More

    ಭಾರತದ ಐಟಿ ಕಂಪನಿಗಳ ಷೇರುಗಳಲ್ಲಿ ರಕ್ತಪಾತ: ಏಕಾಏಕಿ ಬೆಲೆ ಕುಸಿತಕ್ಕೆ ಕಾರಣವೇನು?

    ಮುಂಬೈ: ಶುಕ್ರವಾರ ಷೇರುಪೇಟೆಯು ಕಳಪೆ ಆರಂಭದ ನಂತರ ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದರೂ, ಐಟಿ ಷೇರುಗಳ ಸ್ಥಿತಿ ಕೆಟ್ಟದಾಗಿದೆ. HCL Tech, TCS, Wipro, Infosys ಮತ್ತು LTIM ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಐಟಿ ಷೇರುಗಳ ಕುಸಿತಕ್ಕೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

    ನಿಫ್ಟಿಯಲ್ಲಿ ಎಚ್​ಸಿಎಲ್​ ಟೆಕ್ ಟಾಪ್ ಲೂಸರ್ ಆಗಿದೆ. ಬೆಳಗಿನ ಅವಧಿಯಲ್ಲಿ ಶೇ. 3.25ರಷ್ಟು ಕುಸಿದು 1543.90 ರೂ.ಗೆ ತಲುಪಿದೆ. ಎಲ್ ಆಂಡ್ ಟಿ ಮೈಂಡ್ ಟ್ರೀ ಶೇ. 2.88ರಷ್ಟು ಕುಸಿತ ಕಂಡು, 5011.05 ರೂ.ಗೆ ತಲುಪಿದೆ. ವಿಪ್ರೋ ಶೇ. 2.52ರಷ್ಟು ಕುಸಿದು 487.85 ರೂ. ಮುಟ್ಟಿದೆ. ಇನ್ಫೋಸಿಸ್​ ಶೇ. 2.02ರಷ್ಟು ಕುಸಿತ ಕಂಡು 1523.25 ರೂ.ಗೆ ಬಂದಿದೆ.

    ಟಿಸಿಎಸ್ ಶೇ. 1.16 ಕುಸಿತ ಕಂಡಿದ್ದು, 3926.95 ರೂ. ತಲುಪಿದೆ. ಇದಲ್ಲದೆ, ಟೆಕ್ ಮಹೀಂದ್ರಾ, ಎಂಫಾಸಿಸ್, ಪರ್ಸಿಸ್ಟೆಂಟ್, ಎಲ್‌ಟಿಟಿಎಸ್, ಕೋಫೋರ್ಜ್ ಕೂಡ ಟಾಪ್ ಲೂಸರ್‌ಗಳ ಪಟ್ಟಿಯಲ್ಲಿವೆ.

    ಪ್ರಮುಖ ಜಾಗತಿಕ ಐಟಿ ಕಂಪನಿಯಾದ ಆಕ್ಸೆಂಚರ್ ಷೇರುಗಳ ಬೆಲೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಶೇಕಡಾ 9 ಕ್ಕಿಂತ ಹೆಚ್ಚು ಕುಸಿತವಾಗಿದೆ. ಈ ಕಾರಣದಿಂದಾಗಿ, ಭಾರತೀಯ ಐಟಿ ಕಂಪನಿಗಳಾದ ವಿಪ್ರೋ ಮತ್ತು ಇನ್ಫೋಸಿಸ್‌ನ ಎಡಿಆರ್ (ಅಮೆರಿಕನ್ ಡಿಪಾಸಿಟರಿ ರಶೀದಿ) ಷೇರುಗಳು ಕುಸಿದಿವೆ. ಆಕ್ಸೆಂಚರ್ ಕಂಪನಿಯ ಆದಾಯದಲ್ಲಿ ಗಮನಾರ್ಹ ಕುಸಿತವಾಗಿದೆ. ಹೀಗಾಗಿ, ಈ ಕಂಪನಿಯ ಷೇರುಗಳ ಬೆಲೆ ಕುಸಿತ ಕಂಡಿದೆ. ಈ ಬೆಳವಣಿಗೆಯು ಭಾರತೀಯ ಐಟಿ ಷೇರುಗಳಿಗೂ ಹೊಡೆತ ನೀಡಿದೆ.

    ನಿಫ್ಟಿ ಐಟಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ ಶೇ, 3ರಷ್ಟು ಕುಸಿದಿದೆ. ಐಟಿ ಷೇರುಗಳ ಈ ಮಾರಾಟವು ಭಾರತೀಯ ಷೇರು ಮಾರುಕಟ್ಟೆಯನ್ನು ಕೆಂಪು ಬಣ್ಣಕ್ಕೆ ತಿರುಗಿಸಿತು. ಬೆಳಗ್ಗೆ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರಲ್ಲೂ ದೊಡ್ಡ ಕುಸಿತ ಕಂಡುಬಂದಿದೆ.

    ಪ್ರಾಫಿಟ್‌ಮಾರ್ಟ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಅವಿನಾಶ್ ಗೋರಕ್ಷಕರ್ ಮಾತನಾಡಿ, ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಆಕ್ಸೆಂಚರ್ ಷೇರು ಬೆಲೆ ಬಿದ್ದಿತು. ಇದು ಇನ್ಫೋಸಿಸ್ ಮತ್ತು ವಿಪ್ರೊದ ಎಡಿಆರ್ ಷೇರುಗಳಲ್ಲಿನ ದೌರ್ಬಲ್ಯಕ್ಕೆ ಕಾರಣವಾಯಿತು. ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಎಡಿಆರ್ ಷೇರುಗಳ ಕಾರ್ಯಕ್ಷಮತೆಯ ಪರಿಣಾಮವು ಭಾರತೀಯ ಐಟಿ ಷೇರುಗಳ ಮೇಲಾಗಿದೆ. ಈ ಕಾರಣದಿಂದಾಗಿ, ಭಾರತೀಯ ಐಟಿ ಷೇರುಗಳು ಶುಕ್ರವಾರ ಬೆಳಗಿನ ವ್ಯವಹಾರಗಳಲ್ಲಿ ನಷ್ಟದಲ್ಲಿ ವಹಿವಾಟು ನಡೆಸುತ್ತಿವೆ ಎಂದು ಹೇಳಿದ್ದಾರೆ.

    ಈ 5 ಸ್ಟಾಕ್‌ಗಳ ಬೆಲೆ ಈಗ ಅಗ್ಗ ಇದೆ; ಲೋಕಸಭೆ ಚುನಾವಣೆ ಮೊದಲು ಲಾಭಕ್ಕಾಗಿ ಖರೀದಿಸಲು ತಜ್ಞರ ಸಲಹೆ

    150ರಿಂದ 225 ರೂಪಾಯಿಗೆ ಏರಲಿದೆ ಷೇರು ಬೆಲೆ: ಟಾಟಾ ಸ್ಟಾಕ್​ ಕುರಿತು ತಜ್ಞರ ಭವಿಷ್ಯ

    1:10 ಸ್ಟಾಕ್ ವಿಭಜನೆ: 1:1 ಬೋನಸ್ ಷೇರು ಹಂಚಿಕೆ ಘೋಷಣೆ: ಕಾಂಡೋಮ್​ ಕಂಪನಿಯ ಸ್ಟಾಕ್​ ಬೆಲೆ ಗಗನಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts