒ ಬೆಲೆ ಬ್ಯಾಂಡ್ ರೂ 84 ರಿಂದ 89 ಆಗಿದೆ. ಕಂಪನಿಯ ಷೇರುಗಳು ಗ್ರೇ ಮಾರ್ಕೆಟ್‌ನಲ್ಲಿ 70 ರೂ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ರೂ 89 ರ ಮೇಲಿನ ಬೆಲೆಯ ಬ್ಯಾಂಡ್‌ ತೆಗೆದುಕೊಂಡರೆ, ನಮನ್ ಇನ್-ಸ್ಟೋರ್‌ನ ಷೇರುಗಳು ರೂ 159 ರ ಆಸುಪಾಸಿನಲ್ಲಿ ಪಟ್ಟಿ ಮಾಡಬಹುದು. ಕಂಪನಿಯ ಷೇರುಗಳನ್ನು ಏಪ್ರಿಲ್ 2, 2024 ರಂದು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುವುದು.

    ಚಿಲ್ಲರೆ ಹೂಡಿಕೆದಾರರು ನಮನ್ ಇನ್-ಸ್ಟೋರ್ ಐಪಿಒನಲ್ಲಿ 1 ಲಾಟ್‌ಗೆ ಬಿಡ್ಡಿಂಗ್​ ಸಲ್ಲಿಸಬಹುದು. ಅಂದರೆ, ಕನಿಷ್ಠ 1600 ಷೇರುಗಳಿಗೆ (1 ಲಾಟ್​) ಬಿಡ್ಡಿಂಗ್​ ಮಾಡಬಹುದು. ಐಪಿಒ ಒಂದರಲ್ಲಿ 1600 ಷೇರುಗಳಿವೆ. ಅಂದರೆ, ಚಿಲ್ಲರೆ ಹೂಡಿಕೆದಾರರು ಕಂಪನಿಯ ಐಪಿಒದಲ್ಲಿ ಕನಿಷ್ಠ ರೂ 142400 ಹೂಡಿಕೆ ಮಾಡಬೇಕಾಗುತ್ತದೆ.

    ನಮನ್ ಇನ್-ಸ್ಟೋರ್ ಅನ್ನು 2010 ರಲ್ಲಿ ಪ್ರಾರಂಭಿಸಲಾಯಿತು. ಇದು ಚಿಲ್ಲರೆ ಪೀಠೋಪಕರಣಗಳು ಮತ್ತು ಫಿಟ್ಟಿಂಗ್ ಕಂಪನಿಯಾಗಿದ್ದು, ವಿವಿಧ ಕೈಗಾರಿಕೆಗಳು ಮತ್ತು ಔಟ್‌ಲೆಟ್‌ಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಮಾಡ್ಯುಲರ್ ಪೀಠೋಪಕರಣಗಳನ್ನು ತಯಾರಿಸುತ್ತದೆ. ಕಂಪನಿಯ ಉತ್ಪಾದನಾ ಘಟಕವು ಮಹಾರಾಷ್ಟ್ರದ ವಸೈನಲ್ಲಿದೆ. ಕಂಪನಿಯು ಮಹಾರಾಷ್ಟ್ರದ ಕಮಾನ್ ಮತ್ತು ಬೆಂಗಳೂರಿನಲ್ಲಿ ತಲಾ 1 ಗೋದಾಮುಗಳನ್ನು ಹೊಂದಿದೆ.

    ಭಾರತದ ಐಟಿ ಕಂಪನಿಗಳ ಷೇರುಗಳಲ್ಲಿ ರಕ್ತಪಾತ: ಏಕಾಏಕಿ ಬೆಲೆ ಕುಸಿತಕ್ಕೆ ಕಾರಣವೇನು?

    150ರಿಂದ 225 ರೂಪಾಯಿಗೆ ಏರಲಿದೆ ಷೇರು ಬೆಲೆ: ಟಾಟಾ ಸ್ಟಾಕ್​ ಕುರಿತು ತಜ್ಞರ ಭವಿಷ್ಯ

    1:10 ಸ್ಟಾಕ್ ವಿಭಜನೆ: 1:1 ಬೋನಸ್ ಷೇರು ಹಂಚಿಕೆ ಘೋಷಣೆ: ಕಾಂಡೋಮ್​ ಕಂಪನಿಯ ಸ್ಟಾಕ್​ ಬೆಲೆ ಗಗನಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts